ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್

ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್

ಬರಹ

ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಲಿತ ಪ್ರಪಂಚದ ಜ್ಞಾನ ಭಂಡಾರದಲ್ಲಿ ನಿಸ್ಸಂಶಯವಾಗಿಯೂ ಒಬ್ಬ ಕೇಂದ್ರೀಯ ವ್ಯಕ್ತಿಯಾಗಿದ್ದಾರೆ. ಅಂಬೇಡ್ಕರ್ ರವರು ದಲಿತರ ಸಾಮೂಹಿಕ ಜೀವನದಲ್ಲಿ ಯಾವುದೇ ಗಂಭೀರವಾದ ಅಥವಾ ಬಹುಮುಖ್ಯವಾದ ವಿಷಯವನ್ನು ಸಂಪೂರ್ಣವಾಗಿ ಸ್ಪಶರ್ಿಸದ ವಿಷಯವನ್ನು ಊಹಿಸಿಕೊಳ್ಳುವುದು ಕಷ್ಟ. ಅವರು ದಲಿತ ಸಮೂಹಕ್ಕೆ ಪರಿಮೂರ್ಣ ಎಲ್ಲವೂ ಆಗಿದ್ದರು; ವಿದ್ವತ್ತಿನ ನೆಲೆಯಲ್ಲಿ ಅಸಾಧಾರಣ ವಿದ್ವಾಂಸರಾಗಿದ್ದರು, ತಮ್ಮ ಜನರನ್ನು ಗುಲಾಮಗಿರಿ ಮತ್ತು ಅಪಮಾನಗಳಿಂದ ಹೆಮ್ಮಪಡುವ ಹಾದಿಗೆ ಮುನ್ನಡೆಸಿದ ಉದ್ದಾರಕ, ಮತ್ತು ಚೌದ್ದಮಂದಿರದಲ್ಲಿ ಬೋಧಿಸತ್ವ. ದಲಿತ ವಲಯದಲ್ಲಿ ಅದೆಂಥದೇ ಸಂದರ್ಭದಲ್ಲೂ ಸಹ ದೇವರಂತೆ, ಅವರನ್ನು ಸದಾ ಸವರ್ೋತ್ಕೃಷ್ಟತೆಗಳಿಂದ ಅಲಂಕರಿಸಲಾಗುತ್ತದೆ.
ಅಂಬೇಡ್ಕರ್ ರವರಲ್ಲಿ ದಲಿತರು ಹೊಂದಿರುವ ಪ್ರಣಾಮ ಮತ್ತು ಪೂಜ್ಯಭಾವನೆಗಳ ಹಿಂದಿರುವ ಕಾರಣಗಳು ಕಾಣಿಸಿಗುವುದು ದುಸ್ತರವೇನಲ್ಲ. ತಮ್ಮ ವಿಮೋಚನೆಗಾಗಿ ಅವರ ಜೀವನದ ಪ್ರತಿಯೊಂದು ಕ್ಷಣವೂ ಆಲೋಚಿಸುತ್ತಾ ಹೋರಾಡಿದವರೆಂದು, ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಪ್ರಭುತ್ವ ಶಕ್ತಿಗೇ ಷೆಡ್ಡೊಡೆದು ಇದಿರಿಸಿ ನಿಂತವರೆಂದು; ತಮ್ಮೊಡನೆ ಇರಸಲುವಾಗಿ ಅವರಿಗೆ ಸುಲಭಸಾಧ್ಯವಾಗಿ ಸಿಗಬಹುದಿದ್ದ ಎಲ್ಲ ಸುಖ ಸಂಪತ್ತುಗಳನ್ನು ಬಲಿಕೊಟ್ಟವರೆಂದು; ಅತೀವ ಅಡೆತಡೆಗಳ ಮಧ್ಯೆಯೂ ಮಹಾನುಭಾವರ ನಡುವೆ ಮೇರು ಮಟ್ಟದ ವ್ಯಕ್ತಿಯಾಗಿ ಬೆಳೆದು ಜಾತಿಯೂಧಾರಿತ ಶ್ರೇಷ್ಠತೆಯ ಸಿದ್ದಾಂತವನ್ನು ಸಂಪೂರ್ಣಗಿ ಪುಡಿಗೆಟ್ಟಿದವರೆಂದು ಮತ್ತು ಅಂತಿಮವಾಗಿ ತಮ್ಮ ಭವಿಷ್ಯತತಿನ ಹಾದಿಯತ್ತ ಬೆಳಕು ಹರಿಸಿದವರೆಂದು ಅಂಬೇಡ್ಕರ್ ರವರನ್ನು ದಲಿತರು ಪರಿಗಣಿಸುತ್ತಾರೆ. ತಮ್ಮ ಸಂಕಷ್ಟಗಳನ್ನು ಸಹಸ್ತ್ರಮಾನಗಳ ಇತಿಹಾಸದಲ್ಲಿ ಕೆಲವರಷ್ಟ ಅವರನ್ನು ಮನುಷ್ಯರಂತೆ ಕಂಡು ತಮ್ಮ ನೆರೆಯವರೆಂಬ ಭಾವನೆಯನ್ನುಂಟು ಮಾಡಿದ್ದಾರೆ. ಅಂಥಹ ಕೆಲವರಲ್ಲಿ ಇವರು ದಲಿತರ ಆಸ್ತಿಯಾಗಿದ್ದರು. ಅವರ ಮುಂದಿದ್ದ ದೊಡ್ಡ ಆಧಾರ ಸ್ತಂಭವನ್ನೇ ನಡುಗಿಸಿ, ಅದರ ಔನ್ನತ್ಯಕ್ಕೇರಿ, ಅವರಿಗೊಂದು ಸಹಾಯ ಹಸ್ತ ನೀಡಿ ಅವರು ಮಾನವೀಯ ನೆಲೆ ತಲುಪುವಂತೆ ಮಾಡಿದ್ದು ಅವರೇ. ಹಳ್ಳಿಗಳಲ್ಲಿರುವ ನಮ್ರ ಭೂ-ಹೀನ ಕೂಲಿಕಾರರಿಂದ ಹಿಡಿದು ಅಧಿಕಾರದ ಅಖಾಡದಲ್ಲಿ ಉನ್ನತ ಹುದ್ದೆಯನ್ನಲಹರಿಸಿರುವ ಅಧಿಕಾರ ಕಾಹಿಅಧಿಕಾರಿ ಯವರೆಗೂ ಭಾವನಾತ್ಮಕವಾಘಿ ತಮ್ಮ ಸಾಧನೆಯೆಲ್ಲವನ್ನೂ ಅಂಬೇಡ್ಕರ್ ರವರಿಗೆ ಸಮಪರ್ಿಸುವುದು ಸಾಮಾನ್ಯವಾಗಿ ಕಾಣಸಿಗುತ್ತದೆ. ಅವರಿಲ್ಲದಿದ್ದಲ್ಲಿ ತಾವಿನ್ನೂ ತಮ್ಮ ಮುತ್ತಾತಂದಿರಂತೆ ಕುತ್ತಿಗೆಗೆ ಉಗುಳು ಬಟ್ಟಲನ್ನು ಕಟ್ಟಿಕೊಂಡು ಹಿಂದೆ ಕಸಪೂರಿಕೆಯನ್ನು ಇಟ್ಟುಕೊಂಡು ಬದುಕುತ್ತಿದ್ದೆವೆಂದು ಅವರಲ್ಲಿ ಅಂಬಿದ್ದಾರೆ.
ಹೀಗೆ ದಲಿತರು ಅವರನ್ನು ಅಪಾಯಸೂಚಿಸುವ ದೀಪವಾಗಿ ಕೇಂದ್ರಸ್ಥಾನದಲ್ಲಿಟ್ಟು ಅದರ ಪ್ರಭೆಯ ನಿದರ್ೇಶನದನುಸಾರ ತಮ್ಮ ಸಾಮೂಹಿಕ ಚಟುವಟಿಕೆಗಳನ್ನು ನಿರ್ವಹಿಸುವುದು ಸಹಜವಾದುದು. ಭೌತಶಾತ್ತ್ರದಿಂದ ಸಾದೃಶವೊಂದನ್ನು ಬಳಸಿ ಹೇಳುವುದಾದರೆ ಈ ಪ್ರಭೆಯ ಲೇಸರ್ ಪ್ರಭೆಯಂತೆ ಏಕವರ್ಣದಿಂದಾಗಿರುವ ಹಲವು ವರ್ಣಗಳಿಂದ ಕೂಡಿದ್ದು, ಜನ ಸಮೂಹವು ನಿಯಂತ್ರಸಿಬೇಕಾದ ಅದರ ಫಿಲ್ವರನ್ನು ಮತ್ತೊಬ್ಬರ ನಿಯಂತ್ರಿಸುತ್ತಿದ್ದಾರೆ. ಕೆಲವು ವೇಳ ಕೆಲವು ವರ್ಣವನ್ನು ತೋರಿಸುತ್ತಾ ಮತ್ತೆ ಕೆಲವು ವೇಳೆ ಇನ್ನಾವುದೋ ವರ್ಣವನ್ನು ತೋರುತ್ತಾ ಅವರು ತಮ್ಮಿಚ್ಚೆಯಂತೆ ಈ ಪ್ರಭೆಯನ್ನು ತಪ್ಪಾಗಿ ಅಥರ್ೈಸುತ್ತಿದ್ದಾರೆ. ಅವರು ಕೆಲವೊಂದು ಭಾಗವನ್ನಾಯ್ದು ವರ್ಣ-ಪಂಕ್ತಿಯನ್ನು ಮುಂದಿಡುತ್ತಿದ್ದಾರೆ. ಹೀಗೆ ಜನಸಮೂಹಕ್ಕೆ ತಲುಪುವುದು ಅಂಬೇಡ್ಕರ್ ರವರು ನೈಜ ಚಿತ್ರಣವಲ್ಲ, ಆದರೆ ಅದರ ಭಾಗವಷ್ಟೇ, ಕೆಲವು ವೇಳೆ ತಿರುಚಿದಭಾಗ, ತಂತ್ರಜ್ಞಾನರಿಂದ ಎಚ್ಚರಿಕೆಯಿಂದ ಫಿಲ್ಟರ್ ಮಾಡಿ ವಧರ್ಿಸಿರುವುದು ಮಾತ್ರ. ಈ ಚೂರುಚೂರಾದ ಮತ್ತು ತಪ್ಪಾದ ಅಂಬೇಡ್ಕರ್ ಜನ ಸಮೂಹವನ್ನು ತಲುಪುತ್ತಾರೆ. ಅವರಿಗೆ ಅಂಬೇಡ್ಕರ್ ರವರು ಇನ್ನೆಂದಿಗೂ ಭೀಮರಾವ್ ಅಂಬೇಡ್ಕರ್ ಎಂಬ ಹೆಸರಿನ ಐತಿಹಾಸಿಕ ವ್ಯಕ್ತಿಯಾಗಿ ಉಳಿದಿಲ್ಲ. ಅಂಬೇಡ್ಕರ್ ರವರು ಈಗಾಗಲೇ ದಲಿತರ ಸಾಮೂಹಿಕ ಒತ್ತಾಸೆಯ ಪ್ರತೀಕವಾಗಿ, ಅವರ ವಿಮೋಚನಾ ಪ್ರಬಂಧದ ಪ್ರತಿಯಾಗಿ ರೂಪಾಂತರ ಹೊಂದಿದ್ದಾರೆ. ಏಕೆಂದರೆ ಜನ ಸಮೂಹಕ್ಕೆ ಪ್ರತಿಮೆಗಳು ಬಹುಬೇಗ ಲಿಭಿಸುತ್ತವೆ. ಅವು ಪ್ರಮುಖ ಆಕಾರದ ಸಂಕೀರ್ಣ-ರಹಿತವಾದ, ಪ್ರಾಯೋಗಿಕವಾಗಿ ಬಳಸಬಹುದಾದ ಮಾನವ ನಿಮರ್ಿತಿಗಳು. ಹೀಗೆ ಜನಸಮೂಹದ ಕೈಯಲ್ಲಿ ಮಹಾನ್ ವೀರರು ಮತ್ತು ಅವರ ಸಿದ್ದಾಂತಗಳು ಪ್ರತಿಮೆಗಳಾಗಿ ರೂಪಾಂತರ ಹೊಂದದೇಗತ್ಯಂತರವಿಲ್ಲ. ಮಾನವ ಇತಿಹಾಸದಲ್ಲಿ ಅಂಥಹ ಪ್ರತಿಮೆಗಳು ತುಂಬಿಹೋಗಿವೆ; ಅದರಲ್ಲೂ ಅವರಿಂದಲೇ ಅದು ಸೃಷ್ಟಿಯಾಗಿದೆ. ತಮ್ಮ ಸಮಸ್ಯಗಳನ್ನು ವಸ್ತುನಿಷ್ಟಯಿಂದ ಜನಸಮೂಹವು ನೋಡಲು ಬಿಡದೆ ಭಾವನಾತ್ಮಕ ವಿಷಯಗಳ ಜೇಡರ ಬಲೆಯಲ್ಲಿ ಅವರನ್ನು ಸಿಲುಕಿ ಹಾಕಿರುವ ದಲಿತ ರಾಜಕಾರಣಿಗಳು ಮತ್ತೂ ಹೆಚ್ಚಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ - ನಿಮರ್ಾಣಕ್ಕೇ ಉತ್ತೇಜನ ನೀಡಿದ್ದಾರೆ.
ಕನಿಷ್ಟ ಕಳೆದ ನಾಲ್ಕು ದಶಕಗಳಲ್ಲಿ ಅಂಬೇಡ್ಕರ್ ರವರನ್ನು ತಮ್ಮ ಮಾದರಿಯಾಗಿ, ಒಂದು ದೈವವಾಗಿ ಮತ್ತು ಅವರೇ ಹೇಳಿಕೊಳ್ಳುವ ಅವರ ಬೋಧೆಯನ್ನು ಅತ್ಯುತ್ಸಾಹದಿಂದ ಆಚರಿಸುತ್ತಾ ಬಂದಿದ್ದಾರೆ. ತಮ್ಮ ವಿಮೋಚನೆಯ ಯಥಾರ್ಥ ವಿಜ್ಞಾನವೆಂದೇ ಅವರು ಕರೆಯುವ ಅಂಬೇಡ್ಕರ್ ವಾದದಲ್ಲೇ ಅವರ ಸಾಮಾಜಿಕ ಇರುವು ಒಟ್ಟಾರೆ ಮುಳಿಗಿರುವುದನ್ನು ಕಾಣಬಹುದಾಗಿದೆ. ಅದು ನಿಜವೇ ಆಗಿದ್ದರೆ-ಯಾರೋಬ್ಬರೂ ಅದನ್ನು ಸುಳ್ಳೆಂದು ಪ್ರತಿಪಾದಿಸುವುದಿಲ್ಲವೆಂಬುದು ಬೇರೆಯದೇ ಮಾತು-ಅಂಬೇಡ್ಕರ್ರವರನ್ನು ತಪ್ಪಿಲ್ಲದೆ ಅನುಸರಣೆ ಮಾಡಿದಾಗ್ಯೂ ಪ್ರತಿಯೊಂದು ರೀತಿಯಲ್ಲೂ ಅವರು ದಯನೀಯ ಸ್ಥಿತಿಯಲ್ಲೇ ಮುಂದುವರೆದಿರುವುದು ಏಕೆಂದು ಕೇಳುವುದು ಸಮಂಜಸವಾದದ್ದು. ಸಕರ್ಾರ ಮತ್ತು ಸಾರ್ವಜನಿಕ ರಂಗದ ಸೇವೆಗಳಲ್ಲಿ ಹಾಗೂ ಕೆಲಮಟ್ಟಿಗೆ ರಾಜಕಾರಣದಲ್ಲಿ ಬೆರಳೆಣಿಕೆಯಷ್ಟು ದಲಿತರನ್ನು ಹೊರತು ಪಡಿಸಿದರೆ, ಭಾರತ ಸಮಾಜದ ಸಾಮಾಜಿಕ ಹಾಗೂ ಆಥರ್ಿಕ ಶ್ರೇಣಿಯಲ್ಲಿ ಅವರಿನ್ನೂ ಕೆಳಸ್ತರದಲ್ಲೇ ಜೀವಿಸುತ್ತಿದ್ದಾರೆ. ಮಾಧ್ಯಮದ ಅಬ್ಬರವಲ್ಲದೆ ಸಾಮಾನ್ಯ ಸಬಲೀಕರಣದಿಂದ ಅಳತೆ ಮಾಡಿದಲ್ಲಿ, ಅವರ ರಾಜಕೀಯವು ನುಚ್ಚುನೂರಾಗಿದೆ. ಈ ದಶಕಗಳಾದ್ಯಂತ, ಅವರ ಸಾಪೇಕ್ಷ ಪರಿಸ್ಥಿತಿಯು ಒಂದೂ ಜಡತೆಯನ್ನು ಅಥವಾ ಕುಸಿತವನ್ನೂ ತೋರುತ್ತದೆ. ಅವರ ಈ ಪರಿಸ್ಥಿತಿಯನ್ನು ಅಂಬೇಡಕರ್ರವರಲ್ಲಿ ಅವರು ಇಟ್ಟಿರುವ ನಂಬಿಕೆಯೊಂದಿಗೆ ಅವಲೋಕಿಸುವುದೇ ಹಲವು ದಲಿತರಿಗೆ ಕಹಿ ನೀಡುವ ಅಂಶವಾಗಿದೆ. ಆದರೆ, ಈ ವಾಸ್ತವಾಂಶಗಳನ್ನು ನೇರವಾಗಿ ಎದುರಿಸಿ ವೈಫಲ್ಯದ ಮೂಲಗಳನ್ನು ಭಾವನಾ-ರಹಿತವಾಗಿ ಕಂಡುಹಿಡಿಯುವುದು ದಲಿತರ ವಿಮೋಚನೆಗಾಗಿ ಟೊಂಕಕಟ್ಟಿ ನಿಂತಿರುವವರಿಗೆ ಅತ್ಯಗತ್ಯವಾಗಿದೆ.
ಸಾಮಾನ್ಯವಾಗಿ, ಈ ಪ್ರಶ್ನೆಗೆ ಪ್ರತ್ಯತ್ತರವಾಗಿ ಸ್ಫೋಟಗೊಳ್ಳುವ ಕೋಪದಾಚೆ, ತುಲನಾತ್ಮಕ ಸಂಬಂಧದ ರಕ್ಷಣೆಗೆವಾದಗಳನ್ನು ಹೂಡಲಾಗುತ್ತದೆ. ವಿಶೇಷವಾಗಿ, ತಮ್ಮ ಸಂಕಷ್ಟದ ಸ್ಥಿತಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ನಂತರ ಬಂದ ಸಾಮಥ್ರ್ಯವಿಲ್ಲದ ನಾಯಕತ್ವ ಕಾರಣವೆಂದು, ದಲಿತ ಬ್ರಾಹ್ಮಣರಾಗಿ ಬದಲಾಗಿರುವ ಶಿಕ್ಷಿತ ದಲಿತರು ಜನಾಂಗವನ್ನು ದೂರವಿಟ್ಟಿರುವುದು ಕಾರಣವೆಂದು ನೀಡುತ್ತಾರೆ; ಮತ್ತೆ ಕೆಲವು ವೇಳೆ ತಮ್ಮದೇ ಜನರ ಅತಿ ಸ್ವಾರ್ಥತೆ ಎಂದು. ಕೆಲವು ವೇಳೆ, ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರಭಾವವನ್ನೇ ತಟಸ್ಥಿಗೊಳಿಸಿರುವ ಉನ್ನತ ಜಾತಿಯ ಪ್ರಾಬಲ್ಯದೆಡೆಗೆ ಬೆರಳು ತೋರಿಸಲಾಗುತ್ತದೆ. ವಿಶೇಷವಾಗಿ ಕೆಲವು ನಾಯಕರು ದಲಿತ ಚಳುವಳಿಯಲ್ಲೇನೋ ಹುಳುಕಿದೆ ಎಂಬ ನೆಲೆಯನ್ನು ತಳ್ಳಿಹಾಕುತ್ತಾರೆ. ತಮ್ಮ ಅಥವಾ ತಮ್ಮಲ್ಲೇ ಕೆಲವರು ಏಳಿಗೆಯನ್ನು ತೋರುತ್ತಾ ಒಟ್ಟು ಸಾಧನೆಗಳನ್ನು ಎದೆಯುಬ್ಬಿಸಿ ಹೇಳಿಕೊಳ್ಳುವ ಮಟ್ಟಕ್ಕೂ ಅವರು ಹೋಗುತ್ತಾರೆ. ಹೆಚ್ಚು ಶಾಂತಬೆತ್ತರಾದವರು ಸದ್ಯಕ್ಕೆ ಕಾಣುತ್ತಿರುವುದು ಸ್ಥಿತ್ಯಂತರ ಘಟ್ಟವೆಂದು ವಾದಿಸಬಹುದಷ್ಟು. ಇವೆಲ್ಲ ವಾದಗಳಿಗೂ ಕೆಲವು ವಿನಾಯಿತಿ ನೀಡಿದಾಗ್ಯೂ ಸಹ ಅಸಂಖ್ಯಾತ ದಲಿತ ಸಮೂಹದ ಸಾಮಾನ್ಯ ಪರಿಸ್ಥಿತಿಯು ಇನ್ನೂ ಅಪಾಯಕಾರಿ ಮಟ್ಟದಲ್ಲಿ ಶೋಚನೀಯವಾಗಿದೆಯೆಂಬ ಕಟುಸತ್ಯವನ್ನು ಅಳಿಸಲಾಗುವುದಿಲ್ಲ. ಈ ಸ್ಥಿತುಯ ಕಾರಣಗಳನ್ನು ಬಾಹ್ಯಗೊಳಿಸುವುದು ದಲಿತರಿಗೆ ಕಿಂಚಿತ್ತೂ ಸಹಾಯಕವಾಗಿಲ್ಲ. ತಮ್ಮ ಸಿದ್ದಾಂತ ಮತ್ತು ಅದರ ಆಚರಣೆಯಲ್ಲೇನಾದರೂ ದೋಷವಿದೆಯೇ ಎಂದು ಸ್ವ-ವಿಮಶರ್ಾತ್ಮಕವಾಗಿ ದಲಿತರು ನೋಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ.
ಅಂಬೇಡ್ಕರ್ ಕಲಿಸಿರುವರೆನ್ನಲಾದ ಆದರೆ ಮೂಲತತ್ವಕ್ಕೆ ಸಂಪೂರ್ಣ ಅಸಂಬದ್ದವದದ್ದನ್ನು ಬಾಬಾಸಾಹೇಬ್ ಅಂಬೇಡ್ಕರ್ರವರ ಬೋಧೆಗಳಿಗೆ ಬಣವಾಗಿದೆಯೆಂದು ನಂಬಿರುವ ವಿಲಕ್ಷಣವಾದ ನಡುವಳಿಕೆಯನ್ನು, ಅಂಬೇಡ್ಕರ್ನಂತರದ ದಲಿತ ಚಳುವಳಿಯ ಕೆಲವು ಮಹತ್ತರ ಕಾಲಘಟ್ಟವನ್ನು, ಪರಾಮಶರ್ಿಸುವಾಗಿ ಕಾಣಬಹುದಾಗಿದೆ. ಸಾರಭೂತ ಅಂಬೇಡ್ಕರ್ ಮತ್ತು ದಲಿತ ಸಮೂಹಹಗಳ ನಂಬಿಕೆಯಲ್ಲಿರುವ ಅಂಬೇಡ್ಕರ್ ಅಂದರೆ ಅಂಬೇಡ್ಕರ್ ರವರ ಪ್ರತಿಮೆ ಇವರೆಡರ ನಡುವಿನ ವಿಭಾಗವು ಈ ಪರಾಮಶರ್ೆಯಲ್ಲಿ ಸಮಸ್ಯೆಯಾಗಿ ಹೊರಹೊಮ್ಮುತ್ತದೆ. ಅವರ ಬೋಧೆಯ ಬಹುತೇಕ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ, ವಿವಿಧ ಪ್ರಮಾಣದ ವಿರೂಪವನ್ನು ಪ್ರತಿನಿಧಿಸುವ ಪ್ರತಿಮೆಯ ಉದ್ಭವವಾಯಿತು. ಸಮಷ್ಟಿಯನ್ನು ಹಿಡಿದಿಟ್ಟಿರುವ ಸಿದ್ದಾಂತವನ್ನು ಅವರು ರಚಿಸಿರುವ ಮಟ್ಟಿಗೆ, ಈ ಪ್ರತಿಮೆಗಳನ್ನು ದಲಿತ ಕಾರುಣ್ಯತೆಯ ಬೇರಿನಲ್ಲಿ ಕಾಣಬಹುದಾಗಿದೆ. ಈ ಪ್ರತಿಮೆಗಳ ಕೋಟ್ಯಾನುಕೋಟಿ ಮೂಲಗಳ ನಡುವೆ ಸ್ವತ! ಅಂಬೇಡ್ಕರ್ ರವರೆ ಪ್ರಧಾನ ಮೂಲವಾಗಿ ಕಾಣಸಿಗುತ್ತಾರೆ. ಏಕೆಂದರೆ, ಕೆಲವೊಂದು ವಾಸ್ತವಿಕ ನೆಲಗಟ್ಟಿಲ್ಲದೆ ಬರೇ ಪುರಾಣದೀರ್ಘಕಾಲ ಬದುಕುಳಿಯಲು ಸಾಧ್ಯವಿಲ್ಲ. ಅಂಬೇಢ್ಕರ್ ರವರ ಪ್ರತಿಮೆಗಳನ್ನು, ಅವೆಷ್ಟೇ ಸೂಕ್ಷ್ಮವಿದ್ದರೂ ಅವರ ಸ್ವಂತ ಜೀವನದೊಳಗೇ, ಅಂಥಹ ನೆಲೆಗಳೊಡನೆ ಜೋಡಿಸಬಹುದಾಗಿದೆ. ವಾಸ್ತವಾಂಶಗಳು ಬಯಸಿದ್ದಿದ್ದರೆ ಅಂಬೇಡ್ಕರ್ರವರೊಳಗಿನ ವಿಚಾರವಾದಿಯ ತನ್ನ ಅಭಿಪ್ರಾಯ & ಸ್ವಭಾವಗಳನ್ನು ಬದಲಿಸಿಕೊಳ್ಳಲು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಸಂದಭರ್ೊಜಿತವಿಲ್ಲದೆ ನೋಡುವವರಿಗೆ ಅದು ಅಸಂಬದ್ದತೆಗಳಂತೆ ಕಾಣುತ್ತದೆ. ತಾವು ತಲುಪಬೇಕಿದ್ದ ಬಹು ವೈವಿಧ್ಯಮಯವಾದ ಪ್ರೇಕ್ಷಕವೃಂದ(ಇಂಗ್ಲೀಷರಿಂದ ಆರಂಭಿಸಿ ಅನಕ್ಷರ ದಲಿತರವರೆಗೆ) ತಮ್ಮ ಸಾಮಾಜಿಕ-ರಾಜಕೀಯ ಪರಿಸರದಲ್ಲಿ ಪ್ರಮುಖವಾಹಿನಿಯಿಂದ ಅವರ ದೂರ, ಸ್ವಾತಂತ್ರ್ಯ - ಪೂರ್ವ ರಾಜಕೀಯದಿಂದ ಚಾಲನೆಗೊಳಪಟ್ಟ ಜನಾಂಗಗಳ ಗತಿವಿಜ್ಞಾನಕ್ಕೆ ಪ್ರತಿಕ್ರೆಯಿಸುವ ತುತರ್ು ಅಗತ್ಯತೆ, ತನ್ನ ಜೀವಮಾನದಲ್ಲಿ ತಮಗೆ ಸಾಧ್ಯವಿರುಷ್ಟು ದಲಿತರನ್ನೆಲ್ಲ ಏಳಿಗೆ ಹೊಂದುವಂತೆ ಮಾಡುವ ಅವರ ಚಿಂತೆ, ದೂರ ದೃಷ್ಟಿಯ ಬಲಿಕೊಟ್ಟ ಕಿರು ಕಾರ್ಯಗಳನ್ನೆಸಗುವ ತುತರ್ು - ಇವೆಲ್ಲವೂ ವಿವಿಧ ತೆರನಾದ ಸ್ವಭಾವಗಳನ್ನು ಬೆಂಬಲಿಸುವ ಮಾದರಿಗಳು ವಿಧಿಪೂರ್ವಕವಾಗಿ ರೂಪುಗೊಳ್ಳಲು ಕಾರಣವಾದವು. ಇದನ್ನು ಪ್ರಥಮವಾಗಿ ದುರುಪಯೋಗ ಪಡಿಸಿಕೊಂಡವರೆಂದರೆ ಅವರ ಸ್ವಂತ ಹಿಂಬಾಲಕರಾಗಿದ್ದವರು ತಮ್ಮ ವೈಯುಕಿಕ ಹಿತಸಾಧನೆಗಾಗಿ ಸುಲಭವಾಗಿ ಮೋಸಗೊಳ್ಳುವ ದಲಿತ ಸಮೂಹದ ಮನಸ್ಸಿನಲ್ಲಿ ಅಂಬೇಡ್ಕರ್ ರವರನ್ನು ವಿರೂಪಗೊಳಿಸಿದುದು.
ಜನ ಸಮೂಹವನ್ನು ವಿಭಜಿಸುವ ನೆಲೆಗಾಗಿ ಸದಾ ಹುಡುಕಾಡುವ ಆಳುವ ವರ್ಗಗಳು ಈ ವಿರೂಪವನ್ನು ತೀವ್ರತರವಾಗಿ ಪ್ರತಿಪಾದಿಸುತ್ತಾ ಪ್ರತಿಯೊಂದು ರಂಗದಲ್ಲೂ ದಲಿತರನ್ನು ಪುಡಿಗಟ್ಟಲು ಚಾಲನೆಗೊಳಿಸಿದರು. ದಲಿತ ರಾಜಕಾರಣಿಗಳು ಮತ್ತು ಆಗತ್ತಾನೇ ಮೂಡಿ ಬರುತ್ತಿದ್ದ ಮೇಲ್ಸ್ತರದವರೊಡಗೂಡಿ ಅವರು, ದಲಿತರ ರಾಜಕೀಯ ಘನೀಕರಣವನ್ನು ನಿಯಂತ್ರಿಸುವಥಹ ಅಂಬೇಡ್ಕರ್ ರವರು ವಿಶೇಷ ಪ್ರತಿಮೆಗಳನ್ನು ಉತ್ತೇಜಿಸಿ ಬೆಳೆಸಿದರು ಮತ್ತು ಪ್ರಭುತ್ವಕ್ಕೆ ಅಗತ್ಯವಿದ್ದ ಯಥಾರ್ಥತೆಯನ್ನು ತರಲೋಸುಗ ಪಾಲರ್ಿಮೆಂಟರಿ ರಾಜಕೀಯದ ಸುಳಿಯೊಳಗೆ ಅವರನ್ನು ತಳ್ಳಲಾಯಿತು. ಈ ಕಪಟನೆಯನ್ನರಿಯುವಲ್ಲಿ ವಿಫಲರಾದ ದಲಿತರು ಆಳುವ ವರ್ಗಗಳು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದ ಗೊಂದಲಮಯ ಪ್ರವಾಹದೊಳಗೆ ತಂತಾವೇ ಹಿರಿಯತೊಡಗಿದರು. ಇಂದು ತಮ್ಮ ಉಳಿವಿಗಾಗಿ ಕೊನೆಯ ಅವಕಾಶ ಇದೆಂಬಂತೆ, ರಾಜಕೀಯ ಬಿಕ್ಕಟ್ಟು ಹೆಚ್ಚುತ್ತಿರುವ ಜೊತೆಗೆ ಅಂಬೇಡ್ಕರ್ರವರನ್ನು ಅಪಹರಿಸಲು ಆಳುವ ವರ್ಗಗಳು ಒಂದಕ್ಕೊಂದು ಹಣಾಹಣೆ ನಡೆಸುತ್ತಿವೆ. ದಲಿತರೇನಾದರೂ ದೃಡವಾಗಿ ಎಚ್ಚಿತ್ತಿದಲ್ಲಿ ಇದು ಅವರ ಕೊನೆಯ ಅವಕಾಶವಾಗಿಯೇ ಬಿಡುತ್ತಿತ್ತೇನೊ ಆದರೆ. ದುರಾದೃಷ್ಟವಶಾತ್ ವಾಸ್ತವತೆಯತ್ತ ತಂತಾವೇ ಕುರುಡರಾಗಿರುವ ದಲಿತರು ಅವರಿಗೆ ಮತ್ತೆ ಮತ್ತೆ ಹೊಸ ಜನ್ನ ನೀಡುತ್ತಲೇ ಇದ್ದಾರೆ. ಈ ಆಳುವ ವರ್ಗಗಳ ತಂತ್ರಗಾರಿಕೆಗಳನ್ನು ಪ್ರತಿರೋಧಿಸದಿರುವುದು ಮಾತ್ರವಲ್ಲದೆ, ವ್ಯತಿರಿಕ್ತವಾಗಿ ಜಾತಿವಾದಿ, ಕೋಮುವಾದಿ ಮತ್ತು ಬಡವರ ವಿರೋಧಿ ಗುಂಪು ಮತ್ತು ಪಕ್ಷಗಳ ಕಾರ್ಯಕರ್ತರು ಹೆಚ್ಚಳವಾಗುತ್ತಿರುವುದನ್ನು ಆಶ್ಚರ್ಯಪೂರಕವಾಗಿ ನೋಡುತ್ತಾ ಕುಳಿತಿದ್ದಾರೆ. ಹಿಂದೂ ಪುನರುತ್ಥಾನವಾದದ ಸಿದ್ದಾಂತವನ್ನು ಬಹಿರಂಗವಾಗಿ ಆಚರಣೆ ಮಾಡುವ ಈ ಪಕ್ಷಗಳು ಭಾರತೀಯ ಪರಂಪರೆಯಲ್ಲಿ ಕೊಳೆತು ನಾರುತ್ತಿರುವುದನ್ನು ಪ್ರತಿನಿಧಿಸುತ್ತವೆ ಹಾಗೂ ಅಂಬೇಡ್ಕರ್ ರವರನ್ನು ತಮ್ಮ ಮಾದರಿಗಳಲ್ಲೊಬ್ಬರಂತೆ ಪ್ರತಿಬಿಂಬಿಸುತ್ತಾ ವಿಚಾರಗೆಟ್ಟ ಧೈರ್ಯವನ್ನು ಪ್ರದಶರ್ಿಸುತ್ತವೆ. ದಲಿತ ಯುವಕನು ಅವರ ತೆಕ್ಕೆಗೆ ಸೇರಲು ಭದ್ರತೆಯ ಕಾರಣಗಳ ಜೊತೆಗೆ, ಏಳಿಗೆ ಹೊಂದಿರುವ ದಲಿತರ ಕುಲೀನ ಸ್ವಭಾವವು ಈ ಪ್ರಕ್ರಿಯೆಯನ್ನು ನಿಜಕ್ಕೂ ಪ್ರಭಾವಗೊಳಿಸಿದೆ. ಆಳುವ ವರ್ಗಗಳ ಇವೆಲ್ಲ ಪ್ರಯತ್ನಗಳಲ್ಲಿ ಸಾಮಾನ್ಯವಾಗಿರುವುದೇನೆಂದರೆ ಬಂಡಾಯವೇಳುವ ಗುಣವನ್ನು ಅಂಬೇಡ್ಕರ್ ರವರಿಂದ ಕಿತ್ತೆಸೆಯುವುದೇ ಆಗಿದೆ.

ಅವರೊಬ್ಬ ಭಾರತ ಸಂವಿಧಾನದ ಪ್ರಧಾನ ಶಿಲ್ಪಿಯಾಗಿದ್ದು, ಪಾಲರ್ಿಮೆಂಟರಿ ಪ್ರಜಾಪ್ರಭುತ್ವಕ್ಕೆ ಬದ್ದರಾಗಿ ಹಿಂಸೆ ಅಥವಾ ಕ್ರಾಂತಿಯನ್ನು ಪಸರಿಸುವ ಯಾವುದೇ ಸಿದ್ದಾಂತಕ್ಕೆ ಅವರು ವಿರುದ್ದವಾಗಿದ್ದರು ಎಂದು ತೋರಿಸುವುದು ವಿರೋಧಿಗಳಿಗೆ ಅನುಕೂಲಸಿಂಧುವಾಗಿದೆ. ತಮ್ಮ ಜೀವನವನ್ನು ಉತ್ತಮಗೊಳಿಸಲು ದಲಿತರು ತಾಳ್ಮೆಯಿಂದ ಕಾದು ಮನವೊಷ್ಟಿ ಹೆಣಬೇಕೆಂಬ ಅರ್ಥದಲ್ಲಿ ನಿಧಾನಗತಿಯ ಬದಲಾವಣೆಯ ಪರವಾಗಿ ಅವರಿದ್ದರೆಂದು ಪ್ರತಿಬಿಂಬಿಸಲಾಗುತ್ತಿದೆ. ಲೌಕಿಕ ವಸ್ತುಗಳಿಂದ ಸಂಪೂರ್ಣ ದೂರವಿರುವ ಸ್ಥತಿಯಾದ ನಿವರ್ಾಣವನ್ನು ಉತ್ತೇಜಿಸುವ ಬೋಧಿಸತ್ವ ಅವರಾಗಿದ್ದರೆಂದು ಪ್ರತಿಬಿಂಬಿಸಲಾಗುತ್ತದೆ. ಇವೆಲ್ಲ ಪ್ರತಿ ರೂಪಗಳು ದಲಿತರ ವಿಮೋಚನಾ ಹೋರಾಟಗಳಿಗೆ ಅತೀವವಾದ ಹಾನಿಯುಂಟುಮಾಡಿದೆ. ಕೆಲವೊಂದು ಪ್ರತಿಮೆಗಳು ಉದ್ದೇಶಪೂರ್ವಕವಾಗಿದ್ದು, ನಾಚಿಕೆಗೆಟ್ಟ ವಿರೂಪವನ್ನು ಅಂಬೇಡ್ಕರ್ರವರಿಗೆ ಮಾಡಲಾಗಿದ್ದರೆ, ಮತ್ತೆ ಕೆಲವು, ವಿವಿಧ ವಿಷಯಗಳ ಮೇಲೆ ಅಂಬೇಡ್ಕರ್ ರವರೇ ಸ್ವತಃ ತಳೆದ ನಿಲುಮೆಗಳಿಂದ ಮೂಡಿ ಬಂದ ಅಪ್ಪಟ ಸಂಕಟವನ್ನು ಪ್ರತಿನಿಧಿಸುತ್ತವೆ. ಪ್ರಸಕ್ತ ಐತಿಹಾಸಿಕ ಘಟಕದಲ್ಲಿ ಸಮಗ್ರ ಜನಪರ ಬದಲಾವಣೆಯ ದೃಷ್ಟಿಕೋನದಿಂದ ಪ್ರಜಾಸತ್ತಾತ್ಮಕ ಕ್ರಾಂತಿಯು ಅತ್ಯಂತ ಜರೂರಾಗಿದೆ. ಈ ಕ್ರಾಂತಿಯ ಚಾಲಕ ಶಕ್ತಿಯು ದಲಿತರಿಂದ ಮುನ್ನಡೆಯಬೇಕಾಗಿದೆ. ರಾಷ್ಟ್ರದಲ್ಲಿ ಯಾವುದೇ ವಿಚಾರವಾದ ಚಳುವಳಿಯನ್ನು ದಲಿತರು & ಗಿರಿಜನರ ಬುಡದಲ್ಲಿ ಮಾತ್ರವೇ ಬೆಳೆಸಬಹುದೆಂದು ಬಲವಾದ ಸಾಕ್ಷಿವನ್ನು ಒದಗಿಸುತ್ತದೆ. ದಲಿತರ ಆಶೋತ್ತರಗಳ ಇತಿಹಾಸವು ಪ್ರತಿಮೆಯಾಗಿ ಅಪಾಯಕಾರಿ ಮಟ್ಟದಲ್ಲಿ ಭಾರತದ ಕ್ರಾಂತಿಕಾರಿ ಪ್ರವಾಹವನ್ನು ಹಿಡಿದಿಟ್ಟಿರುವ ಅಣೆಕಟ್ಟೆಯ ಕೀಲಿ ಕೈ ಅಂಬೇಡ್ಕರ್ ಆಗಿದ್ದಾರೆ. ಭಾರತೀಯ ಪ್ರಜಾಸತ್ತಾತ್ಮಕ ಕ್ರಾಂತಿಯು ವಾಸ್ತವವಾಗಿ ಜರುಗುವವರೆಗೂ ಅಂಬೇಡ್ಕರ್ ರವರ ರೂಪವು ಕ್ರಾಂತಿಕಾರಿ ಬದ್ದತೆಯನ್ನು ಕಾಡುತ್ತಲೇ ಇರುತ್ತದೆಂದು ಒಪ್ಪಿದ್ದಲ್ಲಿ, ಈ ಕ್ರಾಂತಿಯ ಪ್ರಧಾನ ಭೂಮಿಕೆಯಲ್ಲಿ ಇತೆರ ಶೋಷಿತ ಜನರೊಂದಿಗೆ ದಲಿತರ ಕೈಯಲ್ಲಿ ಸೈದ್ದಾಂತಿಕ ಶಸ್ತ್ರವಾಗಿ ಅಂಬೇಡ್ಕರ್ ರವರು ಪ್ರತಿನಿಧಿಸುತ್ತಾರೆ, ಆಗ ಇಂಥಹ ಉದ್ದೇಶಗಳಿಗೆ ತಾಳೆಹೊಂದುವ ವೈಚಾರಿಕ ನೆಲೆಯಲ್ಲಿ ಅಂಬೇಡ್ಕರ್ ರವರನ್ನು ಪುನರ್-ವ್ಯಾಖ್ಯೆ ಮಾಡುವ ಅಗತ್ಯವನ್ನು ಕಾಣಬಹುದಾಗಿದೆ. ಅವರ ವಿಚಾರಗಳ ವೈಚಾರಿಕ ಅಥರ್ೈಸುವಿಕೆಯಲ್ಲಿ ವಾಸ್ತವತೆಗೆ ಸಂಬಂದಿಸಿದಂತೆ ಇರುವ ಗೊಂದಲಗಳ ಹಲವು ಮಗ್ಗಲುಗಳನ್ನು ಸ್ಪಷ್ಟಪಡಿಸಬಹುದು. ಕೆಲವೊಂದು ಕಾರಣಗಳಿಗಾಗಿ ದೋಷಪೂರಿತ ರೂಪಗಳಲ್ಲಿ ನೆಲೆಕಂಡಂತಿರುವ ಅವರ ಮೂಲವಿಚಾರದ ತರ್ಕಬದ್ದ ಅಂದಾಜಿನ ಅಗತ್ಯ ಹೆಚ್ಚಿನದಾಗಿದೆ. ಬುದ್ದ ಧರ್ಮದ ತಮ್ಮ ಪುನರ್-ವ್ಯಾಖ್ಯೆಯ ಸಂದರ್ಭದಲ್ಲಿ ಸ್ವತಃ ಅವರೇ ಹಾದಿತೋರಿಸಿರುವಂತೆ, ತಾವೊಂದು ಶಕ್ತಿಯುತ ಸಿದ್ದಾಂತವನ್ನು ಹೊಂದುವ ಸಲುವಾಗಿ ದಲಿತರು ಈ ಕಾರ್ಯವನ್ನು ಕೈಗೆತ್ತಿಕೊಳ್ಳುಬೇಕಾಗಿದೆ. ಒಂದು ಸಾಮಾಜಿಕ ಗುಂಪಾಗಿ ಅವರ ಭವಿಷ್ಯವು ಬಹುತೇಕ ಈ ಕಾರ್ಯದ ಮೇಲೆ ನಿಧರ್ಾರವಾಗಿದೆ.
ಈ ಅಗತ್ಯಯತ್ತ ಬೆರಳು ತೋರುವ ಹಲವು ಕುರುಹುಗಳನ್ನು ಸ್ವತಃ ಅಂಬೇಡ್ಕರ್ರವರೆ ಬಿಟ್ಟು ಹೋಗಿದ್ದಾರೆ. ತಮ್ಮ ಜೀವನಪರ್ಯಂತ ಹೋರಾಟದ ನಂತರದ ರೇಜಿಗೆ ಹುಟ್ಟಿಸುವ ಸ್ಥಿತಿಯನ್ನು ಕಂಡು ತಮ್ಮ ಜೀವನದ ಕೊನೆಯಲ್ಲಿ ಅವರು ದು:ಖಿಸಿದುದರಲ್ಲಿ ಸಂಶಯವೇನೂ ಇಲ್ಲ. ತಮ್ಮ ಧ್ಯೇಯೋದ್ದೇಶ ಸಾಧಿಸುವ ಮುಂದಾಳುಗಳೆಂದು ತಾವೆಣಿಸಿದ್ದ ಶಿಕ್ಷಣ ದಲಿತರ ವಿಶ್ವಾಸಘಾತುಕತನದ ಕುರಿತು ಅವರು ಸಿಡಿಯುತ್ತಾರೆ. ಹಳ್ಳಿಗಳಲ್ಲಿರುವ ತಮ್ಮ ಜನತೆಗೆ ತಾವೇನೂ ಮಾಡಲಾಗಲಿಲ್ಲವೆಂಬ ಸಂಕಟದಿಂದ ವ್ಯಥೆಪಡುತ್ತಿದ್ದರು. ತಮ್ಮ ಜೀವನದ ಕೆಲವು ವರ್ಷಗಳನ್ನೇ ಕಳೆದುಕೊಂಡು ರಚಿಸಿದ ಸಂವಿಂಧಾನವನ್ನು ತಾವೇ ತಿರಸ್ಕರಿಸುವಂತಾಯಿತು. ತಮ್ಮ ಕನಸಿನ ಸಿವಿಂಧಾನ (ಸಕರ್ಾರಗಳು ಮತ್ತು ಅಲ್ಪಸಂಖ್ಯಾತರು) ವನ್ನು ಜಾರಿಗೊಳಸಿಲು ಸಾಧ್ಯವಾಗಿದೆ. ತಮ್ಮ ನೋವನ್ನು ತಾವೇ ನುಂಗಿಕೊಳ್ಳಬೇಕಾಯಿತು. ಸ್ವತಂತ್ರ ಭಾರತದಲ್ಲಿ ಜನ-ವಿರೋಧಿ ಸಕರ್ಾರ ಮೂಡಿಬಂದುದಕ್ಕೆ ತಾವೇ ಕ್ಷಮೆಯಾಚಿಸುವಂತಾಯಿತು. ಈ ಬೆಳವಣಿಗೆಯ ಹಿಂದಿರುವ ಕರಣಗಳನ್ನು ಕಂಡುಕೊಳ್ಳಲು ವಿಶ್ಲೇಷಣಾ ಸಾಧನಗಳು ಅವರಲ್ಲಿರಲಿಲ್ಲ. ತಮ್ಮ ಜೀವನದ ಯೆಮ ಕಾಲದಲ್ಲಿ ಅವರ ಅಧಿಕ ಧಾಮರ್ಿಕತೆ & ಭಾವನಾವಾದಗಳನ್ನು ಕಹುಶಃ ಈ ನೋವಿನ ಅಭಿವ್ಯಕ್ತಿಯೆಂದ ಪರಿಗಣಿಸಬಹುದು. ಸಾಮಾಜಿಕ ತಂತ್ರಜ್ಞಾನೊಬ್ಬ ಸಮಸ್ಯಗಳೊಂದಿಗೆ ಮುಳುಗಿ ಹೋಗಿರುತ್ತಾರೆ; ವ್ಯವಸ್ಥೆಯ ದೋಷಪೂರಿತ ವಿನ್ಯಾಸಗಳನ್ನು ಅವನು ಸಹಿಸಲುಸಾಧ್ಯ. ಅಂಬೇಡ್ಕರ್ ರವರು ನಂಬುಗೆಯಿರಿಸಿದ್ದ ಬಹುತೇಕ ಪ್ರತಿಯೊಂದು ವಸ್ತವೂ ಇಂದು ವಿರೋಧ ಕೂಟವಾಗಿರುವುದನ್ನು ಕಾಣಬಹುದು. ಅವರ ಶೈಕ್ಷಣಿಕ ಸಮಾಜ, ಬೌದ್ದವಾದ ಅವರ ದೂರದೃಷ್ಟಿ, ಅವರು ಕಲ್ಪಿಸಿಕೊಂಡು ರಾಜಕೀಯ ಪಕ್ಷ, ಸಾಮಾಜಿಕ ಸುಧಾರಣೆಗಳು ಕೆಲವು ಉದಾಹರಣೆಗಳಾಗಿವೆ. ಅದರ ತರ್ಕಬದ್ದ ನೆಲೆಯತ್ತ ದಲಿತ ಚಳುವಳಿಯನ್ನು ಮುಟ್ಟಿಸಲು ಅಂಬೇಡ್ಕರ್ ವಿಚಾರಗಳನ್ನು ಸಿದ್ದಾಂತವಾಗಿ ಬಳಸಿಕಳ್ಳಬೇಕಧರೆ ಅವುಗಳ ವಿಮಶರ್ಾತ್ಮಕ ಪರಾಮಶರ್ೆಯ ಅಗತ್ಯತೆಯನ್ನು ತದನಂತರದ ದು:ಖಕರ ಸನ್ನಿವೇಶಗಳು ಒತ್ತಿಹೇಳುತ್ತವೆ. ಈ ಪ್ರಕ್ರಿಯನ್ನು ವಿಶ್ವಾಸದಿಂದ ಅನುಸರಿಸಿದಲ್ಲಿ, ಪ್ರಪಂಚದ ಕ್ರಾಂತಿಕಾರಿ ಹೋರಾಟದೊಂದಿಗೆ ದಲಿತರ ಹೋರಾಟವನ್ನು ಜೀವ ಸಲೆಯ ಕೊಂಡಿಯಾಗಿಸುವಲ್ಲಿ ಪುನರ್-ವ್ಯಾಖ್ಯೆಗೊಂಡ ಅಂಬೇಡ್ಕರ್ ಒಂದು ಕ್ರಾಂತಿಕಾರಿ ಪ್ರತಿಮೆಯಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾವಿಲ್ಲ. ಇದು ದಲಿತರ ಹೋರಾಟವನ್ನು ಅಕ್ಷರಕ; ಜಾಗತೀಕರಣಗೊಳಿಸುತ್ತದೆ.
ದಲಿತ ಮತ್ತು ಕಮ್ಯುನಿಷ್ಟ್ ಚಳುವಳಿಯ ಪ್ರತ್ಯೇಕತೆಯು ಭಾರತದ ಕ್ರಾಂತಿಗೆ ಮಹಾನ್ ನಷ್ಟವುಂಟುಮಾಡಿದೆ. ಈ ಚಳುವಳಿಯು ಬೆನ್ನೆಲುಬಾಗಿರುವ ದಲಿತ & ತುಳಿತಕ್ಕೊಳಗಾದ ಜನರನ್ನು ಅದರಿಂದ ದೂರವಿಟ್ಟಿರುವುದು ಅದರ ಬೆಳವಣಿಗೆಯನ್ನು ಕುಂಠಿತಗೊಳಿಸಿತು. ಮತ್ತೊಂದೆಡೆ, ವರ್ಗ ಹೋರಾಟದ ಸಿದ್ದಾಂತವನ್ನು ಕೈಬಿಟ್ಟದ್ದರಿಂದ ದಲಿತರ ವಾಸ್ತವ ಸಮಸ್ಯೆಗಳನ್ನು ಹಿಡಿದಿಟ್ಟು ಅದನ್ನು ಪರಿಹರಿಸಲು ದಲಿತ ಚಳುವಳಿಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಆ ಜನಾಂಗದ ಪರಿಸ್ಥತಿ ದುಸ್ತರವಾಗುತ್ತಾ ಹೋಯಿತು, ಅವರ ಚಳುವಳಿಯು ಆಳುವ ವರ್ಗಗಳು ಕುಟಿಲೋಪಾಯದಿಂದ ದಲಿತರ ಮುಂದೆಸೆದ ಲಘುವಾದ ತಾತ್ಕಾಲಿಕ ಮತ್ತು ಭಾವನಾತ್ಮಕ ವಿಷಯಗಳ ಸುತ್ತ ಗಿರಕಿ ಹೊಡೆಯತೊಡಗಿತು. ಹಾಗೂ ಅವರ ನಾಯಕರುಗಳು ತಮ್ಮ ಸ್ವ-ಹಿತಾಸಕ್ತಿ ಮತ್ತು ಮಥಾಸ್ಥಿತಿ ಕಾಯ್ದುಕೊಳ್ಳುವ ರಾಜಕೀಯದಲ್ಲಿ ಮುಳುಗಿಹೋದರು. ಅಂಬೇಡ್ಕರ್ ರವರ ಪ್ರಕಲ್ಪನೆಗಳನ್ನು ವ್ಯವಸ್ಥೆತವಾಗಿ ಪರೀಕ್ಷಿಸುವುದು ಮತ್ತು ಮಾಕ್ಸರ್್ವಾದದ ನೆಲೆಯಲ್ಲಿ ಅವರನ್ನು ಪುನರ್-ಸ್ಥಾಪಿಸುವುದನ್ನು ಅಂಬೇಡ್ಕರ್ ರವರ ಪುನರ್-ವ್ಯಾಖ್ಯಾನ ಯೋಜನೆಯು ಒಳಗೊಂಡಿದೆ.
ಅಂಬೇಡ್ಕರ್ ರವರು ಮಾಕ್ಸರ್್ರನ್ನು ಹಲವು ವಿಧದಲ್ಲಿ ಆಗಾಗ್ಗೆ ಉಲ್ಲೇಖಿಸಿದರೂ ತತ್ವಶಾಸ್ತ್ರದ ತಳಹದಿಯಲ್ಲಿ ಮಾಕ್ಸರ್್ ರವರ ವಾಸ್ತವ ನೆಲೆಯೊಂದನ್ನು ಅವರು ಚಚರ್ಿಸಲಿಲ್ಲ. ಭೌತವಾದವನ್ನು ಹೀಗಳೆಯುವ ಅಭಿಪ್ರಾಯಗಳನ್ನು ಹೊರತುಪಡಿಸಿದರೆ ಸೈದ್ಧಾಂತಿಕ ನೆಲೆಯಲ್ಲಿ ಮಾಕ್ರ್ಸರವರೊಂದಿಗೆ ಒಪ್ಪಲಾಗದಂಥಹವುದೇನೂ ಅಂಬೇಡ್ಕರ್ರವರಿಗಿರಲಿಲ್ಲವೆಂಬುದನ್ನು ಗಮನಿಸಬೇಕು. ಮ್ಯಾಕ್ಸರ್್ವಾದಕ್ಕೂ ಈ ಅಭಿಪ್ರಾಯಗಳಿಗೂ ಏನೇನೂ ಸಂಬಂಧವಿಲ್ಲವೆಂಬುದನ್ನು ಮಾಕ್ಸರ್್ರವರ ದ್ವಂದ್ವಾತ್ಮಕ ಬೌತವಾದದೊಡನೆ ಅಲ್ಲ. ಈ ಅಭಿಪ್ರಾಯಗಳನ್ನು ಪ್ರೇರೇಪಿಸಿದ್ದು ಬಹುಶಃ ವಸ್ತು (ಒಚಿಣಜಡಿಚಿಟ) ವಲ್ಲದ ಮತ್ತೆಲ್ಲವನ್ನೂ ಕಡೆಗಣಿಸುವ ಪ್ರವೃತ್ತಿಯುಳ್ಳ ವಿರೂಪಿ ಭೌತವಾದದ ಆಚರಣೆ ಮತ್ತು ದಲಿತರ ಚಳುವಳಿಗಳ ಬಗ್ಗೆ ಮತ್ಸರ ತೋರಿದುದ. ದ್ವಂದ್ವಾತ್ಮಕ ಭೌತವಾದ, ಚಾರಿತಿಕ ಭೌತವಾದ, & ವೈಜ್ಞಾನಿಕ ಇದರಾಚೆಗೆಂದೂ ಅವರ ಚಚರ್ಿಸಿದಂತೆ ಕಾಣುವುದಿಲ್ಲ. ಮಾನವ ಇತಿಹಾಸದ ಏಕ-ರೇಖಾವಾಹಿನಿಯ ಕುರಿತು ಅವರ ಸಂಶಯ ವ್ಯಕ್ತಪಡಿಸಿದರಾದರೂ ದುರದೃಷ್ಟವಶಾತ್ ಅದಕ್ಕೆ ಭಿನ್ನಭಿಪ್ರಾಯಗಳ ವಿಷಯಗಳನ್ನು ಗ್ರಹಿಸುವಷ್ಟು ಆಳವಿರಲಿಲ್ಲ. ಅದರ್ಿಷ್ಟ ಪರಿಸ್ಥಿತಿಯಲ್ಲಿ ಇತಿಹಾಸವು ಕವಲುವಾಹಿನಿಗಳಾಗಿ ಬೆಳೆಯುತ್ತದೆಂಬ ಅರ್ಥನೀಡುವ ಅವರ ಸಂಶಯದ ಯಥಾರ್ಥತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
ಅಂಬೇಡ್ಕರ್ ಮತ್ತು ಮಾಕ್ಸರ್್ರವರು ಹಲವು ವಿಷಯಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದಾರೆ. ಶೋಷಣಾರಹಿತ ಸಮಾಜವನ್ನು ತಲುಪುವ ಒಂದೇ ಸಮಾನ ಗುರಿಯಿಂದ ಇಬ್ಬರೂ ಉತ್ತೇಜಿತಗೊಂಡಿದ್ದರು. ಬಹುವಾಗಿ ಕುಳಿತಕ್ಕೊಳಗಾದ ಜನರಿಗಾಗಿ ಇಬ್ಬರೂ ದೃಡವಾದ ಬದ್ದತೆ ಹೊಂದಿದ್ದರು. (ತಾಂತ್ರಿಕವಾಗಿ ಮಾಕ್ಸರ್್ ರವರು ಹಾಗಲ್ಲವೆಂದು ಹೇಳಬಹುದು) ಮತ್ತು ಮಾನವ ಜನಾಂಗದ ಅಭ್ಯುದಯಕ್ಕಾಗಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಸಂರಕ್ಷಕ ಪಾತ್ರವನ್ನು ಅವರಲ್ಲಿ ಕಂಡಿದ್ದರು. ಇತಿಹಾಸದ ವೈಜ್ಞಾನಿಕ ಅಧ್ಯಯನದಿಂದ ಮಾಕ್ಸರ್್ರವರು ತಮ್ಮ ನಿಯಮವನ್ನು ರೂಪಿಸಿದರು ಮತ್ತು ಬಂಡವಾಳಶಾಹಿ ಯುಗದಲ್ಲಿ ದುಡಿಯುವ ವರ್ಗವು ಸಮಾಜಿವಾದಿ ಕ್ರಾಂತಿಯ ಸಂರಕ್ಷಕರೆಂದು ಕಂಡುಕೊಂಡರು. ಭಾರತದಲ್ಲಿ ಅಂಬೇಡ್ಕರ್ ರವರಿಗೆ ದುಡಿಯುವ ವರ್ಗವು ಕಾಣಸಿಗಲಿಲ್ಲ ಮತ್ತು ಜಾತಿಗಳನ್ನು ನಾಶಪಡಿಸುವವರೆಗೂ ಅದರ ಉದಯದ ಸಾಧ್ಯತೆಯು ಕಣಲಿಲ್ಲ. ಹೀಗಾಗಿ ಅದರ ಹೀನಾಯ ಬಲಿಪಶುಗಳಾದ ಅಸ್ಪೃಶ್ಯರನ್ನು ಸಂರಕ್ಷಕರ ಪಾತ್ರದಲ್ಲಿರಿಸಿಕೊಂಡು ಜಾತಿ-ವಿರೋಧಿ ಚಳುವಳಿಯನ್ನು ಆರಂಭಿಸುವ ಅಗತ್ಯತೆಯನ್ನು ಕಂಡರು. ವಿವಿಧ ಚೌಕಟ್ಟನ್ನು ಅವರಿಬ್ಬರೂ ಅನುಸರಿಸಬೇಕಾಗಿದ್ದರಿಂದ ಭಾಷೆ ಮತ್ತು ಪದವಿನ್ಯಾಸದಲ್ಲಿ ವ್ಯತ್ಯಾಸಗಳಿದ್ದವು. ಮಾಕ್ಸರ್್ರವರು ಸಂಕ್ಲೆಷ್ಟವಾದ ತತ್ವಶಾಸ್ತ್ರೀಯ ರಚನೆಗಾಗಿ ಶ್ರಮಿಸಿ ತಮ್ಮದೇ ಸ್ವಂತ ವಿಚಾರ ವಸ್ತು ಅಥವಾ ಕ್ರಾಂತಿಯ ವಿಜ್ಞಾನದೊಂದಿಗೆ ಹೊರಹೊಮ್ಮಿದರು. ಅಂಬೇಡ್ಕರ್ರವರು ಪ್ರಸಕ್ತ ಪ್ರಕ್ಷಬ್ದತೆಯೊಳಗೆ ಮುಳಿಗಿಹೋದರು ಹಾಗೂ ತತ್ವಶಾಸ್ತ್ರವನ್ನು ತಮ್ಮ ಸಾಂತ್ವನಕ್ಕಾಗಿ ಅಥವಾ ಆಚರಣೆಯ ಬೆಂಬೆಲಕ್ಕಾಗಿ ಬಳಸಿದರು. ಅವರ ವಿಚರಗಳ ಬಹು ಭಾಗವು ವಿವಾದಾತ್ಮಕ ಛಾಯೆಯನ್ನು ಹೊಂದಿರುವುದರಿಂದ ಸಂದರ್ಭನುಸಾರ ಅದನ್ನು ಬಳಸದಿದ್ದಲ್ಲಿ ಅಪಾಯವಿರದೇ ಇಲ್ಲ. ಮಾಕ್ಸರ್್ರವರಂತೆ ಅಂಬೇಡ್ಕರ್ ರವರು ವಿಶ್ವವನ್ನು ಬದಲಾಯಿಸುವುದೇ ತತ್ವಶಾಸ್ತ್ರದ ಧ್ಯೇಯವೆಂದು ಭಾವಿಸಿದ್ದರು. ಯಾವುದೇ ಇಸಂಗಳಲ್ಲಿ ತಾವು ನಂಬಿಕೆಯಿಟ್ಟಿಲ್ಲವೆಂದು ಹೇಳುವ ಅವರ ಹೇಳಿಕೆಯನ್ನು ಶಾಸ್ತ್ರಂಧ-ವಿರೋಧಿಯೆಂದು ಪರಿಗಣಿಸಬಹುದು. ಇದೇ ಪರಿಭಾವದಲ್ಲಿ ತಾವು ವಾಸ್ತವವಾದಿಯೆಂದು ಅವರು ಹೇಳುತ್ತಿದ್ದದ್ದು. ಇದರ ಮತ್ತು ನಾನು ಮಾಕ್ಸರ್ಿಸ್ಟ್ ಅಲ್ಲವೆಂದು ಹೇಳಿದ ಕಾಲರ್್ಮಾಕ್ಸರ್್ರವರ ಹೇಳಿಕೆಗಳ ನಡುವೆ ಅದೆಂಥಹ ಸಾಮ್ಯತೆ ಇದೆಯಲ್ಲವೆ!
ಈ ಪ್ರಬಂಧವು ಅವರ ಕಾರ್ಯಗಳ ಮೌಲ್ಯ ಮಾಪನವೇನಲ್ಲ. ಅವರ ಸಮಕಾಲೀನರುಗಳಲ್ಲೆಲ್ಲ ಇನ್ನೂ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿರುವುದು ಅವರ ಮಾತ್ರವೆ. ಭವಿಷ್ಯದ ಆಯಾಮವನ್ನು ಪ್ರತಿನಿಧಿಸುವ ಪ್ರಶ್ನೆ ಅವರಾಗಿದ್ದಾರೆ. ದಲಿತರಿಗೆ ಸಂದಿರುವ ಎಲ್ಲದಕ್ಕೂ ಅವರು ಆ ಐತಿಹಾಸಿಕ ವ್ಯಕ್ತಿಯಾದ ಅಂಬೇಡ್ಕರ್ ರವರಿಗೆ ಚಿರಋಣಿಯಾಗಿದ್ದಾರೆ. ಆದರೆ ಅಂಬೇಡ್ಕರ್ರವರು ನಿಬಂದನೆಗೊಳಪಟ್ಟು ಕಾರ್ಯನಿರ್ವಹಿಸಿದ ಸೂಚನೆಗಳಿಗೇ ಮುಂದಿನ ಪೀಳಿಗೆಯು ಅಂಟಿಕೊಳ್ಳಬೇಕೆಂದು ಇದರರ್ಥವಲ್ಲ. ಅವರೊಂದಿಗೂ ಹಾಗೆ ಭಾವಿಸಿರಲಿಲ್ಲ. ಆದರೆ, ಅವರು ಬರೆದದ್ದಕ್ಕೆ ಅಥವಾ ಹೇಳಿದ್ದಕ್ಕೆ ಪಕ್ಕಾ ವಿರೋಧವಾಗಿ ಅವರ ವಿಧ್ಯಾಥರ್ಿಗಳು ಸದಾ ಉತ್ಸಕರಾಗಿ ಅದರಲ್ಲೂ ವಿಶೇಷವಾಗಿ ಅವರಂದುಕೊಂಡಿದಕ್ಕೆ ವತರ್ಿಸುತ್ತಿರುವುದೇ ನಿಖರವಾಗಿ ಅಂಬೇಡ್ಕರ್ರವರ ದುರ್ಘಟನೆಯಾಗಿದೆ. ಇದರ ನೇರನುಡಿ ಸ್ವಭಾವವು ಹಲವು ಜನರಿಗೆ ನೋವುಂಟು ಮಾಡುತ್ತದಾದರೂ ರೋಗವು ನಿಧರ್ಿಷ್ಟ ಮಟ್ಟವನ್ನು ಮೀರಿ ಉಲ್ಬಣಿಸಿದಾಗ ಕಹಿ ಔಷದ ಬಳಸದೆ ವಿಧಿಯಿಲ್ಲ. ಈ ಆತ್ಮಾವಲೋಕನ ಪ್ರಕ್ರಿಯೆಯ ಅಗತ್ಯತೆಯು ಅಂಬೇಡ್ಕರ್ ರವರಿಗೆ ನೈಜ ವಿಧೇಯತೆಯಾಗಿದೆಯೇ ಹೊರತು ದಮನಕ್ಕೊಳಗಾದವರ ಏಳಿಗೆಗಾಗಿ ಅವರ ಬದ್ದತೆಯಾಗಿದೆಯೇ ಹೊರತು ಇದೇನೂ ದೈವನಿಂದನೆಯಲ್ಲ. ವಿರೋಧಾಭಾಸವೆಂಬಂತೆ, ಅವರನ್ನು ದೇವರೆಂದು ಪೂಜಿಸುವವರೇ ಅವರ ದುಷ್ಟ ವಿರೋಧಿಗಳು. ದಲಿತ ಯುವಪೀಳಿಗೆಯು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ತನ್ನ ತತ್ವ ಹಗೂ ಅಭಿಪ್ರಾಯಗಳನ್ನು ಹೇರಿ ತನ್ನ ವಿದ್ಯಾಥರ್ಿಗಳನ್ನು ಯಾವುದೇ ಮಹಾನ್ ವ್ಯವಸ್ಥೆಯು ಅಂಗವಿಕಲರನ್ನಾಗಿ ಮಾಡುವುದಿಲ್ಲ. ಬದಲಿಗೆ ಅವರನ್ನು ಜಾಗೃತಗೊಳಿಸುತ್ತಾ ಅವರ ಯೋಚನಾಶಕ್ತಿಯನ್ನು ಉತ್ತೇಜಿಸುತ್ತಾನೆಂದು ಸ್ವತ: ಅಂಬೇಡ್ಕರ್ ರವರೇ ನುಡಿದಿದ್ದಾರೆ. ಆ ಅಭಿಪ್ರಾಯಗಳನ್ನು ಅನುಸರಿಸಲೇಕೆಂಬುದೇನಿಲ್ಲ.

____________________
ಮೂಲ: ಆನಂದ್ ತೆಲ್ತುಂಬ್ಡಿ
ಅನು: ಜಯ