ಸಂಸ್ಕೃತಿ

ಸಂಸ್ಕೃತಿ

ಬರಹ

'ಅಮ್ಮ' ಎಂಬುದು
'ಮಮ್' ಆದಾಗ
ಮಮತೆಯ ಮಾತೆಲ್ಲಿ?

ಕಂದಮ್ಮಗಳು ಹಾಸ್ಟೇಲ್
ಸೇರಿದಂತೆ
ಅಮ್ಮಮ್ಮಗಳು ವೃದ್ದಾಶ್ರಮಕ್ಕೆ
ಖಾಯಂ,ಅಂತೆ

ಹಾಸ್ಟೇಲ್-ವೃದ್ಧಾಶ್ರಮ-ಕಟ್ಟಡಗಳ
ಬಳಕೆಯಲ್ಲಿ ಬೆಸೆದ
ಮರಳು,ಸಿಮೆಂಟ್,ಇಟ್ಟಿಗೆಯ
ಕಠಿಣ ಗುಣದಂತೆ
ಈ ಮಮ್-ಚೈಲ್ಡ್ಗಳ
ಸಂಬಂಧವಂತೆ!

ಬೆಳಗಾದರೆ ಕಾಣದ ಸೂರ್ಯ
ಇರುಳಾದರೆ ತಂಪು ನೀಡದ ಚಂದ್ರ
ಇವುಗಳ ಮಧ್ಯ
ಪುಟಾಣಿಗಳ ಸಂಚಾರ

ಅಂತು ಅನಾರೋಗ್ಯ ಪರಿಸರದ ಮಧ್ಯೆ
ಸಂಸ್ಕೃತಿ ಹೀನ
ಚಟುವಟಿಕೆಯನ್ನು ಒಪಿಕೊಳ್ಳುತ್ತ...
ನಾವು ಮತ್ತೊಮ್ಮೆ
ಸುಶಿಕ್ಷಿತ ನೆಲೆಯಲ್ಲಿ ನಿಂತು
ಅನಾಗರೀಕ ಜಗತ್ತಿಗೆ ಮರಳಿದಂತೆ...?