ಸಂಪದ ಸುದ್ದಿ ಪತ್ರ - ಜನವರಿ ೧೫ ೨೦೦೬
ಸಂಪದ ಸುದ್ದಿ ಪತ್ರದ ನಕಲೊಂದನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ಸಂಪದದಲ್ಲಿ ಹಲವರು ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಂಡಿಲ್ಲದಿರುವುದರಿಂದ ಇಲ್ಲೊಂದು ಕಾಪಿ.
ಸಂಪದ ಸುದ್ದಿ ಪತ್ರಕ್ಕೆ subscribe ಆಗಿಲ್ಲದವರು [:http://sampada.net/nl|ಈ ಪುಟ ನೋಡಿ].
*******
Readers who're seeing garbled text below can read copy of this mail in Kannada on the below URL:
[:http://sampada.net/files/sampada-jan15-newsletter.pdf]
(OR read how you can enable Unicode to read Kannada mails on your mail client at - [:http://sampada.net/fonthelp] )
ಎಲ್ಲ ಕನ್ನಡ ಓದುಗರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನುತ್ತ ಕನ್ನಡದಲ್ಲಿ ಮಾತನಾಡೋಣ, :)
ಸಕ್ರಿಯತೆ
'ಸಂಪದ'ದಲ್ಲಿ ಇತ್ತೀಚೆಗೆ ಹಲವು ಸದಸ್ಯರು ಸಕ್ರಿಯರಾಗಿರುವುದು ಸಂತಸದ ವಿಷಯ. ಸಹೃದಯಿಗಳು ಸುಮಾರು ತೊಡಕುಗಳನ್ನು ಹಾದು ತಮ್ಮ ತಮ್ಮ ಕಂಪ್ಯೂಟರುಗಳಲ್ಲಿ ಯೂನಿಕೋಡ್ ಸ್ಥಾಪಿಸಿಕೊಂಡು ಕೊನೆಗೆ ದಿನನಿತ್ಯದ ಅವಸರದ ಜೀವನದಲ್ಲೂ ಸಮಯಮಾಡಿಕೊಂಡು ಕನ್ನಡದಲ್ಲಿ ಬರೆಯುತ್ತಿರುವುದನ್ನು ನೋಡಿ ಖುಷಿಯಾಗುತ್ತದೆ.
ಸರಿಯಾಗಿ ಆರು ತಿಂಗಳ ಹಿಂದೆ ಸಂಪದ ಪ್ರಾರಂಭವಾದಾಗ 'ಹೀಗೆ ಸಂಪೂರ್ಣ ಯೂನಿಕೋಡ್ ನಲ್ಲಿರುವ ತಾಣವನ್ನು ಬಹಳಷ್ಟು ಜನ ನೋಡಲಾರರು, ಉಪಯೋಗಿಸಲಾರರು - ತಾಂತ್ರಿಕ ಕಾರಣಗಳಿಂದಾಗಿ' ಎಂದು ಪ್ರಚಲಿತವಾಗಿದ್ದ ನಂಬಿಕೆಯನ್ನು ಈಗ ನೀವೆಲ್ಲರೂ ಸುಳ್ಳಾಗಿಸಿದ್ದೀರಿ.
ಈ ೧೮೦ ದಿನಗಳಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ಕನ್ನಡಿಗರು 'ಸಂಪದ'ಕ್ಕೆ ಸದಸ್ಯರಾಗಿದ್ದಾರೆ. ೩೦೦ ಕ್ಕೂ ಹೆಚ್ಚು ಲೇಖನಗಳು (ದಿನಕ್ಕೆ ಸರಾಸರಿ ಎರಡರಂತೆ) ಈಗ ಸಂಪದ ಆರ್ಕೈವ್ ನಲ್ಲಿ ಯಾವಾಗ ಬೇಕಾದರೂ ತೆಗೆದು ಓದುವಂತೆ ಲಭ್ಯವಿದೆ. ದಾಖಲಾಗಿರುವ ೧೨೦೦ಕ್ಕೂ ಹೆಚ್ಚು ಕಾಮೆಂಟುಗಳು ಇಲ್ಲಿಯವರೆಗೂ ನಡೆದಿರುವ ಚರ್ಚೆಗಳಿಗೆ ಕನ್ನಡಿ ಹಿಡಿದಂತಿದೆ.
ಇಷ್ಟೆಲ್ಲ ನಿಮ್ಮೆಲ್ಲರ ಸಹಕಾರವಿಲ್ಲದೆ, ಸ್ವೀಕೃತಿಯಿಲ್ಲದೆ, ಆಸಕ್ತಿಯಿಲ್ಲದೆ, ಪಾಲ್ಗೊಳ್ಳುವಿಕೆಯಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸಂಪದ ತನ್ನ ಉದ್ದೇಶವನ್ನೀಡೇರಿಸುವತ್ತ ಸಾಗಿರುವುದರ credits ನಿಮ್ಮೆಲ್ಲರದ್ದು.
ಹೊಸ Podcast
ಈ ಬಾರಿ ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯನ್ನಾಗಿ ಮಾಡಬೇಕೆಂದಿರುವ ಚರ್ಚೆಯ ಕುರಿತು ನಾಟಕಕಾರ, ಭಾಷಾ ತಜ್ಞರಾದ ಲಿಂಗದೇವರು ಹಳೇಮನೆಯವರು ಮಾನ್ಯ ಓ ಎಲ್ ಎನ್ ಸ್ವಾಮಿಯವರೊಂದಿಗೆ ಮಾತನಾಡಿರುವ ಧ್ವನಿ ಮುದ್ರಣವನ್ನು Podcast ಆಗಿ ನಿಮಗರ್ಪಿಸುತ್ತಿದ್ದೇವೆ,
ಹೆಚ್ಚಿನ ವಿವರಗಳಿಗೆ ನೋಡಿ:
[:http://sampada.net/podcasts/4]
ಸಂಪದದಲ್ಲಿ ಕಂಗ್ಲಿಷಿನಿಂದ ಯೂನಿಕೋಡ್ ಗೆ ಪರಿವರ್ತಿಸಲು ಕನ್ವರ್ಟರ್:
ಈಗ ನಿಮ್ಮ ಲೇಖನ ಬರಹ transliteration ರೀತಿಯಲ್ಲಿ ರೋಮನ್ ಲಿಪಿಯಲ್ಲಿದ್ದಲ್ಲಿ (ಕಂಗ್ಲಿಷ್) ಅದನ್ನು ಯೂನಿಕೋಡ್ - ಕನ್ನಡ ಲಿಪಿಗೆ ಪರಿವರ್ತಿಸಲು ಸಾಧ್ಯ. ಕೆಳಗಿನ ಸಂಪರ್ಕ ನೊಡಿ:
[:http://sampada.net/converter]
ಸೂ: ಕನ್ವರ್ಟರ್ Internet Explorerನಲ್ಲಿ ಕೆಲಸ ಮಾಡದು.
'Firefox' download ಮಾಡಿಕೊಳ್ಳಿ: [:http://getfirefox.com/]
ಪಾಲ್ಗೊಳ್ಳಿ:
ನೀವು ಬರೆದ ಲೇಖನಗಳು, ಕವನಗಳು, ಕಥೆ, ಕಾದಂಬರಿಗಳಿದ್ದರೆ ಯೂನಿಕೋಡ್ ಬಳಸಿ ಸಂಪದ ಸಮುದಾಯದೊಂದಿಗೆ ಹಂಚಿಕೊಂಡು ಸಂಪದದಲ್ಲಿ ನೀವೂ ಪಾಲ್ಗೊಳ್ಳಬಹುದು. ಲೇಖನಗಳನ್ನು ನೀವೇ ಸ್ವತಃ (ಖುದ್ದಾಗಿ) ಸಂಪದಕ್ಕೆ ಸೇರಿಸಬಹುದು. ಸಂಪದಕ್ಕೆ ಲೇಖನವನ್ನಾಗಲಿ, ಕಾಮೆಂಟಾಗಲಿ ಸೇರಿಸಲು ನೀವು ಮೊದಲು ಅಲ್ಲಿ ಸದಸ್ಯರಾಗಬೇಕು. ಸದಸ್ಯರಾಗುವುದು ಸುಲಭ. ಕೆಳಗಿನ ಲಿಂಕ್ ನೋಡಿ:
[:http://sampada.net/user/register]
ಯೂನಿಕೋಡ್ ನಿಮ್ಮ ಕಂಪ್ಯೂಟರಿನಲ್ಲಿ ಹೇಗೆ ಎನೇಬಲ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಪ್ರಶ್ನೆಗಳಿದ್ದಲ್ಲಿ
[:http://sampada.net/fonthelp]
ನೋಡಿ.
ಧನ್ಯವಾದಗಳು,
- ಹರಿ ಪ್ರಸಾದ್ ನಾಡಿಗ್