ವಿಶ್ವ ಕಪ್ ರೋಮಾಂಚನ
ಬರಹ
ವಿಶ್ವ ಕಪ್ ರೋಮಾಂಚನ
ಒದ್ದರೋ ಹುಡುಗರು ಸೇರಿ ಚೆಂಡಿಗೆ
ಬಿದ್ದರೋ ಗುದ್ದಿ ಕಾಲಿಗೆ ಕಾಲು ತಾಗೆ
ಎದ್ದರೋ ಎದುರಾಳಿ ದಾಳಿಗೆ ಸೆಟೆದು
ಗೆದ್ದರೋ ಪರಿಶ್ರಮ ಕೌಶಲ ಮೆರೆದು
ಕದ್ದರೋ ವಿಶ್ವ ಜನ ಮನ ಕ್ಷಣ ಕ್ಷಣ
ಪೆದ್ದರೋ ನೋಡದವರು ಪ್ರತಿ ದಿನ!
ಗೋಪೀನಾಥ ರಾವ್