ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)
ಬರಹ
ಕಳೆದ ಬಾರಿ ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು ಎಂಬ ವಿಷಯದ ಕುರಿತಾಗಿ ಬರೆದಾಗ, ಕೆಲವು ಸಂಪದಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲಿ ಮಹೇಶ್ ಪ್ರಸಾದ್ ನೀರ್ಕಾಜೆಯವರು ಅವರು ಸಂಪದದಲ್ಲಿ ವಿಷಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದರು. ಆಗ ಹೊಳೆದದ್ದೇ ಈ ವಿಷಯ ಯಾರಾದರೂ ಸಂಪದಿಗರು ದಿನಕ್ಕೊಂದು ವಿಷಯವನ್ನು ನೀಡಿ ಅದರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಉಳಿದ ಸಂಪದಿಗರು ಅದರ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರೆ ಹೇಗೆ ಎಂದು..
ಇಂದಿನ ವಿಷಯ - ಅಂದಿನ ಭಾರತ - ಇಂದಿನ ಭಾರತ
ಅಂದಿನ ಭಾರತ - ಅಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿರದಿದ್ದರು ಭಾರತೀಯರಲ್ಲಿ ದೇಶಾಭಿಮಾನ ಹೆಚ್ಚಿತ್ತು, ಒಗ್ಗಟ್ಟಿತ್ತು. ಹೋರಾಟದ ಕೆಚ್ಚು ಇತ್ತು. ಸುಭಾಷ್, ಭಗತ್, ಆಜಾದ್ ರಂತಹ ದಿಟ್ಟ ವೀರ ಹೋರಾಟಗಾರರಿದ್ದರು. ದೇಶಕ್ಕೋಸ್ಕರ ಜೀವ ನೀಡುವ ಮನೋಸ್ಥೈರ್ಯವಿತ್ತು.
ಇಂದಿನ ಭಾರತ - ಸ್ವ್ವಾತಂತ್ರ್ಯ ನಂತರ ಭಾರತ ಪಾಕ್ ವಿಭಜನೆಯಾಯಿತು, ಒಬ್ಬರೊಬ್ಬರ ನಡುವೆ ದ್ವೇಷ, ಅಸೂಯೆ, ರಾಜಕೀಯ, ಲಂಚ, ಹಗರಣಗಳು, ಉಗ್ರವಾದಿಗಳ ಅಟ್ಟಹಾಸ, ಕಳ್ಳ,ಸುಳ್ಳ, ಕಪಟ ಸ್ವಾಮೀಜಿಗಳು, ಬಾಬಾಗಳು, ಕೋಟಿ ಕೋಟಿ ಲೂಟಿ.
ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆಗಳು. ಯಾರೊಬ್ಬರ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ ನನಗಿಲ್ಲ. ಈ ವಿಷಯದ ಕುರಿತಾಗಿ ಎಲ್ಲರೂ ಮುಕ್ತವಾಗಿ ಚರ್ಚಿಸಬಹುದು. ಹಾಗೆಯೇ ಈ ನನ್ನ ಹೊಸ ವಿಷಯದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ತಿಳಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)
In reply to ಉ: ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ) by asuhegde
ಉ: ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)