ವಿಶ್ವವಿದ್ಯಾಲಯಗಳೊಳಗೂ ನಡೆಯುತ್ತಿದೆ ರಾಜಕೀಯ!
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿದ್ದ ಕುಡತಿನಿ ಎನ್ನುವವರು ಸಚಿವ ಶ್ರೀ ರಾಮುಲು ಅವರಿಗೆ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದವರು. ಇತ್ತ ಕರ್ನಾಟಕದ ಬಿ.ಜೆ.ಪಿ.ಯಲ್ಲಿ ಈಸ್ಟ್ ಮನ್ ಕಲರ್ ಸಿನಿಮಾ ನಡೆಯುತ್ತಿದ್ದಾಗ, ಕುಡತಿನಿಯವರನ್ನು ದುರ್ನಡತೆ ಆಧಾರದ ಮೇಲೆ ಅಮಾನತಿನಲ್ಲಿಡಲಾಗಿತ್ತು. ಅದಾಗಿ ಒಂದೇ ವಾರದಲ್ಲಿ ಅಮಾನತನ್ನು ವಾಪಸ್ಸು ತೆಗೆದುಕೊಳ್ಲಲಾಗಿದೆ. ಆತ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಆದರೆ ಆತನ ಅಮಾನತ್ತಿಗೆ ಸಹಿ ಹಾಕಿದ್ದ ಕುಲಸಚಿವ ಪೂಜಾರ್ ಎನ್ನುವವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ! ಕುಡತಿನಿ ಏಕೆ ಅಮಾನತ್ತಾಗಿದ್ದರು? ಈಗ ಹೇಗೆ ದೋಷಮುಕ್ತರಾದರು ಎಂಬುದನ್ನು ಹೇಳುವವರು ಮಾತ್ರ ಯಾರೂ ಇಲ್ಲ.
ಇತ್ತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಮತ್ತು ಕುಲಸಚಿವರ ಜಾತಿಜಗಳ ರಾಜಕೀಯ ಬಣ್ಣಪಡೆದುಕೊಂಡು ಬೀದಿಗೆ ಬಂದಿದೆ. ಉನ್ನತ ಶಿಕ್ಷಣ ಸಚಿವರು ಕುಲಸಚಿವರನ್ನು ನೇಮಿಸಿದರೆ, ಮುಖ್ಯಮಂತ್ರಿ ಅದನ್ನು ತಡೆಯಿಡಿದಿದ್ದಾರೆ. ಅಷ್ಟರಲ್ಲಿ ಕುಲಪತಿ-ಕುಲಸಚಿವರ ನಡುವೆ ಜಾತಿಯ ರಾಡಿ ಎದ್ದುಬಿಟ್ಟಿದೆ.
ಇವು ಒಂದೆರಡು ಸ್ಯಾಂಪಲ್ಲುಗಳಷ್ಟೇ?
ಇವೆಲ್ಲದರ ನಡುವೆ ಕಳೆದ ವಾರ ರಾಜ್ಯಪಾಲರು ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದಿದ್ದಾರೆ!
ಜಗತ್ತಿನ ಅಗ್ರಪಂಕ್ತಿಯ ವಿ.ವಿ.ಗಳಲ್ಲಿ ಭಾರತದ ಒಂದೂ ವಿ.ವಿ. ಸ್ಥಾನ ಪಡೆದಿಲ್ಲ ಎಂದು ಕೊರಗುವವರ ನಡುವೆ ಅದೇ 'ನಲಂದ' 'ತಕ್ಷಶಿಲಾ' ಹೆಸರು ಹೇಳಿ ಬೆನ್ನು ತಟ್ಟಿಕೊಳ್ಳುವವರೂ ಇದ್ದಾರೆ.
ಇವುಗಳೆಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.