ಸಂಸಾರವೆಂಬ ಸಾಗರ

ಸಂಸಾರವೆಂಬ ಸಾಗರ

ಕವನ

ಸಂಸಾರವೆಂಬ ಸಾಗರದಿ ಬದುಕಿನ ಸುಳಿ

ಬೇಡ ಬೇಡವೆಂದರೂ ಬರುತಿದೆ ಬಳಿ/

ಬ್ರಹ್ಮನ ಬರಹ ಎಂದೆಂದು ಅಳಿಸಲಾಗದು

ಮಹಾ ಅಲೆಯಂತೆ ಭೋರ್ಗರೆದು ಅಪ್ಪಳಿಸುವುದು//

 

ದಡ ಸೇರುವುದೆಂತು ಮನಸಿನಲಿ ಯೋಚನೆ

ತಲೆಗೆರೆದರೆ ಕಾಲಿಗಿಲ್ಲ ಎಂಬ  ಚಿಂತನೆ/

ಹಪಹಪಿಸುವ ಸರದಿ ಮನುಜನದು

ಕಷ್ಟಪಟ್ಟು ಕ್ರಮಿಸಲೇ ಬೇಕು ಹಾದಿ//

 

ಮಡದಿ -ಮಕ್ಕಳು ಪತಿ-ಪತ್ನಿ ಒಂದು ನಾವೆಯಂತೆ

ಅಂಬಿಗನ ತೆರದಿ ಹುಟ್ಟು ಹಾಕದಿರೆ ಸಾವಂತೆ/

ದಿನದ ಇಪ್ಪತ್ತನಾಲ್ಕು ಗಂಟೆ ಸಾಲದಂತೆ

ದುಡಿದು ಹೈರಾಣಾಗುವುದು ತಪ್ಪದಂತೆ//

 

ಎಲ್ಲೋ ಹುಟ್ಟಿ ಎಲ್ಲೆಲ್ಲೋ ಹರಿಯುವ

ಜಲಮೂಲವು ಒಂದಾಗಿ ಸೇರುವುದು ಕಡಲನು/

ನದಿಮೂಲ ಋಷಿಮೂಲ ಹುಡುಕುವುದು ಶ್ರಮವಂತೆ

ಮುಂದೆ ತಿಳಿನೀಲ ಬಣ್ಣದ ನೀರಂತೆ//

 

ಜೀವನ ಜಂಜಾಟದಿ ಗಳಿಸು ದುಡಿಯುತಲಿ

ಮೋಸ ವಂಚನೆ ಗೈಯದಿರು ಮನದಲಿ/

ಸಾಲದ ಸುಳಿಯಲಿ ಸಿಲುಕಿ ಒದ್ದಾಡದಿರುತಲಿ

ಶ್ರೀವರನ ದಯೆಯಿರಲೆಂದು ಸದಾ ಬೇಡುತಲಿ//

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್