ಶಂಕರ ನಾರಾಯಣ ರಕ್ಷಿಸು
ಕವನ
ಯಾವ ತೆರದಲಿ ಬೇಡುತಿರುವೆನೊ
ಶಂಕರ ನಾರಾಯಣ ರಕ್ಷಿಸು
ಕರುಣೆಯಿಲ್ಲದೆ ಕ್ರಿಮಿಯ ಬಿಟ್ಟಿಹ
ದೂರ್ತರನು ನೀ ಸಂಹರಿಸು
ಮೌನವಾಗಿಹ ದೇಹದೊಳಗಡೆ
ವಿಷವ ಬಿಟ್ಟಿಹ ಮಾರಿಯ
ಹೊಡೆದು ಓಡಿಸಿ ಸೌಖ್ಯ ನೀಡುತ
ನಮ್ಮನೆಲ್ಲರ ಪೊರೆಯುತ
ಉಸಿರು ಚೆಲ್ಲಿಹ ನಮ್ಮ ಜನರಿಗೆ
ಆತ್ಮ ಸದ್ಗತಿ ನೀಡುತ
ಉಸಿರ ಜೊತೆಗೆ ಬಾಳ್ವೆ ನಡೆಸುವ
ಜನಕೆ ಹರಸುತ ಸಾಗುತ
ಭಯದ ಬದುಕಲಿ ಜೀವ ಹಿಡಿದಿಹ
ಜನಕೆ ನೆಮ್ಮದಿ ನೀಡು ಬಾ
ನಿನ್ನ ಒಲುಮೆಯ ಚೆಲುವ ಮಕ್ಕಳ
ಚಿಂತೆಯನು ನೀ ಕಳೆಯು ಬಾ
-ಹಾ ಮ ಸತೀಶ
ಚಿತ್ರ್