ಶ್ರೀ ಕೃಷ್ಣ ಸ್ತುತಿ ಹಾಗೂ ಕಂಸನ ಧ್ವಂಸ ಎಂಬ ಭಕ್ತಿ ಗೀತೆ

ಶ್ರೀ ಕೃಷ್ಣ ಸ್ತುತಿ ಹಾಗೂ ಕಂಸನ ಧ್ವಂಸ ಎಂಬ ಭಕ್ತಿ ಗೀತೆ

ಕವನ

ಕಸ್ತೂರೀ ತಿಲಕಂ ಲಲಾಟಫಲಕೇ ವಕ್ಷಃ ಸ್ಥಲೇ ಕೌಸ್ತುಭಂ|

ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ|

ಸರ್ವಾಂಗೇ ಹರಿ ಚಂದನಂ ಕುಲಯಂ ಕಂಠೇಚ ಮುಕ್ತಾವಳೀ|

ಗೋಪಸ್ತ್ರೀ ಪರಿವೇಷ್ಟಿತೋ  ವಿಜಯತೇ ಗೋಪಾಲಚೂಡಾಮಣಿಃ||

ಹಣೆಯಲ್ಲಿ ಕಸ್ತೂರಿ ತಿಲಕ ಧರಿಸಿದವನು, ಎದೆಯಲ್ಲಿ ಕೌಸ್ತುಭ ಮಣಿ ಧರಿಸಿದವನು, ಗಂಧವನ್ನು ಪೂಸಿಕೊಂಡವನು, ಮುತ್ತು ಹಾರಮಣಿಗಳನ್ನು ತೊಟ್ಟು ಅಲಂಕೃತನಾದವನು, ಗೋಪಿಕಾ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನು, ಯದುಶ್ರೇಷ್ಠನು ಆದ ಶ್ರೀ ಗೋಪಾಲಕೃಷ್ಣ ನು ವಿಜಯಗೈಯಲಿ,ಅವನಿಗೆ ನಮಸ್ಕಾರಗಳು.

-ರತ್ನಾ ಭಟ್ ತಲಂಜೇರಿ

(ನಿತ್ಯ ಶ್ಲೋಕ--ಸಂಗ್ರಹ)

***

ಭಕ್ತಿ ಗೀತೆ- ಕಂಸನ ಧ್ವಂಸ

 

ಮಥುರ ಪುರದಿ ಜನಿಸಿ ಬಂದ

ಧರ್ಮ ಜ್ಯೋತಿ ನೀನಾದೆ

ಮಧುರ ಭಾವ ಮನದಿ ತಂದ

ದೇವಕಿ ಕಂದ ನೀನಾದೆ ||

 

ದುಷ್ಟ ಕಂಸ ಕಣ್ಣಿನಿಂದ

ತಪ್ಪಿಸುತಲಿ ಹೊತ್ತೊಯ್ದು

ಕಷ್ಟದಿಂದ ತಲೆಯಮೇಲೆ

ದೇವ ನಿನ್ನ ಕರೆದೊಯ್ದು||

 

ತಾಯಿಗಂಗೆ  ಹರ್ಷದಿಂದ

ನಿಂಗೆ ದಾರಿ ಬಿಟ್ಟಾಳೊ

ಆದಿಶೇಷ ರಕ್ಷೆಗೆಂದು

ಹೆಡೆಯ ಬಿಚ್ಚಿ ನಿಂದಾನೊ ||

 

ನಂದ ರಾಜ ಬೃಂದಾವನದಿ

ನಿನ್ನ ಹಾದಿ ಕಾಯ್ದಾನೊ

ಬಂದ ನಿನ್ನ ಪುತ್ರನಂತೆ

ಸಾಕಿ ಸಲುಹಿ ಪೊರೆದಾನೊ||

 

ಗೋಕುಲದೊಳು ವೇಗದಿಂದ

ಬೆಳೆದು ಕೃಷ್ಣ ಮೆರೆದಾನೊ

ವ್ಯಾಕುಲ ನೀಗಿ ಕಂಸನನ್ನು

ಧ್ವಂಸ ಮಾಡಿ ಮೆರದಾನೊ||

 

-ಶ್ರೀ ಈರಪ್ಪ ಬಿಜಲಿ ಕೊಪ್ಪಳ 

 

ಚಿತ್ರ್