ವಿಶ್ವ ಮಾನವ ಸಿದ್ಧಾಂತ!
ಕವನ
ಸಿದ್ಧಾಂತಗಳ ಹಿಂದೆ ಬಿದ್ದ ಸೋಗಲಾಡಿಗಳೇ...
ನಿಮ್ಮುದ್ಧಾರಕೆ ಇವುಗಳ ಹಿಂದೆ ಬಿದ್ದಿರುವಿರೇ!
ಈ ಜಗದಲಿ ಸಿದ್ಧಾಂತಗಳ ಬೆನ್ನುಹಿಡಿದಿಹರಲ್ಲ
ಲೋಕದಲಿ ಮಾನವೀಯ ಸಿದ್ಧಾಂತವೇ ಎಲ್ಲ
ನಿಮ್ಮನು ಗುರುತಿಸಿಕೊಳ್ಳಲೊಂದು ಸಿದ್ಧಾಂತ
ಬೇಳೆಯ ಬೇಯಿಸಿಕೊಳ್ಳಲೊಂದು ರಾದ್ಧಾಂತ!
ಸಿದ್ಧಾಂತಗಳೆಂದು ದಾರಿಯ ತಪ್ಪಿಸುತಲಿರುವಿರೇ
ಇಲ್ಲಿ ನಿಮ್ಮ ಅಸ್ತಿತ್ವಕೊಂದು ಸಿದ್ಧಾಂತದ ನೆಪವೇ?
ಮೊದಲು ನಿಮ್ಮ ಮನದ ಸಿದ್ಧಾಂತವನರಿಯಿರೇ
ವಿಶ್ವ ಸಿದ್ಧಾಂತಕೆ ಮೊದಲು ನೀವು ತೆರೆದುಕೊಳ್ಳಿರೇ!
ಈ ಜಗಕೆ ಬೇಕಿಂದು ನ್ಯಾಯ ನೀತಿಗಳ ಸಿದ್ಧಾಂತ
ಬೇಕಾಗಿದೆಯಿಂದು ಕರುಣೆ ಸಹಕಾರದ ತತ್ವಾಂಶ
ಒಣ ಸಿದ್ಧಾಂತ ಪ್ರತಿಪಾದಿಸಿದ ಮನುಜನೇ ಛಿದ್ರ
ಈ ವಿಶ್ವ ಮಾನವ ಸಿದ್ಧಾಂತವೇ ಜಗಕಿಂದು ಭದ್ರ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
