ಸಂಪದಿಗರಲ್ಲಿ ಒಂದು ಭಿನ್ನಹ
ಬರಹ
ಸಂಪದ ಭಾವನೆಯಿರುವವರಿಗೆ ಮತ್ತು ಬರೆಯುವವರಿಗೆ, ವಿಶೇಷವಾಗಿ ಸಾಹಿತ್ಯ ಕೃಷಿಯತ್ತ ಒಲವಿರುವ - ಇನ್ನೂ ನೇಗಿಲು ಸಹ ಸರಿಯಾಗಿ ಹಿಡಿಯಲು ಬಾರದ - ನನ್ನಂಥವರಿಗೆ ಒಂದು ವರದಾನ. ಶ್ರೀಯುತ ಹರಿ ಮತ್ತು ತಂಡದ ಬತ್ತದ ಉತ್ಸಾಹ ಮತ್ತು never say die again ಎನ್ನುವ attitude ನ ಫಲ ಈ ಸುಂದರ ಸಂಪದ.
ಸಂಪದವನ್ನು ಮತ್ತು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವತ್ತ ಒಂದು ಪುಟ್ಟ ಹೆಜ್ಜೆಯಾಗಿ ನನ್ನ ಕೆಳ ಕಾಣಿಸಿದ ಕೆಲವೊಂದು ಅನಿಸಿಕೆಗಳನ್ನು ದಯಮಾಡಿ ಚರ್ಚಿಸಿ ಎಂದು ಸಂಪದಿಗರಲ್ಲಿ ವಿನೀತ ವಿಜ್ಞಾಪನೆ.
ಸಂಪದಕ್ಕೆ ಲೇಖನ ಅಥವಾ ಬ್ಲಾಗ್ ಬರೆದಾಗ ಸಹಜವಾಗಿಯೇ ಪ್ರತಿಕ್ರಿಯೆಗಳು ಬರುತ್ತವೆ. ಪ್ರತಿ ಪ್ರತಿಕ್ರಿಯೆಗೂ ಲೇಖಕ ಪ್ರತ್ಯೇಕವಾಗಿ ವಂದನೆಗಳು ಅಥವಾ ಇನ್ನೇನಾದರೂ ಬರೆಯಲೇಬೇಕೆ? ಹಾಗೆ ಬರೆದರೆ ಸಂಪದದ bandwitdth ಮೇಲೆ ಒತ್ತಡ ಬೀಳಬಹುದೇ ಅಥವಾ ಪ್ರತಿ ಪ್ರತಿಕ್ರಿಯೆಗೂ ಪ್ರತಿಕ್ರಯಿಸುವುದು ಶಿಷ್ಟಾಚಾರವೇ? ದಯವಿಟ್ಟು ತಿಳಿಸಿ.
ಸಂಪದದಲ್ಲಿ ಬರೆದ ನಂತರ ಅದೇ ಬರಹವನ್ನು ನಮ್ಮ ಬ್ಲಾಗುಗಳಲ್ಲೂ ಹಾಕಿಕೊಂಡರೆ ತಪ್ಪೇ?
ಸಂಪದದಲ್ಲಿ ಬರೆಯುವ ನವ ಬರಹಗಾರರನ್ನು ಪ್ರೋತ್ಸಾಹಿಸುವ ಬರಹ ಅಪರೂಪ. ಕೆಲವೊಮ್ಮೆ ಯಾವುದೇ ಪ್ರತಿಕ್ರಿಯೆಗಳೂ ಇಲ್ಲದೆ ಬರಹ ಅನಾಥನಂತೆ ದಯನೀಯವಾಗಿ ನಿಲ್ಲುತ್ತದೆ. ಹಾಗೆ ಆದಾಗ ಬರೆದ ವ್ಯಕ್ತಿ (self conscious ಆಗಿದ್ದರೆ ) ಮುದುಡಿಕೊಂಡು ಬರವಣಿಗೆಯನ್ನು ಕೈಗೆತ್ತಿಕೊಳ್ಳಲು ಹಿಂಜರಿಯುತ್ತಾನೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಹೊಸ ಚೈತನ್ಯದ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚು ಎನ್ನುವುದು ನನ್ನ ಅಭಿಪ್ರಾಯ.
ಸಂಪದದಲ್ಲಿ ಬರೆಯುವಾಗ ಪದ ಪ್ರಯೋಗ, ವ್ಯಾಕರಣ, ಇನ್ನಿತರ ತಪ್ಪುಗಳನ್ನು ಹಿರಿಯರು ( ಬರವಣಿಗೆಯಲ್ಲಿ ಹಿರಿಯರು ) ಎತ್ತಿ ತೋರಿಸಿದರೆ ಮಹದುಪಕಾರ. ಈ ವಿಷಯಗಳ ಬಗ್ಗೆ ಅಸಡ್ಡೆ ( "ಸಬ್ ಕುಚ್ ಚಲ್ತಾ ಹೈ" ನಿಲುವು ) ಆಗಾಗ ಕಾಣಲು ಸಿಗುತ್ತದೆ.
ನಮ್ಮ ಚಟುವಟಿಕೆ ಅಥವಾ ಬೇರೇನಾದರೂ ಬರೆಯಲು message ಬೋರ್ಡ್ ನ ಅವಶ್ಯಕತೆ ಸಂಪದಕ್ಕೆಇದ್ದರೆ ಒಳ್ಳೆಯದಲ್ಲವೇ ಮತ್ತು ಅವಶ್ಯಕತೆ ಇದ್ದರೆ ಹರಿಯವರು ಇದಕ್ಕೆ ಒಪ್ಪಬಹುದೇ?
ವಿನೀತ ವಂದನೆಗಳು
ಅಬ್ದುಲ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದಿಗರಲ್ಲಿ ಒಂದು ಭಿನ್ನಹ
In reply to ಉ: ಸಂಪದಿಗರಲ್ಲಿ ಒಂದು ಭಿನ್ನಹ by kpbolumbu
ಉ: ಸಂಪದಿಗರಲ್ಲಿ ಒಂದು ಭಿನ್ನಹ
ಉ: ಸಂಪದಿಗರಲ್ಲಿ ಒಂದು ಭಿನ್ನಹ
ಉ: ಸಂಪದಿಗರಲ್ಲಿ ಒಂದು ಭಿನ್ನಹ
ಉ: ಸಂಪದಿಗರಲ್ಲಿ ಒಂದು ಭಿನ್ನಹ
ಉ: ಸಂಪದಿಗರಲ್ಲಿ ಒಂದು ಭಿನ್ನಹ
In reply to ಉ: ಸಂಪದಿಗರಲ್ಲಿ ಒಂದು ಭಿನ್ನಹ by shaamala
ಉ: ಸಂಪದಿಗರಲ್ಲಿ ಒಂದು ಭಿನ್ನಹ
In reply to ಉ: ಸಂಪದಿಗರಲ್ಲಿ ಒಂದು ಭಿನ್ನಹ by shaamala
ಉ: ಸಂಪದಿಗರಲ್ಲಿ ಒಂದು ಭಿನ್ನಹ
In reply to ಉ: ಸಂಪದಿಗರಲ್ಲಿ ಒಂದು ಭಿನ್ನಹ by shaamala
ಉ: ಸಂಪದಿಗರಲ್ಲಿ ಒಂದು ಭಿನ್ನಹ
ಉ: ಸಂಪದಿಗರಲ್ಲಿ ಒಂದು ಭಿನ್ನಹ
In reply to ಉ: ಸಂಪದಿಗರಲ್ಲಿ ಒಂದು ಭಿನ್ನಹ by abdul
ಉ: ಸಂಪದಿಗರಲ್ಲಿ ಒಂದು ಭಿನ್ನಹ