ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್

ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್

ಬರಹ

’ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್’ ಎಂದರು ಹಿರಿಯರು. ಅಂದರೆ ಸಂತಸವೇ ವ್ಯಕ್ತಿಗೆ ಶ್ರೇಷ್ಠ ಸಂಪತ್ತು (ನಿಧಿ). ಅಂದರೆ ಮನುಷ್ಯ ಯಾವಾಗಲೂ ಸಂತೋಷಚಿತ್ತನಾಗಿರಬೇಕು. ನಾವು ಬಹಳ ಸಾರಿ ಸಂತಸದಿಂದ ಇರುವ ಎಲ್ಲಾ ಅವಕಾಶಗಳಿದ್ದರೂ ಸಂತುಷ್ಟರಾಗಿರುವುದಿಲ್ಲ. ಅಂದರೆ ನೆಮ್ಮದಿಯಿಂದಿರಲಾಱೆವು. ಆದರೆ ಕೆಲವು ಸಮಸ್ಯೆಗಳು ಸಂತಸದಿಂದಿರಲು ಅಡ್ಡ ಬರುತ್ತವೆ. ಉದಾಹರಣೆಗೆ ಹಸಿವಿನಿಂದ ಬೞಲುವ ಮನುಷ್ಯನಿಗೆ "ಖುಷಿಯಾಗಿರು, ನಗುತ್ತಾ ಇರು" ಎಂದರೆ ಅದು ಹಾಸ್ಯಾಸ್ಪದವಾಗುತ್ತದೆ. ಹಾಗೆಯೇ ಹಸಿದವನನ್ನು ನಮ್ಮ ಮಾತು ರೇಗಿಸಲೂ ಬಹುದು. ಹಾಗೆಯೇ ಅನಾರೋಗ್ಯದಿಂದಾದ ತೊಂದರೆಯೂ ಮನುಷ್ಯನ ಸಂತಸಕ್ಕೆ ಅಡ್ಡಿಯಾಗಬಹುದು. ಆದರೆ ಸಂಪತ್ತು ತನ್ನ ಬೞಿಯಿಲ್ಲವೆಂದು ತಾನು ಸಂತಸದಿಂದಿರಬಹುದಾದ ಚಣವನ್ನು ಹಾೞುಮಾಡಿಕೊಂಡರೆ ಅವನೊಬ್ಬ ಮೂರ್ಖ. ಹಾಗಾಗಿ ಸಂತಸವಾಗಿದ್ದು ನಮ್ಮ ದೌರ್ಬಲ್ಯಗಳನ್ನು ಮೀಱಲು ಪ್ರಯತ್ನಿಸುವುದು ಜಾಣತನ. ಹಾಗೆಯೇ ಸಂತಸಕ್ಕೆ ಕೆಲವು ಸ್ಥಿತಿಗಳು ಅಡ್ದವಾಗಿದ್ದಾಗ ಅದನ್ನು ನಿವಾರಿಸಿಕೊಳ್ಳುವುದೂ ಜಾಣ್ಮೆಯೇ. ಆದರೆ ಕೆಲವು ಸಾರಿ ಅಸೌಕರ್ಯಗಳಿದ್ದಾಗ್ಯೂ ಅದನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೂ ಸಂತೋಷಚಿತ್ತರಾಗಿರುವುದು ಒಂದು ದೊಡ್ದ ಸಾಧನೆ. ನಮ್ಮ ಸಂತೋಷಕ್ಕೆ ಅಡ್ಡಬರುವ ಕೆಲವು ಮೂಲಭೂತ ಸಮಸ್ಯ್ರೆಗಳು
೧) ಅನಾರೋಗ್ಯ ಹಾಗೂ ಅದಱಿಂದಾಗುವ ತೊಂದರೆಗಳು.
೨) ಸಂತಸ ಹದಗೆಡಿಸುವ ನೆರೆಹೊರೆಯವರು
೩) ಬಡತನ
ಸಂತಸದಿಂದಿರುವಾಗ ನಮ್ಮ ನೆಮ್ಮದಿಯನ್ನು ತಮ್ಮ ಮಾತುಗಳಿಂದ ಹಾೞು ಮಾಡುವ ಜನಗಳಿಗೆ ಸೊಪ್ಪು ಹಾಕದಿರುವುದು ನಮ್ಮ ಸಂತಸವನ್ನು ಹಾಗೇ ಉೞಿಸುತ್ತದೆ. ಯಾಕೆಂದರೆ ಕೆಲವು ಮಂದಿಗೆ ನಮ್ಮ ಸಂತಸವನ್ನು ಹಾೞುಗೆಡಿಸುವುದೇ ಕೆಲಸ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet