ಶಿಶುನಾಳರಿಗೆ ನಮನ

ಶಿಶುನಾಳರಿಗೆ ನಮನ

ಕವನ

ತಂಬೂರಿ ಮೀಟುತ

ಬಂದೆಯೋ ಗುರುವೆ

ತತ್ವ ಪದಗಳಾ ಸಾರಿದೆಯೊ

ಮಾನವ ಜನುಮವು

ದೊಡ್ಡದುಯೆನುತ

ಜನಮನಕೇ ನೀ ಪೇಳಿದೆಯೊ

 

ತರತರ ವಿಧವಿಧ

ಬೋಧನೆ ಮಾಡುತ

ಮನದಲಿ ಚಿಂತನೆ ಮೂಡಿಸಿದೆ

ಜೀವನ ಧರ್ಮವ

ಭಕುತಿಯ ಕಲಿಸುತ

ಮುಕ್ತಿಯ ಮಾರ್ಗವ ತೋರಿಸಿದೆ

 

ಮನುಕುಲವೊಂದೇ

ಹೇಳುತ ನಿಂದೇ

ನೀತಿಯನಂದು ಸಾರಿದೆಯೊ

ಸ್ವಾರ್ಥವ ತೊಳೆಯುತ

ದ್ವೇಷವ ತರಿಯುತ

ಕರುಣೆಯ ಬೀರುತ ಸಾಗಿದೆಯೊ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ್