ವಿಶ್ವ ಪಥವ ಸೇರತೇವ
ಕವನ
ಉಳಿಸೆ ಉಳಿಸತೇವ ಉಳಿಸೆ ಉಳಿಸತೇವ
ನಾಡ ಉಳಸತೇವ , ಕನ್ನಡ ನಾಡಿನ ಕಂಪನು ನಾವು ಎತ್ತಿ ಹಿಡಿಯುತೇವ,ಅದನ್ನ ಜತನ ಮಾಡತೇವ
ಗುಡಿ ಚರ್ಚು ಮತ್ತು ಮಸೀದಿ ಇಲ್ಲದ
ನಾಡ ಬೆಳಸತೇವ,ಇವನಾರವ ಇವನಾರವನೆನ್ನದ ಬೀಜ ಬಿತ್ತತೇವ
ಬಿತ್ತಿ ಫಲವ ಉಣ್ಣತೇವ
ಜಾತಿ ಧರ್ಮಗಳ ಕಟ್ಟಳೆ ಮೀರಿ
ಮನುಜರಾಗತೇವ,
ಬುದ್ದ ಬಸವ ಬಾಬಾ ಸಾಹೇಬರ ಚರಿತೆ
ಓದತೇವ, ವಿಶ್ವ ಪಥವ ಸೇರತೇವ.
ಮೌಢ್ಯವಿಲ್ಲದ, ಭಯ ಬೆಳಸದ
ದೇವರೊಪ್ಪುತೇವ, ಕಾಯವೇ ಕೈಲಾಸವೆಂದು
ಜೀವ ಸವೆಯ ಬಸಳಸತೇವ
ಶಿವನ ಕಾಯ ಉಳಸತೇವ
ಜ್ಞಾನದ ಬಲದ ಬೆಳಕಿನಿಂದ
ಅಜ್ಞಾನ ಕಳೆಯುತೇವ
ಸಕಲ ಶಾಸ್ತ್ರ,ಪುರಾಣಗಳ ನಾವು
ಕಿತ್ತಿ ಬಿಸುಟುತೇವ, ಜ್ಞಾನದ ಶಿಶುಗಳಾಗುತೇವ
ಗಾಂಧಿಯ ಸಂಯಮ, ಭಗತರ ಧೈರ್ಯ
ನಾವು ಮೆಚ್ಚತೇವ, ಪುಲೆ ದಂಪತಿಗಳ
ಆದರ್ಶವ ನೆಚ್ಚಿ ನಡೆಯುತೇವ
ಪೆರಿಯಾರರೆಡೆಗೆ ಹೋಗತೇವ.
-ವಿಶ್ವಾರಾಧ್ಯ ಸತ್ಯಂಪೇಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್