ಶ್ರೀ ರಾಯರ ಆರಾಧನೆ
ಬೆಂಗಳೂರೊಂದರಲ್ಲೇ, ಇನ್ನೂರು ಚಿಲ್ಲರೆ ಸಂಸ್ಥೆಗಳಲ್ಲಿ ಶ್ರೀರಾಯರ ಅರಾಧನೆ ಮೂರು ದಿನ ವಿಜೃಂಭಣೆಯಿಮದ ನಡೆಯಿತು. ಲಕ್ಷಾಂತರ ಭಕ್ತರು ಹಯಗ್ರೀವ ಪ್ರಸಾದದಿಂದ ಸಂತೃಪ್ತರಾದರು. ಆಯಾ ಆಡಳಿತ ಮಂಡಲಿಗಳು ಈ ವಿಚಾರದಲ್ಲಂತೂ ಜಿಪುಣತನ ತೋರಿಸುವುದಿಲ್ಲ; ಮತ್ತು ಸ್ವಯಂಸೇವಕರೂ ಸೇವೆಗೆ ಒದಗಿಬರುತ್ತಾರೆ; ಉತ್ಸವ ಅದ್ದೂರಿಯಾಗುತ್ತದೆ.
ಸಿದ್ಧಾಂತ ಪ್ರವರ್ತಕರಾದ ಮಧ್ವಾಚಾರ್ಯರ ಆರಾಧನೆಯನ್ನೂ, ಅದಕ್ಕೆ ತಾರ್ಕಿಕ ಚೌಕಟ್ಟು ಹಾಕಿಕೊಟ್ಟ ಜಯತೀರ್ಥರ ಅರಾಧನೆಯನ್ನೂ ಮಾಧ್ವರು ಮೂರು ದಿನ ಆಚರಿಸುವುದಿಲ್ಲ. ರಾಯರ ಆರಾಧನೆಗಾದರೋ ಮಾಧ್ವೇತರರ ಆರ್ಥಿಕ ಔದಾರ್ಯವೂ ಹೆಚ್ಚಾಗಿ ಒದಗಿ ಬರುವುದರಿಂದ ಶ್ರಾವಣದೀ ಸಂಭ್ರಮ ಅತಿಶಯವಾಗಿರುತ್ತದೆ.
ಈ ಬಾರಿ ಸಣ್ಣ ಮಠವೊಂದರಲ್ಲೇ ಅರಾಧನೆಗೆ ವಾರ ಮುಂಚೆಯೇ, ಕಣ್ಣಂದಾಜಿನ ಪ್ರಕಾರ 25 ಲಕ್ಷ ಸಂಗ್ರಹವಾಗಿತ್ತಂತೆ. ಅಲ್ಲದೆ ಭಕ್ತರು ನೀಡುವ ಬೇಳೆ, ಬೆಲ್ಲ, ಅಕ್ಕಿ ಇತ್ಯಾದಿಗಳ ಸಂಗ್ರಹ ಬೇರೆ. ಆರಾಧನೆ ವೇಳೆಯಲ್ಲಂತೂ ಕಾಣಿಕೆ ಮಿಕ್ಕು-ಮೀರುವಷ್ಟು! ರಾಯರ ಆರಾಧನೆ, ಮಠವೆಂಬ ಭಕ್ತಮಾಡಲಿಗಳಿಗೆ ಲಕ್ಷ-ಲಕ್ಷ ತಂದುಕೊಡುವ ಮೂಲ ಸ್ರೋತ.
ಇದರೊಂದು ಭಾಗ ಸರಕಾರಕ್ಕೇಕೆ ಸಂದಾಯವಾಗಬಾರದು? ಮಠವೆಂಬ ನೋಂದಾಯಿತ/ ಅನೋಂದಾಯಿತ ಸಂಸ್ಥೆಗಳನ್ನು ಸೆವಾ ತೆರಿಗೆ, ವೃತ್ತಿ ತೆರಿಗೆ ಮತ್ತು ವಾಣಿಜ್ಯ ತೆರಿಗೆ ವ್ಯಪ್ತಿಗೆ ತಂದರೆ ಶ್ರೀರಾಯರಿಗೆ ಮುನಿಸಾಗುತ್ತದೆಯೇ?
Comments
ಉ: ಶ್ರೀ ರಾಯರ ಆರಾಧನೆ
In reply to ಉ: ಶ್ರೀ ರಾಯರ ಆರಾಧನೆ by partha1059
ಉ: ಶ್ರೀ ರಾಯರ ಆರಾಧನೆ
In reply to ಉ: ಶ್ರೀ ರಾಯರ ಆರಾಧನೆ by ಆರ್ ಕೆ ದಿವಾಕರ
ಉ: ಶ್ರೀ ರಾಯರ ಆರಾಧನೆ
In reply to ಉ: ಶ್ರೀ ರಾಯರ ಆರಾಧನೆ by partha1059
ಉ: ಶ್ರೀ ರಾಯರ ಆರಾಧನೆ
ಉ: ಶ್ರೀ ರಾಯರ ಆರಾಧನೆ
In reply to ಉ: ಶ್ರೀ ರಾಯರ ಆರಾಧನೆ by partha1059
ಉ: ಶ್ರೀ ರಾಯರ ಆರಾಧನೆ