ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ

ಬರಹ

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅಲ್ಫೋನ್ಸಾ ಬಗ್ಗೆ ಅಕ್ಟೋಬರ್‍ ೧೨ರಂದು (ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್ umeshkumar ವ್ಯಕ್ತಿ ವಿಷಯ, ಪರಿಚಯ, ಸಾಧನೆ 29 Oct 12 2008 - 11:00pm ) ಬರೆದ ಲೇಖನಕ್ಕೆ ೨೫ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಆ ಬರೆಹ ಅವಸರದ್ದಾಗಿತ್ತು. ನಿಮಗೆಲ್ಲಾ ಗೊತ್ತೇ ಇರುವಂತೆ ಪತ್ರಿಕಾ ಬರೆಹ ಅವಸರದ ಸಾಹಿತ್ಯ. ಅದರಲ್ಲೂ ಟಿ.ವಿ. ಮಾಧ್ಯಮದ ಬಗ್ಗೆ ಹೆಚ್ಚು ಹೇಳೋದೇ ಬೇಕಿಲ್ಲ. ಹ್ಞಾಂ! ಹಾಗೇ ಟೈಂಸ್‌ ನೌ ಟಿವಿಯನ್ನೂ ವೀಕ್ಷಿಸುತ್ತಿದ್ದೆ. ಅದರಲ್ಲಿ ಬಂದ ಮಾಹಿತಿ ಮತ್ತು ಅಂತರ್ಜಾಲ ತಾಣ ಜಾಲಾಡಿದಾಗ ನನಗೆ ಸಿಕ್ಕ ಪ್ರಥಮ ಮಾಹಿತಿ ಆಧರಿಸಿ ಆ ಬರೆಹ ಸಿದ್ಧಪಡಿಸಿದ್ದೆ.

ಭಾರತೀಯ ಕ್ರಿಶ್ಚಿಯನ್ನರಿಗೆ ಎಂದು ಬಳಸಿದ ಬಗ್ಗೆ ಪ್ರತಿಕ್ರಿಯೆ ಬಂದಿತ್ತು. ಎಲ್ಲ ಭಾರತೀಯರಿಗೆ ಸಂತಸವಾಗಿದ್ದರೆ ಇಡೀ ದೇಶಾದ್ಯಂತ ಈ ಸಂಭ್ರಮ ಕಾಣಬೇಕಿತ್ತು. ಆದರೆ ಅದು ಕಂಡು ಬರಲಿಲ್ಲ. ಹೀಗಾಗಿ ಆ ಪದ ಪ್ರಯೋಗ ಮಾಡಿದೆ. ಟೈಮ್ಸ್‌ ನೌ ಚಾನೆಲ್‌ನಲ್ಲಿ ಎರಡನೇ ಭಾರತೀಯರೊಬ್ಬರಿಗೆ ಸಂತ ಪದವಿ ಎಂದು ಸುದ್ದಿ ಬಿತ್ತರಿಸುತ್ತಿದ್ದರು. ಆದರೆ ಅಲ್ಲೂ ಮೊದಲ ಭಾರತೀಯ ಸಂತ ಯಾರು ಎಂಬುದು ದಾಖಲಾಗಿರಲಿಲ್ಲ. ಅಂತರ್ಜಾಲ ತಾಣ ಹುಡುಕಿದಾಗ ಅಲ್ಲೂ ಮೊದಲ ಭಾರತೀಯ ಸಿಸ್ಟರ್‍ ಎಂದೇ ಕಂಡು ಬಂತು ಹೀಗಾಗಿ ಗೊಂದಲ ಬೇಡ ಎಂದು ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‍ ಎಂದೇ ಬರೆದೆ.

ಹೇಗೇ ಇರಲಿ. ಇಷ್ಟೊಂದು ಪ್ರತಿಕ್ರಿಯೆಗಳು ಭಾವನೆಗಳು ಈ ಬರೆಹಕ್ಕೆ ವ್ಯಕ್ತವಾಗಿದೆ. ಕೆಲವೊಂದು ವಾಸ್ತವಾಂಶಗಳೂ ಬಿಂಬಿತವಾಗಿದೆ. ಆ ಮೂಲಕ ಕೆಲವೊಂದು ಮಾಹಿತಿ ಒದಗಿಸಿದ ಎಲ್ಲರ ಅಭಿಪ್ರಾಯಗಳಿಗೂ ಧನ್ಯವಾದಗಳು.