ಶಿವಪಾರ್ವತಿ ಕುವರ ಗಜಮುಖನೆ

ಶಿವಪಾರ್ವತಿ ಕುವರ ಗಜಮುಖನೆ

ಕವನ

 

ಶಿವಪಾರ್ವತಿ ಕುವರ ಗಜಮುಖನೆ
ಷಣ್ಮುಖ ಸೋದರ ಗಣನಾಥನೆ.
 
ಏಕದಂತ ಲಂಬೋದರನೆ
ಮೋದಕಹಸ್ತ ಸಂಕಷ್ಟಹರನೆ
ಮೂಷಿಕವಾಹನ ವಿಘ್ನೇಶ್ವರನೆ
ಫಣಿಭೂಷಪ್ರಿಯ ಪರಶುಧರನೆ.
 
ಸಿದ್ಧಿವಿನಾಯಕ ಸುಪ್ರದೀಪನೆ
ಬುದ್ಧಿಪ್ರದಾಯಕ ಹೇರಂಬ ಗಣಪನೆ
ವಿಘ್ನವಿನಾಶಕ ವಾಮನರೂಪನೆ
ವಿದ್ಯಾದಾಯಕ ಆದಿಪೂಜಿಪನೆ.
 
ಸ್ಮರಣೆಯ ಗಯ್ಯುವೆ ಸಮಾಹಿತನೆ
ಸದ್ಗುಣವೀಯೊ ಸುರವಂದಿತನೆ
ಕರುಣದಿಂದಲಿ ಕಾಯೊ ಮುನಿಪೂಜಿತನೆ
ಚರಣಕ್ಕೆ ಎರಗುವೆ ಗಣಸೇವಿತನೆ.
ಚಿತ್ರ್

Comments