ಶಿಶುಗೀತೆ- ಕನಸು
ಕವನ
ಪುಟ್ಟನು ಹೋದನು ಅಜ್ಜನ ಮನೆಗೆ
ಸಂತೆಗೆ ನಡೆದನು ಮಾಮನ ಜೊತೆಗೆ
ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ
ಬೀಳಲು ಆಸೆಯು ಮಗುವಿನ ಮನಸ್ಸಿಗೆ
ಅಂಗಡಿ ಮುಂದೆ ತುತ್ತೂರಿ ನೋಡಲು
ಸೆಳೆಯಿತು ಆ ಕಡೆ ದೃಷ್ಟಿ ನಾಟಲು
ಮಾಮನ ಕೈಯನು ಹಿಡಿದು ಎಳೆಯಲು
ತುತ್ತೂರಿ ಕೊಡಿಸು ಎಂದು ಅಳಲು
ಕಾಸನು ಕೊಟ್ಟು ತುತ್ತೂರಿ ಕೊಂಡನು
ಪೀಂ ಪೀಂ ಊದಿ ಹರುಷಗೊಂಡನು
ತಂಗಿಯ ಕೈಯಲಿ ನೀಡಿ ಕುಣಿದನು
ಜೋಪಾನ ಮಾಡುವೆ ಎನ್ನುತ ನಲಿದನು
ಸ್ನಾನವ ಮಾಡಿಸಿ ಮೈಯನು ಒರೆಸಿ
ಪೌಡರ್ ಚಿಮುಕಿಸಿ ಅಂಗಿಯ ತೊಡಿಸಿ
ಕಾಡಿಗೆ ತಿಲಕ ಇಡುತ ನಗಿಸಿ
ಎಚ್ಚರವಾಗಲು ಕನಸೆಂದು ಭ್ರಮಿಸಿ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್