ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ
ಬರಹ
ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ [kn:ನಾಗೇಶ ಹೆಗಡೆ|ನಾಗೇಶ್ ಹೆಗಡೆಯವರ] ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು.
ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ [:http://sampada.net/feedback|ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು]. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ ನಾಗೇಶ ಹೆಗಡೆಯವರ ಮುಂದಿಡಲಾಗುವುದು.
* ಪ್ರಶ್ನೆ ಕನ್ನಡದಲ್ಲಿರಲಿ.
* ಪ್ರಶ್ನೆ ಸ್ಪಷ್ಟವಾಗಿರಲಿ.
* ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ.
* ಪ್ರಶ್ನೆಯೊಂದಿಗೆ ನಿಮ್ಮ ಪೂರ್ಣ ಹೆಸರನ್ನು ತಿಳಿಸುವುದು ಮರೆಯಬೇಡಿ.
ಧನ್ಯವಾದಗಳು,
(ಪ್ರಶ್ನೆಗಳನ್ನು ಮೇಲೆ ಲಿಂಕ್ ಮಾಡಿರುವಂತೆ [:http://sampada.net/feedback|feedback ಫಾರ್ಮ್] ಮೂಲಕ ನಮಗೆ ಕಳುಹಿಸಬಹುದು)