ವಿಶ್ವಾಸಹೀನ ಪಕ್ಷಗಳಮೆಲೆ ವಿಶ್ವಾಸವಿಡುವ ಅನಿವಾರ್ಯ!

ವಿಶ್ವಾಸಹೀನ ಪಕ್ಷಗಳಮೆಲೆ ವಿಶ್ವಾಸವಿಡುವ ಅನಿವಾರ್ಯ!

ಬರಹ

 ಲೋಕಸಭೆ ಚುನಾವಣೆ ಬರುತ್ತಿದೆ. ಈಚಿನ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೊಕ್ಕಿನ ಪೊಗರು ಪ್ರದರ್ಶಿಸಿವೆ; ಪ್ರತ್ಯೇಕ ತತ್ವ-ಸಿದ್ಧಾಂತವನ್ನೂ, ಸ್ವಂತಿಕೆಯ ನಿಲವನ್ನೂ ಕಳೆದುಕೊಂಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಹೆಚ್ಚು-ಹೆಚ್ಚು ನಿರ್ವೀರ್ಯವಾಗುತ್ತಾ ಸಾಗಿದ್ದು, ಬರಲಿರುವ ಲೋಕಸಭೆ, ಅಬದ್ಧ, ಅಸಂಬದ್ಧ ಕಲಸುಮೇಲೋಗರವಾಗು ಆತಂಕ ಕಾಡುತ್ತಿದೆ.
 ದೊಡ್ಡ ಹೆಸರಿನ ಪಕ್ಷಗಳು ಇನ್ನದರೂ ಭ್ರಮಾಲೋಕದಿಂದ ಹೊರಬರಬಾರದೇ? ಪ್ರಜಾಸತ್ತೆ ಬಹುಮತದ ಪ್ರಾತಿನಿಧ್ಯ ಎನ್ನುವುದು ನಿಜ. ಆದರೆ ಬಿಜೆಪಿ, ಅದನ್ನು ’ಹಿಂದೂ ಬಹುಮತ’ ಎಂದು ಬಿಂಬಿಸಿತು. ಅದರಲ್ಲೂ ಆ ಪಕ್ಷದ ಒಂದು ಭಾಗವಂತೂ, ಅಲ್ಪಸಂಖ್ಯಾತರನ್ನು ದ್ವೇಷಿಸುವುದೇ ಬಹುಮತದ ಸಾಧನೆ  ಎಂಬ ಅತಿರೇಕ ತೋರಿತು. ಇದರಿಂದ ’ಅಲ್ಪಸಂಖ್ಯಾತರ ಹಿತೈಷಿ, ತಾನು’ ಎಂಬ ಕಾಂಗ್ರೆಸಿನ ನಾಟಕಕ್ಕೆ ಸಮರ್ಥನೆಯೇ ಸಿಕ್ಕಿಬಿಟ್ಟಿತು!
 ಇದೆರಡೂ ಅಪಪ್ರಚಾರವೇ. ಇಂದಿನ ಪೀಳಿಗೆಯ ಭಾರತೀಯ ಮುಸ್ಲಿಮರಾಗಲೀ, ಕ್ರಿಶ್ಚಿಯನ್ನರಾಗಲೀ ಯಾರೂ ತುರುಷ್ಕ, ಅರಬ್ಬೀ ಅಥವಾ ರೋಮನ್ ಮೂಲದವರಲ್ಲ. ಅವರೆಲ್ಲಾ ಜನಾಂಗೀಯವಾಗಿ, ಇತರ ಹಿಂದೂ ಪಂಗಡಗಳಷ್ಟೇ ಭಾರತೀಯರು!
 ನಮಗೀಗ ದೂರದರ್ಶಿತ್ವದ ವಿವೇಕಶಾಲೀ ನಾಯಕರ ಅಗತ್ಯವಿದೆ. ಆದರೆ ಎರಡೂ ಕಡೆ ವಯಸ್ಕ ಅರಳೂ-ಮರಳರನ್ನೋ, ಲೋಕಜ್ಞಾನವಿಲ್ಲದ ಬಾಲವಟುಗಳನ್ನೋ ಪ್ರಧಾನಿ ಹುದ್ದೆಯ ವಾರಸುದಾರೆಂದು ಬಿಂಬಿಸುತ್ತಿರುವುದು ದುರದೃಷ್ಟಕರವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet