ಶ್ರೀ ದುರ್ಗೆ ಪಾವನೆ

ಶ್ರೀ ದುರ್ಗೆ ಪಾವನೆ

ಕವನ

ಶ್ರೀ ದುರ್ಗೆ ಪಾವನೆ ಅಂಬಾ ಭವಾನಿ

ತಾಯೇ ರಕ್ಷಿಸು ಜಗದಾದಿಮಾಯೆ

ಕಾಯೇ ಅನವರತ ಜೀವಸಂಕುಲವ

ಕೆಟ್ಟ ಸೃಷ್ಟಿಯ ನಾಶ ಮಾಡು  ಮಾತೆ//

 

ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ

ಚಂಡ ಮುಂಡರ ಶಿರವ ಚೆಂಡಾಡಿದೆ

ಧೂಮ್ರಾಕ್ಷನನು ಧೂಳಿಪಟ ಗೈದೆ

ಸುಗ್ರೀವಗೆ ಕನಿಕರಿಸಿ ಒಲಿದೆ//

 

ಶುಂಭ ನಿಶುಂಭರ ಹನನ ಮಾಡಿದೆ

ರಕ್ತ ಬೀಜಾಸುರನ ನೆತ್ತರ ಕಕ್ಕಿಸಿದೆ

ದೇವಿ ಕಾತ್ಯಾಯಿನಿ ಕಾಳಿಕಾಂಬೆ

ಚಂಡಿ ಚಾಮುಂಡಿ ಪೊರೆಯೊ ಅಂಬೆ//

 

ಅಕ್ಷರ ಜ್ಞಾನವನು ನೀಡು ಶಾರದೆ

ಸರಸ್ವತಿ ಪೂಜೆಯ ಮಾಡಿ ನಮಿಸುವೆ

ಉಸಿರಿರುವ ತನಕ ಪೆಸರ ಪೇಳುವೆ

ಶರಣಾಗಿ ಅಂಘ್ರಿಗೆ ತಲೆಯ ಬಾಗುವೆ//

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್