ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್
ರಾಜರ್ಷಿ ಬಿರುದಾಂಕಿತ ದೊರೆ
ಪ್ರಜೆಗಳ ಮೇಲಿದೆ ನಿಮ್ಮ ಋಣದ ಹೊರೆ
ಬದುಕಿದ್ದು ಕೆಲವು ವರುಷ
ಮಾಡಿದ್ದು ಹಲವಾರು ಸಾಹಸ
ತಂದೆ ತ್ಯಜಿಸಿದರು ಇಹಲೋಕ
ಚಿಕ್ಕ ಪ್ರಾಯದಲ್ಲಿ ಪಟ್ಟಾಭಿಷೇಕ
!!ರಾಜರ್ಷಿ ಬಿರುದಾಂಕಿತ ದೊರೆ!!
ಮಾತೆಯ ಅಣತಿಯಂತೆ ರಾಜ್ಯ ನಿರ್ವಹಣೆ
ಪ್ರಾಯಕ್ಕೆ ಬಂದ ತಕ್ಷಣ ಬಿತ್ತು ಪ್ರಜಾಪಾಲನೆಯ ಹೊಣೆ
ಸಕಲ ವಿದ್ಯೆಯ ಪರಿಣತಿ ಪಡೆದರು
ಸಕಲರನ್ನೂ ಸಮಾನವಾಗಿ ಕಂಡರು
!!ರಾಜರ್ಷಿ ಬಿರುದಾಂಕಿತ ದೊರೆ!!
ಹಲವಾರು ವಿದ್ಯಾಕೇಂದ್ರಗಳ ಸ್ಥಾಪನೆ
ಅಣೆಕಟ್ಟು ನಿರ್ಮಿಸಿದ ಜಲದಾತನು ನೀನೇ
ಮೌಢ್ಯಾಚರಣೆಯನ್ನು ನಿರ್ಮೂಲನೆ ಮಾಡಿದಿರಿ
ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದಾಗ
!!ರಾಜರ್ಷಿ ಬಿರುದಾಂಕಿತ ದೊರೆ!!
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ
ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ
ವಿದ್ಯುತ್ ದೀಪ ಬೆಳಗಿಸಿದ ಮೊದಲಿಗ ನೀನೇ
ಉದ್ಯೋಗ ಸೃಷ್ಟಿಗೆ ನಿರ್ಮಿಸಿದೆ ಹಲವಾರು ಕಾರ್ಖಾನೆ
!!ರಾಜರ್ಷಿ ಬಿರುದಾಂಕಿತ ದೊರೆ!!
ಎಷ್ಟು ಹೇಳಿದರೂ ಮುಗಿಯದು ನಿಮ್ಮಯ ಗುಣಗಾನ
ಕನ್ನಡ ನಾಡಿನ ಹೆಮ್ಮೆಯ ಮಗನ ಆಡಳಿತದ ವೈಖರಿಯನ್ನ
ಕನ್ನಡಿಗರು ಎಂದೆಂದಿಗೂ ಮರೆಯಲಾಗದ ಸರ್ವಶ್ರೇಷ್ಠ ದೊರೆ
ಅವರೇ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರೇ
!!ರಾಜರ್ಷಿ ಬಿರುದಾಂಕಿತ ದೊರೆ!!
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್ (ವಿಘ್ನೇಶ್ವರ ಪ್ರಿಯ)