'ವಿಶ್ವಕಪ್ ಫುಟ್ ಬಾಲಿ' ನ ಮೊದಲಸುತ್ತಿನ ರೊಚಕ ಕ್ಷಣಗಳ ಅಂತ್ಯ ! ಇಂದಿನಿಂದ ೨ ನೆ ಸುತ್ತು !
ವಿಶ್ವಕಪ್ ಸಾಕರ್ : ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಿದ ಆಟಗಳು:
'ಎಚ್' ಗುಂಪು : ಉಕ್ರೆನ್ x ಟ್ಯುನಿಷಿಯ (೧-೦)
'ಎಚ್' ಗುಂಪು : ಸೌದಿ ಅರೆಬಿಯ x ಸ್ಪೈನ್ (೦-೧)
'ಜಿ' ಗುಂಪು : ಟೋಗೊ x ಫ್ರಾನ್ಸ್ (೦-೨)
'ಜಿ' ಗುಂಪು : ಸ್ವಿಟ್ ಝರ್ ಲ್ಯಾಂಡ್ x ದ.ಕೊರಿಯ (೨-೦)
ಇಂದು, ಶನಿವಾರ,೨೪, ಜೂನ್ ೨೦೦೬ ರದ ೨ ನೇ ಸುತ್ತಿನ ಆಟದಲ್ಲಿ ಭಾಗವಹಿಸುವ ತಂಡಗಳು:
೧. ಜರ್ಮನಿ x ಸ್ವೀಡನ್ (ಮ್ಯುನಿಕ್ ನಲ್ಲಿ) ವೇಳೆ: ೨೦-೩೦ (ಐ.ಎಸ್.ಟಿ)
೨. ಅರ್ಜೆಂಟೈನ x ಮೆಕ್ಸಿಕೊ (ಲಿಪ್ ಝಿಗ್ ನಲ್ಲಿ ) ವೇಳೆ: ೦೦-೩೦ (ಐ.ಎಸ್.ಟಿ)
ಎರಡನೆಯ ನೇ ಸುತ್ತಿನ ಆಟಗಳ ಬಗ್ಗೆ :
ಎರಡನೆಯ ಸುತ್ತಿನ ಸೆಣೆಸಾಟಕ್ಕೆ ಸಜ್ಜು ಗೊಳ್ಳುತ್ತಿರುವ ತಂಡಗಳು ಈಗಾಗಲೆ ತಂತ್ರಗಳನ್ನು ಸಿದ್ಧ ಪಡಿಸುವಲ್ಲಿ ಮಗ್ನವಾಗಿವೆ ! ಈಗಿನಂತೆಯೇ ಮುಂದೆಯೂ ಅತ್ಯಂತ ಹುರುಪಿನಿಂದ ಆಡುವುದೇ ಎಲ್ಲಾ ಸಮಸ್ಯೆಗಳಿಗು ಪರಿಹಾರ ! "ಸ್ಪರ್ಧಾತ್ಮಕ ನಿಲುವು " ಪ್ರತಿ ಹಂತದಲ್ಲು, ಪ್ರತಿ ಕಾದಾಳುಗಳಿಗೂ ಅತ್ಯವಶ್ಯಕ.
ಅತಿಥೇಯ ಜರ್ಮನಿ 'ಎ' ಗುಂಪಿನಿಂದ ಅಂತಿಮ ೧೬ರ ಘಟ್ಟ ಮುಟ್ಟಿದೆ. ಗುಂಪಿನ ಮೊದಲ ಸ್ಥಾನ ಪಡೆದಿರುವ ಇದರ ಎದುರಾಳಿ ಸ್ವೀಡನ್ ('ಬಿ') ರನ್ನರ್ ಅಪ್ ಆಗಿರುವ ಇಕ್ವೆಡಾರ್ ಗೆ ಎದುರಾಳಿ ಇಂಗ್ಲೆಂಡ್ ('ಬಿ').
ಪೊಲೆಂಡ್, ಕೊಸ್ಟರಿಕ ನಿರ್ಗಮಿಸಿವೆ.
'ಬಿ' ಗುಂಪಿನಲ್ಲಿ ಟ್ರಿನಿಡಾಡ್ , ಟ್ಯೊಬಾಗೊ ಹಾಗು ಪರಗ್ವೆ ನಿರ್ಗಮಿಸಿವೆ. ಅರ್ಜೆಂಟೈನ ಮತ್ತು ನೆದರ್ ಲ್ಯಾಂಡ್ಸ್ 'ಸಿ' ಗುಂಪಿನಲ್ಲಿ ಕ್ರಮವಾಗಿ, ಮೊದಲ ಮತ್ತು ಎರಡನೆಯ ಸ್ಥಾನ ಪಡೆದಿದ್ದು, ಇವುಗಳ ಎದುರಾಳಿ ಮೆಕ್ಸಿಕೊ ('ಡಿ')ಮತ್ತು ಪೊರ್ತುಗಾಲ್ ('ಡಿ')
'ಇ' ಗುಂಪಿನಲ್ಲಿ ಐವರಿ ಕೊಸ್ಟ್ , ಸರ್ಬಿಯ, ಮಾಂಟೆನೆಗ್ರೋ ಹೊರನಡೆದಿವೆ.
ಇಟಲಿ ಘಾನ ತಂಡಗಳು 'ಇ' ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ.ಎರಡನೆಯ ಸುತ್ತಿನಲ್ಲಿ ಇವು ಆಷ್ಟ್ರೇಲಿಯ('ಎಫ್') ಮತ್ತು ಬ್ರೆಸಿಲ್ ('ಎಫ್') ತಂಡದೊಂದಿಗೆ ಹೋರಾಡಲಿವೆ.
ಚೆಕ್ ಗಣರಾಜ್ಯ ಹಾಗೂ ಅಮೆರಿಕ, 'ಇ' ಗುಂಪಿನಿಂದ ಹೊರಗುಳಿದಿವೆ. 'ಎಫ್' ಗುಂಪಿನಿಂದ ಹೊರಗುಳಿದ ತಂಡವೆಂದರೆ, ಕ್ರೊವೇಷಿಯ ಮತ್ತು ಜಪಾನ್.
ಕ್ರೊವೇಷಿಯದ ಆಟ, ಮೊದಲ ಹಂತಗಳಲ್ಲಿ ಎಷ್ಟು ಸೊಗಸಾಗಿತ್ತು ! ವಿಧಿ ಇಲ್ಲ- ಇದು ವಿಶ್ವ ಕಪ್ ! ಅತಿ ಗಟ್ಟಿಗನಿಗೆ ಮಾತ್ರ ಇಲ್ಲಿ ವಿಜಯ !