ವಿಶ್ವವಿದ್ಯಾಲಯಗಳೊಳಗೂ ನಡೆಯುತ್ತಿದೆ ರಾಜಕೀಯ! ಸೋಮನಾಥ ಕುಡಿತಿನಿ ಅವರ ಪ್ರತಿಕ್ರಿಯೆ

ವಿಶ್ವವಿದ್ಯಾಲಯಗಳೊಳಗೂ ನಡೆಯುತ್ತಿದೆ ರಾಜಕೀಯ! ಸೋಮನಾಥ ಕುಡಿತಿನಿ ಅವರ ಪ್ರತಿಕ್ರಿಯೆ

ಬರಹ

ವಿಶ್ವವಿದ್ಯಾಲಯಗಳೊಳಗೂ ನಡೆಯುತ್ತಿದೆ ರಾಜಕೀಯ! ಎಂಬ ಶೀರ್ಷಿಕೆಯಡಿಯಲ್ಲಿ ನಾನು ಪ್ರಾರಂಭಿಸಿದ ಚರ್ಚೆಗೆ ವಿಷಯದ ಕೇಂದ್ರಬಿಂದುವಾದ ಶ್ರೀ ಸೋಮನಾಥ ಕುಡಿತಿನಿ ಅವರೇ ಸ್ಪಷ್ಟೀಕರಣವನ್ನು ನೀಡಿರುತ್ತಾರೆ. ಕ್ರೀಡಾ ಸ್ಫೂರ್ತಿಯಿಂದ ಚರ್ಚೆಯಲ್ಲಿ ಭಾಗವಹಿಸಿ ಸ್ಪಷ್ಟೀಕರಣ ನೀಡಿದ ಶ್ರೀ ಕುಡಿತಿನಿ ಅವರನ್ನು ಅಭಿನಂದಿಸುತ್ತ ಆ ಸ್ಪಷ್ಟೀಕರಣವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.


***


ನಾನು ಸೋಮನಾಥ ಕುಡಿತಿನಿ, ಕಳೆದ 17 ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇದುವರೆಗೆ ನಾನು ಪ್ರತಿನಿಯೋಜನೆ ಮೇರೆಗೆ ಪ್ರವಾಸೋದ್ಯಮ, ಜವಳಿ, ವಿಮಾನಯಾನ ಮತ್ತು ಮೂಲಭೂತ ಸೌಕರ್ಯ ಸಚಿವರ ಆಪ್ತ ಸಹಾಯಕರಾಗಿ, ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕರಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿರುತ್ತೇನೆ.

1. ದಿನಾಂಕ 12.10.2009 ರಿಂದ 04.11.2009ರ ವರೆಗೆ 24 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ವಿಶ್ವವಿದ್ಯಾಲಯವು ನನಗೆ ಅನ್ಯಕಾರ್ಯ ನಿಮಿತ್ತ ರಜೆಯನ್ನು ಮಂಜೂರು ಮಾಡಿತ್ತು. ಈ ಅವಧಿಯಲ್ಲಿ ದಿನಾಂಕ 20.10.2009ರಂದು ನಾನು ಕಾರ್ಯನಿರ್ವಹಿಸುತ್ತಿದ್ದ ಕನ್ನಡ ಭಾಷಾಧ್ಯಯನ ವಿಭಾಗಕ್ಕೆ ಭೇಟಿ ನೀಡಿದ್ದ ಕುಲಸಚಿವ ಶ್ರೀ ಎಸ್.ಎಸ್.ಪೂಜಾರ ಅವರು, ಕಾರಣ ಕೇಳುವ ನೋಟೀಸು ಜಾರಿ ಮಾಡಿದ್ದರು. ಅದೇ ನೋಟೀಸಿನಲ್ಲಿ "ಗೈರುಹಾಜರಾಗುವ ಮೂಲಕ ಕರ್ತವ್ಯಲೋಪವೆಸಗಿದ್ದೀರಿ, 24 ಗಂಟೆಗಳ ಒಳಗಾಗಿ ಉತ್ತರಿಸಬೇಕು, ಇಲ್ಲದಿದ್ದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು" ಎಂದಿದ್ದರು. ಅದಕ್ಕೆ ಉತ್ತರವಾಗಿ ನಾನು ಕುಲಪತಿಯವರಿಗೆ ಮೇಲ್ಮನವಿಯನ್ನು ಸಲ್ಲಿಸಿ, 24 ದಿನಗಳ ಅಧಿಕೃತ ರಜೆ ಪಡೆದುಕೊಂಡು ವಿದೇಶಕ್ಕೆ ತೆರಳಿದ್ದ ನನಗೆ 24 ಗಂಟೆಗಳ ಒಳಗಾಗಿ ಉತ್ತರಿಸಲು ಸಾಧ್ಯವಾಗಿಲ್ಲ ಮತ್ತು ರಜೆ ಮಂಜೂರು ಮಾಡಿರುವ ಅಧಿಕಾರಿಯೇ ನೋಟೀಸು ನೀಡುವುದು ಕರ್ತವ್ಯಲೋಪವಾಗುತ್ತದೆ ಎನ್ನುವ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು. ಇದು ಒಂದು ಕಡೆಯ ಸಂಗತಿ.

2. ಇನ್ನೊಂದು ಕಡೆಯ ಸಂಗತಿ ಎಂದರೆ ಶ್ರೀ ಎಸ್.ಎಸ್.ಪೂಜಾರ ಇವರು ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ. ವಿದ್ಯಾರ್ಥಿಯೂ ಹೌದು; ಕುಲಸಚಿವರೂ ಹೌದು. ತಮ್ಮ ಅವಧಿಯಲ್ಲಿ ಇವರು ಕಚೇರಿ ವಾಹನವನ್ನು ಪಿಎಚ್..ಡಿ. ಸಂಶೋಧನಾ ಕ್ಷೇತ್ರಕಾರ್ಯಕ್ಕೆ ಬಳಸಿರುವುದು; ಕಚೇರಿ ಅವಧಿಯಲ್ಲಿ ವಿ.ವಿ.ಯ ಗಣಕಯಂತ್ರ, ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು 215 ಪುಟಗಳ ತಮ್ಮ ಸಂಶೋಧನಾ ವರದಿಯನ್ನು ಸಿದ್ಧಪಡಿಸಿರುವುದು; ಕಮ್ಮಟದಲ್ಲಿ 6 ದಿನಗಳ ಕಾಲ ವಿದ್ಯಾರ್ಥಿಯಾಗಿ ಭಾಗವಹಿಸಿ, ಕುಲಸಚಿವರಾಗಿಯೂ ಕಡತ ಪರಿಶೀಲಿಸಿರುವುದು; ಅಧ್ಯಯನಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ತ ಸಲ್ಲಿಸುವ ಬದಲು ಸತ್ಯ ಮರೆಮಾಚಿ ಈ ಹಿಂದೆ ಸೇವೆ ಸಲ್ಲಿಸುತ್ತಿಂದ ವಿಮ್ಸ್ ಸಂಸ್ಥೆಯಿಂದ ಸಲ್ಲಿಸಿರುವುದು; ಈ ರೀತಿಯ ಅಧಿಕಾರ ದುರುಪಯೋಗದ ಸಂಗತಿಗಳನ್ನು ದಾಖಲೆ ಸಮೇತ ಕುಲಪತಿಯವರಿಗೆ ಲಿಖಿತವಾಗಿ ಸಲ್ಲಿಸಲಾಗಿತ್ತು. ಶ್ರೀ ಎಸ್.ಎಸ್.ಪೂಜಾರ ಅವರು ಈ ಸಂಗತಿಗಳಿಂದ ಹೊರಬರಲು ಮತ್ತು ನನ್ನ ಮುಂದುವರಿಕೆಯನ್ನು ಹತ್ತಿಕ್ಕಲು ಮೇಲೆ 1ರಲ್ಲಿ ವಿವರಿಸಿದ ನೆಪವೊಡ್ಡಿ ದಿನಾಂಕ 13.11.2009ರಂದು ನನ್ನನ್ನು ಅಮಾನತ್ತುಗೊಳಿಸಲಾಯಿತು. ಕಳೆದ 17 ವರ್ಷಗಳ ನನ್ನ ಸೇವೆಯಲ್ಲಿ ಇಲ್ಲದ ದುರ್ನಡತೆ ಅಥವಾ ಯಾವುದೇ ಚಿಕ್ಕ ದೂರು ಏಕಾ ಏಕಿ ಹುಟ್ಟಲು ಸಾಧ್ಯವೇ?

ಕನ್ನಡ ವಿಶ್ವವಿದ್ಯಾಲಯದ ಪರಿನಿಯಮ 43 ರ ಅಡಿಯಲ್ಲಿ ಅವರಿಗೆ ದತ್ತವಾಗಿರುವ ಅಧಿಕಾರವನ್ನ ಬಳಸಿ ಅವರು ಅಮಾನತ್ತು ಮಾಡಿದ್ದರು. ಯಾವುದೇ ದಂಡನೆ ವಿಧಿಸುವ ಮುನ್ನ ಬಾಧಿತನಾಗುವ ವ್ಯಕ್ತಿಗೆ ತನ್ನ ಹೇಳಿಕೆಯನ್ನು ನೀಡಲು ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಅದರಡಿಯಲ್ಲೇ ಇರುವ ನಿಯಮವನ್ನು ಉಲ್ಲಂಘಿಸಿರುವ ಕುಲಸಚಿವರ ಕ್ರಮದ ವಿರುದ್ಧ ಕುಲಪತಿಯವರು ದತ್ತವಾದ ಅಧಿಕಾರವನ್ನು ಬಳಸಿ ನನ್ನ ಅಮಾನತ್ತು ಆದೇಶವನ್ನು ದಿನಾಂಕ 13.11.2009 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಿಂಪಡೆದಿರುತ್ತಾರೆ.

ಶ್ರೀ ಪೂಜಾರ ಇವರು ಕಚೇರಿಯಲ್ಲಿ ಬಳಸುವ ಹೊಲಸು ಭಾಷಾ ಪ್ರಯೋಗ, ಎಸಗುತ್ತಿರುವ ಬ್ರಷ್ಟಾಚಾರ (ನಿರಾಧಾರ ಎಂಬುದು ಅವರ ವಾದ; ಬದುಕುವ ರೀತಿ ಮುಖ್ಯ) ಕುರಿತು ಈ ವರೆಗಿನ ಅವರು ಸೇವೆ ಸಲ್ಲಸಿದ ಇಲಾಖೆಗಳಿಂದ ತಿಳಿದುಕೊಳ್ಳಬಹುದು. ಮಹಿಳೆಯ ಮೇಲೆ ಎಸಗಿದ ದೌರ್ಜನ್ಯದ ಆರೋಪವು ದೃಢಪಟ್ಟ ಹಿನ್ನೆಲೆಯಲ್ಲಿ ಘನತೆವೆತ್ತ ರಾಜ್ಯಪಾಲರು ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ನಿರ್ದೇಶಿಸಿದ್ದಾರೆ. ಇವು ಇಲ್ಲಿ ಅಪ್ರಸ್ತುತ ಮತ್ತ ಸೇಡಿನ ಸಂಗತಿಗಳೆನಿಸಬಹುದು; ವಾಸ್ತವಗಳು. ತಮಗೆ ತಿಳಿದಿರಲಿ ಎಂಬ ಕಾರಣಕ್ಕೆ ನೀಡಲಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಹನಶೀಲರು ಇರುವುದರಿಂದ ಅವರು ಇಷ್ಟು ದಿನಗಳ ಕಾಲ ಮತ್ತು ಯಾವುದೇ ಗೊಂದಲಗಳಿಲ್ಲದೆ ಸೇವೆ ಸಲ್ಲಿಸಲು ಅವಕಾಶ ಸಾಧ್ಯವಾಯಿತು.

ತಮಗೆ ಇನ್ನಾವುದೇ ಸಂಶಯಗಳಿದ್ದರೆ, 900 800 1966 ಸಂಖ್ಯೆಯ ನನ್ನ ಜಂಗಮವಾಣಿಗೆ ಕರೆ ಮಾಡಿ ಮುಕ್ತವಾಗಿ ಚರ್ಚಿಸಬಹುದು; ಸದಾ ಸ್ವಾಗತ. ಆರೋಪಗಳನ್ನು ಸ್ಪೂರ್ತಿದಾಯಕವಾಗಿ ಸ್ವೀಕರಿಸುತ್ತೇನೆ. ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟ ತಮಗೆ ಹೃತ್ಪೂರ್ವಕ ಧನ್ಯವಾದಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet