ಶಾಂತ ಮಂತ್ರ ಸಾರಿಕೊಂಡು

ಶಾಂತ ಮಂತ್ರ ಸಾರಿಕೊಂಡು

ಕವನ

ಬೇಡ ಬಿಡು ಬೇಡ ಬಿಡು

ಇನ್ನೊಬ್ಬರ ಹುಷಾಬರಿ

ತೆರೆದು ನೋಡು ತೆರೆದು ನೋಡು

ನಿನ್ನ ಮನವ ಕದವ ತೆರೆದು ನೋಡು

 

ನಿನ್ನ ನೀ ನೋಡಿಕೊಂಡು

ಮನದ ಮಾತು ಕೇಳಿಕೊಂಡು

ಶುದ್ಧ ಹೃದಯ ತೆರೆದುಕೊಂಡು

ಶಾಂತ ಮಂತ್ರ ಸಾರಿಕೊಂಡು

 

ಕಾಡಿ ಕಾಡಿ ಸೋತು ಹೋಗಲಿ

ದೂರಿ ದೂರಿ ದೂರಾಗಲಿ

ಕಷ್ಟ ಕೊಟ್ಟು ಕೊಟ್ಟು ಬಿಟ್ಟೋಗಲಿ,

ನಿನು ನಂಬಿದ ದೇವರು ನಿನ್ನ ಕಾಪಾಡಲಿ

 

ನಂಬಿದ ದೇವರು ಕೈ ಬಿಡುವುದಿಲ್ಲ

ಕೆಟ್ಟತನ ನಿನ್ನೆದುರು ನಿಲ್ಲುವುದಿಲ್ಲ

ನಿನ್ನೆ ನಿನ್ನ ಕಾಡುವುದಿಲ್ಲ

ನಾಳೆ ದಿನ ನಿನ್ನ ಕರೆಯುದಲ್ಲ.

 

ಸಹನೆ ಸ್ವಲ್ಪ ತೋರಿ ಬಿಡು

ಸಹಕಾರ ಕೊಟ್ಟು ನೋಡು

ಕರುಣೆಯಿಂದ ಕಂಡು ನೋಡು

ಶಾಂತ ಮಂತ್ರ ಸಾರಿ ಬಿಡು

 

-ಎಚ್.ವ್ಹಿ.ಈಟಿ, ಶಿಕ್ಷಕರು, ಸಾ.ನರೇಗಲ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್