ಸಂಸಾರ ಚಕ್ರ
ಕವನ
ಹುಟ್ಟುತ್ತಲಿ ಅಳುವಿನ ಆಟ
ಬೆಳೆಯುತ್ತ ಸ್ನೇಹಿತರ ಪಾಶ
ಪ್ರೌಢತೆಗೆ ಅಧ್ಯಯನ ಸೂತ್ರ
ನಂತರದಲಿ ಕಾಯಕದ ಮೊರೆ...
ಯೌವನಕದು ಒಲವ ಸೆಳೆತ
ದಾಂಪತ್ಯಕದು ಪೌರೋಹಿತ್ಯ
ಮಧ್ಯದಲಿ ಸಂಸಾರ ಬಂಧನ
ಮಕ್ಕಳು ಮರಿಗಳೆಂಬ ಮೋಹ...
ದುಡಿದು ಗಳಿಸಬೇಕೆಂಬ ದಾಹ
ನಾನು ನನ್ನದೆಂಬ ಜೇಡರ ಬಲೆ
ಈ ಮಕ್ಕಳ ಮದುವೆಯ ಬದ್ಧತೆ
ಮೊಮ್ಮೊಕ್ಕಳ ಮೋಹದ ಪಾಶ...
ಅಸಹಾಯಕರಾಗಿಯೂ ಆಟ
ಕೊನೆಗೆ ವಾರ್ಧಕ್ಯದ ತೋಟ
ಅಲ್ಲೊಂದು ದಿನದ ನಿರ್ವಾಣ
ಈ ಬದುಕೇ ಚರ್ವಿತ ಚರ್ವಣ!
- ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್