ವೈಶಾಲಿ ಕಾಸರವಳ್ಳಿಯವರು ಕೊನೆಗೂ ಹೋಗೆಬಿಟ್ರು !
ಕನ್ನಡ ಸಿನಿಮಾ ಹಾಗೂ ನಾಟಕ ವಲಯದಲ್ಲಿ ಮಂಚೂಣಿಯಲ್ಲಿದ್ದ ವೈಶಾಲಿ ಕಾಸರವಳ್ಳಿಯವರು ಪ್ರತಿಭೆಯಲ್ಲಿ ಅವರ ಪತಿ ಗಿರೀಶ್ ರನ್ನೂ ದಾಟಿಕೊಂಡು ಮುನ್ನಡೆದ ಧೀಮಂತ ಮಹಿಳೆ. ಕಿಡ್ನಿಯ ತೊಂದರೆಯಿಂದ ಸುಮಾರು ವರ್ಷಗಳ ಕಾಲ ನೊಂದಿದ್ದ ವೈಶಾಲಿಯವರು ಬೆಂಗಳೂರಿನ ಜಯನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಾಯಿಲೆ ಉಲ್ಬಣಿಸಿ, ವೈದ್ಯರೂ ಏನೂ ಮಾಡಲು ಸಾಧ್ಯವಾಗದೆ ಹೋಯಿತು. ನಿನ್ನೆ, ೨೭ ರ ಸೆಪ್ಟೆಂಬರ್, ೨೦೧೦ ರ ಸಾಯಂಕಾಲ ೫ ಗಂಟೆಯ ಹೊತ್ತಿಗೆ ಕೊನೆಯುಸುರಿಳೆದರು.
ಬೆನಕ ತಂಡ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಂಗಕರ್ಮಿ ವೈಶಾಲಿ ಕಾಸರವಳ್ಳಿ ಶ್ರದ್ಧಾಂಜಲಿ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಪುಷ್ಪ ನಮನ ಸಲ್ಲಿಸಿದರು. ನಟ ಸುಂದರ್ರಾಜ್, ಸಾಹಿತಿ ಜಯಂತ್ ಕಾಯ್ಕಿಣಿ, ನಿವೃತ್ತ ಅಧಿಕಾರಿ ಚಿರಂಜೀವಿ ಸಿಂಗ್, ಸಾಹಿತಿ ಡಾ.ವಿಜಯಾ ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ
ಸಂಪದ ಬಳಗದ ಪರವಾಗಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಇಬ್ಬರು ಮಕ್ಕಳಾದ ಅನನ್ಯ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ ಹಾಗೂ ಪತಿ ಗಿರೀಶ್ ಕಾಸರವಳ್ಳಿ ಅವರನ್ನು ಅಗಲಿದ್ದಾರೆ.