ಶ್ರೀ ರಾಘವೇಂದ್ರ ಚರಿತ್ರೆ

ಶ್ರೀ ರಾಘವೇಂದ್ರ ಚರಿತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಬೆ. ಗೋ. ರಮೇಶ್
ಪ್ರಕಾಶಕರು
ಶ್ರೀ ಗಣೇಶ ಪ್ರಕಾಶನ, ಬಳೇಪೇಟೆ, ಬೆಂಗಳೂರು- ೫೬೦೦೫೩
ಪುಸ್ತಕದ ಬೆಲೆ
ರೂ. ೪೦.೦೦, ಮುದ್ರಣ ೨೦೦೯

ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ ತೀರ್ಥರವರೆಗಿನ ೧೭ ಮಂದಿ ಯತಿಯರ ಹೆಸರು ಮತ್ತು ಕಾಲಾವಧಿಯನ್ನು ನೀಡಿದ್ದಾರೆ. ಶ್ರೀ ರಾಘವೇಂದ್ರ ತೀರ್ಥರ ಬಳಿಕ ಇಪ್ಪತ್ತು ಯತಿಗಳು ಶ್ರೀಮಠದ ಗುರುಗಳಾಗಿ ಹೋಗಿದ್ದಾರೆ. ಅವರ ಮುನ್ನುಡಿಯ ಪ್ರಮುಖಾಂಶ ಹೀಗಿದೆ 

“ಶ್ರೀ ಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಮುದ್ರಾಘವೇಂದ್ರ ಗುರುಸಾರ್ವಭೌಮರು ಸುಜನರ ಕಷ್ಟ ಪರಿಹಾರಕ್ಕಾಗಿ ಭಗವಂತನ ಸಂಕಲ್ಪದಂತೆ ಅವತರಿಸಿದ ದೇವತೆ. ಇವರು ಸಾಕ್ಷಾತ್ ಶ್ರೀ ಪ್ರಹ್ಲಾದ-ಬಾಹ್ಲೀಕ ಹಾಗೂ ವ್ಯಾಸರಾಜ ಅವತಾರವೆಂದೂ ಈ ಮೂರು ಅವತಾರಗಳಲ್ಲಿ ಸತ್ಕರ್ಮಗಳನ್ನೂ ಮಾಡಿ ಸಾತ್ವಿಕ ಪುಣ್ಯ ಸಂಚಯನ ಮಾಡಿದಂತೆ ಬೇಡವಾದ ಪುಣ್ಯವನ್ನೂ ಗಳಿಸಿ ಅದು ಮುಕ್ತಿಗೆ ನಿಷ್ಪ್ರಯೋಜಕವಾಗಿ ಪುನಃ ಅವತರಿಸಿರೆಂದೂ ಹೇಳುತ್ತಾರೆ. ತಾವು ಗಳಿಸಿದ ಅನಿಷ್ಟ ಪುಣ್ಯವನ್ನು ಕ್ಷಯಿಸಲು ಏಳುನೂರು ವರುಷಗಳು ಬೇಕಾಗಬಹುದೆಂದು ಅವರೇ ಹೇಳಿರುತ್ತಾರೆನ್ನಲಾಗಿದೆ. ಇಂಥ ಮಹಿಮಾನ್ವಿತರಾದ ಶ್ರೀ ರಾಘವೇಂದ್ರರು ತಮ್ಮ ಪುಣ್ಯ ಸಂಚಯನವನ್ನು ಮಾನವರ ಉದ್ಧಾರಕ್ಕಾಗಿ ವ್ಯಯಿಸುತ್ತಿರುವರು.”

ಸುಮಾರು ೧೨೦ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ರಾಘವೇಂದ್ರ ಸ್ವಾಮಿ ಗುರುಗಳ ಜೀವನ ಚರಿತ್ರೆಯನ್ನು ಬಹಳ ಸೊಗಸಾಗಿ ವರ್ಣಿಸಲಾಗಿದೆ.