ಷಷ್ಠಿ ದಿನದೆ ವಂದನೆ
ಕವನ
ಕಾರ್ತಿಕೇಯ ಸುಬ್ರಹ್ಮಣ್ಯ
ಚರಣಕೆರಗುವೆ
ಹರನ ಸುತನೆ ಗಣಪನನುಜ
ನಿನಗೆ ನಮಿಸುವೆ
ಕುಕ್ಕೆಯಲ್ಲಿ ನೆಲೆಸಿದಂಥ
ನಾಗರೂಪನೆ
ಮಾರ್ಗಶಿರದ ಷಷ್ಠಿ ದಿನದೆ
ಭಕ್ತಿ ವಂದನೆ
ಅಸುರರನ್ನು ಅಳಿಸಿದಂಥ
ಪುಣ್ಯ ದಿನವಿದು
ಜಗದಲಿರುವ ಶಿಷ್ಟ ಜನಕೆ
ಅಭಯವಿತ್ತುದು
ಸುರರ ಸೇನೆಗಧಿಪ ನೀನು
ಭಜಿಪೆ ನಿನ್ನನು
ನವಿಲನೇರಿ ಬಾರೊ ದೊರೆಯೆ
ಹರಸು ನಮ್ಮನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
