ಶಿವಮೊಗ್ಗೆಯ ಕನ್ಯಕಾ ಪರಮೇಶ್ವರಿ, ಮೈಲಾರೇಶ್ವರರ ಕುರಿತು..
ಕಾಯಮ್ಮ ಕನ್ಯಕಾ ಪರಮೇಶ್ವರಿ
ಕಾಯಮ್ಮ ಜಗದೀಶ್ವರಿ
ಕನ್ಯಕಾ ಪರಮೇಶ್ವರಿ
ಹರಿಸಮ್ಮ ಪ್ರೀತಿಯ ಜರಿ
ಹರಸಮ್ಮ ಜ್ನಾನದ ಸಿರಿ|1|
ಎಡಬದಿಯಲಿ ನವಗ್ರಹ
ಸರ್ವ ಕಷ್ಟಗಳ ಪರಿಗ್ರಹ
ಬಲಬದಿಯಲಿ ಸೀತಾರಾಮ
ಕಷ್ಟಗಳ ಕಳೆವ ಆ ಹನುಮ|2|
ನಿನ್ನ ಹಿಂದಿಹನು ನಗರೇಶ
ಜತೆಗೆ ನಿಂತಿಹನು ಜನಾರ್ಧನ
ಶ್ರೀಲಕ್ಷ್ಮಿಯಿಹಳು, ಗಣಪತಿಯಿಹನು
ಇಹದಿ ಸುಖಗಳ ಕರುಣಿಸುವವರು
ನಮ್ಮನು ಕಾಯಮ್ಮ
ಕನ್ಯಾಕುಮಾರಮ್ಮ|3|
ಮೈಲಾರೇಶ್ವರ ನಮೋ ನಮೊ
ಹೊರದ್ವಾರದಲಿ ಷಣ್ಮುಖ
ಮತ್ತೊಂದೆಡೆಯಲಿ ಗಜಮುಖ
ಎದುರು ಕುಳಿತಿಹ ನಂದಿಯಣ್ಣ
ನೋಡಲೆರಡು ಸಾಲದು ಕಣ್ಣು
ನಿನ್ನ ಮುಕ್ಕಣ್ಣ|1|
ಧಾರವಾಡದ ಮೈಲಾರಗುಡ್ಡ
ದಿಂದಿಲ್ಲಿಗೆ ಬಂದಿಹೆಯಂತೆ
ವರ್ಷಕ್ಕೊಮ್ಮೆ ನಿನ್ನ ತೇರಂತೆ
ಮೈಲಾರೇಶ್ವರನೆ|2|
ಮೈಲಾರಿಗಳಿಗೆ ನೀ ಆಶ್ರಯವಂತೆ
ಮೈಮೇಲೆ ತೇರ ದಿನ ಬರ್ತೀಯಂತೆ
ಜಗದ ಭವಿಷ್ಯವ ನುಡಿತೀಯಂತೆ
ಹಲ್ಲಲೇ ಕಬ್ಬಿಣ ಕಡಿತೀಯಂತೆ
ಎದುರಿಟ್ಟ ಮೂರು ಕಲ್ಲೆತ್ತೀಯಂತೆ
ಪಾರ್ವತಿ ಪತಿಯೆ ನಮೋ ನಮೊ|3|
ಮೈಲಾರಿಗಳ ವಾದ್ಯ ಮಧ್ಯಾನದಾರ್ತಿ
ನವರಾತ್ರಿ ಬನ್ನಿಗೆ ತಪ್ಪದೇ ಬರುತಿ
ನಂಬಿ ನಡೆದವರ ಕಷ್ಟವ ಕಳೆಯುತಿ
ನಮ್ಮೇಲೂ ಇರಲಿ ನಿನ್ನಯ ಪ್ರೀತಿ
ಪರಮೇಶ್ವರನೇ ನಮೋ ನಮೊ