ವೃದ್ಧ ದಂಪತಿ ಬೇಕಾಗಿದ್ದಾರೆ !
ವಿದೇಶಿ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿದ್ದು ಅದರ ಶೀರ್ಷಿಕೆ ಹೀಗಿತ್ತು “ವೃದ್ಧ ದಂಪತಿ ಬೇಕಾಗಿದ್ದಾರೆ, ನಮ್ಮ ಜೊತೆಯಲ್ಲಿ ಇರಬೇಕು”
ಜಾಹಿರಾತಿಗೆ ಪ್ರತಿಕ್ರಿಯೆ ಬಂತು ವೃದ್ಧೆಯೊಬ್ಬರು ಕರೆ ಮಾಡಿ ಕೇಳಿದರು. “ನಿಮ್ಮ ಜಾಹಿರಾತಿನಂತೆ ನಿಮ್ಮ ಕೆಲಸ ನಮಗೆ ಬೇಕು, ಕೆಲಸ ಏನೇನು ಮಾಡಬೇಕು? “
ಜಾಹಿರಾತು ನೀಡಿದವರು ಹೇಳಿದರು, “ನೀವು ಏನೂ ಕೆಲಸ ಮಾಡಬೇಕಿಲ್ಲ ನಾವು ಇಬ್ಬರಿದ್ದು ಇಬ್ಬರೂ ವೈದ್ಯರಾಗಿದ್ದೇವೆ. ನಮ್ಮ ಕೆಲಸಕ್ಕೆ ಹೋಗುತ್ತೇವೆ. ನಮ್ಮ ತಾಯಿ ಇತ್ತೀಚೆಗೆ ನಿಧನ ಹೊಂದಿದರು. ನಮಗೆ ತಂದೆ - ತಾಯಿ ಆಗಿ ಇರುವುದೇ ನಿಮ್ಮ ಕೆಲಸ ಮನೆಯಲ್ಲಿ ಎಲ್ಲ ಕೆಲಸಕ್ಕೂ ಸೇವಕರಿದ್ದಾರೆ. ಆದರೆ ನಮ್ಮನ್ನು ಕೇಳುವವರು ಯಾರೂ ಇಲ್ಲ. ಮಕ್ಕಳೇ ಇಂದು ತಡವಾಗಿ ಏಕೆ ಬಂದಿರಿ? ಊಟ ಮಾಡಿದಿರೋ ಇಲ್ಲವೋ? ಎಂದೆಲ್ಲ ನಮ್ಮನ್ನು ಕೇಳುವವರೇ ಇಲ್ಲ. ಕೆಲಸ ಮುಗಿಸಿ ಮನೆಗೆ ಬಂದಾಗ ನಮ್ಮನ್ನು ಪ್ರೀತಿ ವಾತ್ಸಲ್ಯಗಳಿಂದ ಮಾತನಾಡಿಸುವವರು ನಮಗೆ ಬೇಕು. ಈ ಕೆಲಸವನ್ನೇ ನೀವು ಮಾಡಬೇಕು” ಎಂದು ಪತ್ರಿಕಾ ಜಾಹಿರಾತು ನೀಡಿದ್ದವರು ಹೇಳಿದಾಗ ವೃದ್ಧ ದಂಪತಿಗಳ ಕಣ್ಣುಗಳು ತೇವಗೊಂಡವು.
***
ಜಗತ್ತಿನ ವಿಚಿತ್ರ ಹೇಗಿದೆ ಎಂದರೆ, ಯಾರ ಮನೆಯಲ್ಲಿ ವೃದ್ಧ ತಂದೆ ತಾಯಿಯರು ಇರುವರೋ ಅವರ ಬಗ್ಗೆ ಮಕ್ಕಳ ಕಾಳಜಿಯೇ ಇಲ್ಲ. ಯಾರ ಮನೆಯಲ್ಲಿ ತಂದೆ ತಾಯಿ ಇಲ್ಲವೋ ಅವರು ಅಯ್ಯೋ ಅಪ್ಪ ಇರಬೇಕಿತ್ತು, ಅಯ್ಯೋ ಅಮ್ಮ ಇರಬೇಕಿತ್ತು ಎನ್ನುತ್ತಾರೆ. ನೆನಪಿರಲಿ, ತಂದೆ -ತಾಯಿಯರ ಪ್ರೀತಿ ಮಾತ್ರ ಯಾವಾಗಲೂ ಉಚಿತ ಮತ್ತು ಧಾರಾಳ ಆನಂತರದ ಎಲ್ಲ ಸಂಬಂಧಗಳಿಗೂ ಯಾವುದೇ ರೂಪದಲ್ಲಿ ಬೆಲೆ ತೆರಬೇಕಾಗುತ್ತದೆ. ಸಂಪೂರ್ಣ ಸೃಷ್ಟಿಯಲ್ಲೇ ತಂದೆ ತಾಯಿಗೆ ಮಿಗಿಲಾದುದು ಬೇರೆನೂ ಇಲ್ಲ
ಎಲ್ಲ ಮಕ್ಕಳೂ ಈ ಮಾತನ್ನು ಅರ್ಥಮಾಡಿಕೊಳ್ಳುವಂತಿದ್ದರೆ? ರೆ ರೆ… ಇದ್ದಾಗ ಅದಕ್ಕೆ ಬೆಲೆ ಇರೋದಿಲ್ಲ, ಕಣ್ಮರೆಯಾದಾಗ ಅದರ ಮಹತ್ವ ಗೊತ್ತಾಗೋದು. ಆದರೆ ಕಣ್ಮರೆಯಾಗೋವರೆಗೂ ಅದರ ಕೊರತೆಯ ಅನುಭವ ಗೊತ್ತಾಗೋದಿಲ್ಲ?
(ಅಂತರ್ಜಾಲದಿಂದ ಸಂಗ್ರಹಿತ)
‘ಅಮರ ದೇವ’ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ