ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

ಬರಹ

ಮುಂದೇನಾಗಬಹುದು? ನಿಮಗ್ಯಾರಿಗಾದರೂ ಗೊತ್ತಿದೆಯೇ? ಆಗಸದಲ್ಲಿ ಕಾಣುತ್ತಿರುವ ನಕ್ಷತ್ರ, ಗೆಲಾಕ್ಸಿಗಳು ನಿಜವಾಗಲೂ ಅದೇ ರೀತಿಯಲ್ಲಿ ಅಸ್ತಿತ್ವದಲ್ಲಿವೆಯೇ? ಬೆಳಕಿನವೇಗದಲ್ಲಿ ಸಾಗಿ ನಮ್ಮ ಕಣ್ಣೆದುರಿಗೆ ರಾಚುತ್ತಿರುವ ಆ ನಭೋಮಂಡಲದ ದೃಶ್ಯ ಎಷ್ಟೋ ವರ್ಷಗಳ ಹಿಂದಿನದಾಗಿರಬಹುದಲ್ಲವೆ? ಇರಲಿ.

ಇದನ್ಯಾಕೆ ಹೇಳಿದೆನೆಂದರೆ, ಹಿಂದೇನಾಗಿದೆ ಅನ್ನೋದರ ಮಾಹಿತಿಯೂ ಮಾನವರಾದ, ಈ ಭುವಿಯ ಬುದ್ದಿವಂತ ಜೀವಿಯಾದ ನಮ್ಮಗೇ ಇಲ್ಲ. ನೆನ್ನೆ ಮೊನ್ನೆಯವರೆಗೆ ಡೆಸ್ಕ್ಟಾಪ್, ಲ್ಯಾಪ್ಟಾಪ್ ಕೀಲಿಸಿ ತನ್ನ ಕೆಲಸ ಮುಗಿಸಿ ಕೊಳ್ಳುತಿದ್ದ ಮನುಷ್ಯ, ಅವುಗಳ ಉಪಯೋಗದಿಂದ ಎದುರಾಗಬಲ್ಲ ಅಪಾಯಗಳನ್ನ ತಿಳಿಯುವುದರ ಒಳಗೇ , ಅವನಿಗೆ ಅಂಗೈನಲ್ಲೇ ವಿಶ್ವ ದರ್ಶನ ಮಾಡ ಹೊರಟಿವೆ ಇಂದು ಎಲ್ಲರ ಕೈನಲ್ಲಿ ರಿಂಗಿಣಿಸುತ್ತಿರುವೆ ಕಿರಿ ಕಿರಿ ಮೊಬೈಲುಗಳು. ಕಿರಿ ಕಿರಿ ಇರಲಿ, ಅವು ಇಂದು ಎಲ್ಲರಿಗೆ ಬಹು ಪ್ರಿಯ. ರಿಂಗಣ ತರುವುದು ಇಂದಿನ ಯುವ ಜನಾಂಗದ ತುಟಿಯಲಿ ಕಿರು ನಗು. ಯಾರಿಗೆ ಗೊತ್ತು ಯಾವ ನಗುವಿನಲಿ ಏನಡಗಿದೆ ಎಂದು ;) (ಬರಿ ತಮಾಷೆಗೆ ಹೇಳಿದೆ).

ಹುಡುಗ, ಹುಡುಗಿಯರೆ, ಒಂದೆಜ್ಜೆ ಮತ್ತೆ ಮುಂದೆ ಹೋಗಿ ತಂತ್ರಜ್ಯ್ನಾನದ ಉಪಯೋಗ ಪಡೆಯಿರಿ. ನಿಮ್ಮ ಮೊಬೈಲ್, ರಿಂಗಣದ ಜೊತೆಗೆ ನಿಮ್ಮ ಭೂತ ಭವಿಷ್ಯಗಳ ಕಿಂಡಿಯಾಗಲಿರುವುದನ್ನ ಒಮ್ಮೆ ಇಣುಕಿ ನೋಡಿ. WAP ಅಂದ್ರೇನು ಅಂತ ಹುಡುಕಾಡಲಿಕ್ಕೆ ನಿಮ್ಮಲ್ಯಾರಾದರೂ ತಯಾರಿದ್ದೀರಾ? ಅದರಲ್ಲಿ ಕನ್ನಡದ ಕನ್ನಡಿಯನ್ನ ತಯಾರು ಮಾಡ್ಲಿಕ್ಕೆ ಸಾದ್ಯವಿದೆಯೆ ಅಂತ ನಿಮಗೆ ತಲೆ ಕೆಡಿಸಿ ಕೊಳ್ಳುವಷ್ಟು ಸಮಯವಿದೆಯೇ?

ನನ್ನ ಇಂಗ್ಲೀಷ ಬ್ಲಾಗನ್ನ ನನ್ನ ಮೋಟೋ ಮಿಂಗ್ ನಲ್ಲಿ ವೀಕ್ಷಿಸಿದಾಗ ನಮ್ಮ ಹುಡುಗರ
ತಲೆಯಲ್ಲೇನಾದರೂ ಇದರ ಹುಳು ಹತ್ತಿದೆಯೋ ಎನೋ ಕೇಳೇ ಬಿಡೋಣ ಅಂತ ಈ ಲೇಖನ ಬರೀಲಿಕ್ಕೆ
ಶುರು ಮಾಡಿದೆ.ಇದರ ಮೇಲೆ ಕೆಲಸ ಮಾಡ್ಲಿಕ್ಕೆ , ಹೊಸದನ್ನ ಹುಡುಕಿ ಕನ್ನಡಿಗರ ಮುಂದಿಡುವ
ಕಿಚ್ಚು ನಿಮ್ಮಲ್ಲಿದ್ದರೆ ಹೇಳಿ ನಿಮಗೆ ಬೇಕಿರುವ ಸಹಾಯ ಮಾಡುವ. ನಿಮ್ಮೊಂದಿಗೆ ನಾವೂ
ನಮ್ಮ ಕೈ ಜೋಡಿಸ್ತೇವೆ.