ಶಿಶುಗೀತೆ- ಮುಗ್ಧ ಭಾವ
ಕವನ
ಮುತ್ತಿಡಲೆ ನಾನೊಮ್ಮೆ ಮುಕ್ಕಣ್ಣ ನಿನಗೆ
ಮತ್ತೇನು ಬೇಕಿಲ್ಲ ಬಯಕೆಯದು ನನಗೆ
ಮಕ್ಕಳನು ನೀ ಹರಸಿ ಮತಿ ಕೊಡುವೆಯಂತೆ
ನಾನೊಬ್ಬ ಎಳೆಬಾಲ ನಾ ಬಂದು ನಿಂತೆ
ಮಗ್ಧತೆಯ ಶಿಶುವೆಂದು ನನ್ನಾಸೆ ಅರಿತು
ಈ ದಿವ್ಯ ಕರದಲ್ಲಿ ಕಂದನನು ಎತ್ತು
ತಪ್ಪಾಯ್ತೆ ನನ್ನಿಂದ ನನ್ನಾಸೆಯಿಂದ
ಮನ್ನಿಪುದು ಪರಶಿವನೆ ನೀ ಕರುಣೆಯಿಂದ
ಗಣಪತಿಯ, ಷಣ್ಮಖನ ಪಿತ ನೀನು ಅರಿತೆ
ಈ ಜಗವ ನಡೆಯಿಸುವ ಹೊಣೆ ನಿನ್ನದಂತೆ
ಬಿಡುವಿನಲಿ ಕರುಣದಲಿ ನೀನಿತ್ತ ಬಂದೆ
ನನ್ನಾಸೆ ತೀರಿಸುತ ಮುದನೀಡು ತಂದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ವಾಟ್ಸಾಪ್)
ಚಿತ್ರ್