ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು

ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು

*****ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು*****

 

Yes! ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆರಿದವರಿದ್ದಾರೆ.ಅಂಥವರ ಜೀವನವೇ ಆಶ್ಚರ್ಯಕರ ಹಾಗೂ ಒಂದು ಸ್ಪೂರ್ತಿಧಾಯಕ ನಿದರ್ಶನ. ಮೊನ್ನೆ ಮೊನ್ನೆ ಇಲ್ಲಿಯೇ ಮನೆಯ ಮುಂದೆ ಜಾನುವಾರು ನೋಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಮನೆಯಲ್ಲಿಯೇ ಓದಿ ತಯಾರಿ ನಡೆಸಿ ಪರೀಕ್ಷೆ ಬರೆದ ಹುಡುಗ ಇಂದು ನಾಗರಿಕ ಸೇವಾ ಅಧಿಕಾರಿಯಾಗಿದ್ದಾನೆ.ಮೊನ್ನೆ ಮೊನ್ನೆ ಇಲ್ಲಿ ಎಲ್ಲೊ ಮನೆಯ ಹತ್ತಿರ ನಾಲ್ಕು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಬಿ.ಎಡ್.ವಿದ್ಯಾರ್ಥಿ ಇಂದು ಸರಕಾರಿ ನೌಕರಿ ದೊರೆತು ಸರಕಾರಿ ಹೈಸ್ಕೂಲ್ ಶಿಕ್ಷಕನಾಗಿ ಅತ್ಯುತ್ತಮ ಶಿಕ್ಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಮೊನ್ನೆ ಮೊನ್ನೆ ನಮ್ಮ ಕಣ್ಣ ಮುಂದೆಯೇ ದಿನವೂ ಬೆಳಿಗ್ಗೆ ಎದ್ದು ಓಡುವ (ರನ್ನಿಂಗ್) ಹವ್ಯಾಸವನ್ನಿಟ್ಟುಕೊಂಡ ಹುಡುಗ ಇಂದು ರಾಷ್ಟ್ರಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.ಇಂತಹ ಬಹುತೇಕ ಮಾತುಗಳನ್ನು ಆಗಾಗ ಕೇಳಿದ್ದೀರಿ ಹಾಗೂ ಕೇಳುತ್ತಲಿರುತ್ತೀರಿ ಅಲ್ಲವೇ? ಯೆಸ್, ನಮ್ಮ ಮಧ್ಯೆಯೇ ಇದ್ದು ತಮ್ಮ ಗಮ್ಯದ ಕಡೆಗೆ ದಿನವೂ ಸಾಗುತ್ತಾ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಗುರಿತಲುಪಿದವರು ,ಎಡವಿದವರು,ಎಡವಿ ಕೊಡವಿಕೊಂಡು ಮೇಲೆದ್ದವರು ಸಾವಿರಾರು ಸಾವಿರಾರು ಜನರಿದ್ದಾರೆ.ಅದರಲ್ಲಿ ಉಳಿದವರಿಗಿಂತ ತುಸು ಹೆಚ್ಚು ಪರಿಶ್ರಮ ಪಟ್ಟವರು ತಮ್ಮ ಗಮ್ಯವನ್ನು ಬೇಗನೆ ತಲುಪಿರುತ್ತಾರೆ ಅಷ್ಟು ಮಾತ್ರಕ್ಕೆ ಉಳಿದವರ ಪ್ರಯತ್ನವೇ ವ್ಯರ್ಥ ಅಂತ ಹೇಳಲಾಗದು! ಮೊದಲು ನಡೆಯುವುದನ್ನು ಕಲಿಯಬೇಕು ನಂತರ ನಿಧಾನವಾಗಿ ಓಡುವುದನ್ನು ಕಲಿಯಬೇಕು ತದನಂತರ ವೇಗದ ಓಟ ತಂತಾನೇ ಅಭ್ಯಾಸವಾಗಿಬಿಡುತ್ತದೆ.ಜೀವನ ಅನ್ನೋದು ಹೀಗೆನೇ ಅದು ಒಂದು ಓಟದ ಪಂದ್ಯವೆಂದು ತಿಳಿದವರು ಅದರ ಜೊತೆಜೊತೆಗೆ ಓಡಿ ಮುಗುಳ್ನಗು ಚೆಲ್ಲಿದವರು ಇದ್ದಾರೆ.ಅವರಿಗೆ ಆ ಓಟವೆಂದರೆ ಅದೊಂಥರಾ ಸಂತಸದ ಆಟವಿದ್ದಂತೆ ಹೊರತು ಒತ್ತಡದ ಕೆಲಸವಲ್ಲ! ಯಾರು ತಮ್ಮ ಕೆಲಸವನ್ನು ಎಂಜಾಯ್ ಮಾಡುತ್ತಾರೋ ಅವರು ಯಶಸ್ಸಿಗೆ ಬಹುತೇಕ ಹತ್ತಿರವಿದ್ದಂತೆಯೇ ಸರಿ. ಹೌದು!ಒತ್ತಡದಿಂದ ಪ್ರಾರಂಭಿಸಿದ ಯಾವುದೇ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ! ಹಾಗಂತ ಒತ್ತಡವನ್ನು ವೈರಿಯ ತರಹ ನೋಡಿದರೆ ಶುದ್ಧ ತಪ್ಪು! ಒತ್ತಡ ಅನ್ನುವುದು ಒಂದೊಂದು ಸಂದರ್ಭದಲ್ಲಿ ತುಂಬಾ ಸಕಾರಾತ್ಮಕವಾಗಿ ಕೆಲಸ ಮಾಡುತ್ತದೆ. A small amount of a pressure (I mean positive pressure) can helps us to achieve our goal. ಇದನ್ನು ಬಹುತೇಕರು ಒಪ್ಪುತ್ತಾರೊ? ಇಲ್ಲವೊ?ಗೊತ್ತಿಲ್ಲ! ಅದು ಅವರವರ ಆಯ್ಕೆಗೆ ಹಾಗೂ ಅನುಭವಕ್ಕೆ ಬಿಟ್ಟಿದ್ದು ಯಾಕೆಂದರೆ ಅನುಭವವೇ ಪ್ರತಿಯೊಬ್ಬ ವ್ಯಕ್ತಿಯ ಅತ್ಯಂತ ನಂಬಿಗಸ್ಥ ಮಾರ್ಗದರ್ಶಿ ಅಲ್ಲವೇ? ಹೌದು! ಮೇಲೆ ವಿವರಿಸಿದ ಹಾಗೆ ಸಕಾರಾತ್ಮಕ ಸಣ್ಣಪ್ರಮಾಣದ ಒತ್ತಡ ಅನ್ನುವುದು ತುಂಬಾ ಚುರುಕಾಗಿ ಕೆಲವೊಮ್ಮೆ ಕೆಲಸ ಮಾಡುತ್ತದೆ ಹೇಗೆ ಅಂತೀರಾ? ಉದಾ: ಒಬ್ಬ ವ್ಯಕ್ತಿ ತಾನು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕೆಂದಿರುತ್ತಾನೆ.ಆಗ ಆತನ ಪ್ರತಿ ಯೋಚನೆಯೂ ಪರೀಕ್ಷೆಯ ಕಡೆಗೆ,ತಯಾರಿಯ ಕಡೆಗೆ ಇರುತ್ತದೆ ಹೊರತು ಮತ್ಯಾವುದಕ್ಕೂ ಆತ ತಲೆಕೆಡಿಸಿಕೊಳ್ಳುವುದಿಲ್ಲ.ಒಂದುವೇಳೆ ಬೇರೆಯದರ ಕಡೆ ತನ್ನ ಗಮನ ಅಂದರೆ ಏಕಾಗ್ರತೆಯನ್ನು ಚದುರಿಸಿದನಂದರೆ ಮುಗೀತು ಅಲ್ಲಿಗೆ ಆತನ ಕನಸು ಕನಸಾಗಿಯೇ ಉಳಿಯುವುದು ಹೊರತು ನನಸಾಗುವುದು ಬಹುತೇಕ ಕಷ್ಟಸಾಧ್ಯ! ಹ್ಞಾ! ಪರೀಕ್ಷೆಯ ತಯಾರಿಯಲ್ಲಿದ್ದಾಗ ಪ್ರತಿದಿನ ಪ್ರತಿ ಗಂಟೆ ನಾನು ಓದಬೇಕು, ಚೆನ್ನಾಗಿ ಎಲ್ಲ ವಿಷಯ ತಿಳಿದಿರಕೊಂಡಿರಬೇಕು ಈ ಬಾರಿ ಅದೇನೆ ಆಗಲಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲೇಬೇಕೆಂದು ಪದೇ ಪದೇ ತನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರುತ್ತಾನೆ. ಆಗ ಆತ ಹೇಳಿಕೊಳ್ಳುವ ಆ ರಿಪಿಟೆಡ್ ಫಿನೊಮೆನಾನ್ ಈಗ ಸ್ವಲ್ಪ ಪ್ರಮಾಣದ ಒತ್ತಡವಾಗಿ ಪರಿವರ್ತನೆಯಾಗಿರುತ್ತದೆ. ಅದು ವ್ಯಕ್ತಿಯ ಜಾಗೃತ ಮನಸ್ಸಿಗೆ ಲಗ್ಗೆಹಾಕಿರುತ್ತದೆ ಅದು ವ್ಯಕ್ತಿಯಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ನೀಡಿರುತ್ತದೆ ಹಾಗೂ ಗಮ್ಯವನ್ನು ಬಿಟ್ಟು ಬೇರಾವ ಕಡೆಗೂ ಆತನ ಮನಸ್ಸು ಚದುರದಂತೆ ಎಚ್ಚರವಹಿಸಿರುತ್ತದೆ.ಆದರೆ ಯಾವಾಗ ಈ ಒತ್ತಡ ಅನ್ನೋದು ಅತಿಯಾಗುತ್ತದೆಯೋ ಆಗ ಅದು ನಕಾರಾತ್ಮಕವಾಗಿ ಕೆಲಸಮಾಡಲು ಪ್ರಾರಂಭಿಸುತ್ತದೆ.ನಿಮಗೆ ಗೊತ್ತಿರಬಹುದಲ್ಲವೇ? ಕೆಲವು ಸಂದರ್ಭದಲ್ಲಿ ಅಲ್ಪಪ್ರಮಾಣದ ವಿಷವೂ ಕೂಡ ಔಷಧಿಯಾಗಿ ಪರಿಣಮಿಸುತ್ತದೆ ಎಂದು ಹಾಗೆ! ಇದೂ ಕೂಡ ಸಾಧನೆ ಅಂದರೆ ಅದೇನು ದುಡ್ಡು ಕೊಟ್ಟು ತಕ್ಷಣ ಕೊಂಡುಕೊಳ್ಳುವ ಪದಾರ್ಥವೇ? ನೊ, ನಾಟ್ ಅಟ್ ಆಲ್ . ಅದೊಂದು ತಪಸ್ಸು ಎನ್ನುತ್ತಾರೆ ಬಹುತೇಕ ಸಾಧಕರು.ಹಾಗಾದರೆ ಸಾಧನೆ ಎಂದರೇನು ಎಂದು ಸರಳವಾಗಿ ಅರ್ಥೈಸುವುದು ತುಸುಕಷ್ಟವೇ! ಯಾಕೆಂದರೆ ಅದರ ಅರ್ಥ ಆಳ ಅದು ಆಯಾ ಕ್ಷೇತ್ರದ ಮೇಲೆ ಅವಲಂಬಿತವಾಗಿರುತ್ತದೆ.ದೈಹಿಕ ಆಟದಲ್ಲಿ (ರನ್ನಿಂಗ್ etc) ಅದನ್ನು ಬೇರೆರೀತಿ ಡಿಫೈನ್ ಮಾಡಿದರೆ ಇನ್ನು ನೆನಪಿನಶಕ್ತಿಗೆ ಸಂಬಂಧಪಟ್ಟಂತೆ, ಜ್ಞಾನಕ್ಕೆ ಸಂಬಂಧಪಟ್ಟಂತೆ ಅದನ್ನು ಬೇರೆಯದೇ ರೀತಿಯಲ್ಲಿ ವಿವರಿಸಲಾದೀತು! ಒಟ್ಟಾರೆಯಾಗಿ ಸಾಧನೆ ಎಂದರೆ ಹಾಕಿಕೊಂಡ ನಿಖರ ನಿರ್ಧಾರಗಳನ್ನು/ಗುರಿಗಳನ್ನು ಪ್ರತಿದಿನ ಎದುರುನೋಡುತ್ತಾ ಅವುಗಳನ್ನು ಧಕ್ಕಿಸಿಕೊಳ್ಳುವುದಕ್ಕೊಸ್ಕರ ಪ್ರತಿದಿನ ಪ್ರತಿಕ್ಷಣ ನಡೆಯುವ ಅತ್ಯಂತ ಸೂಕ್ಷ್ಮ ಹಾಗೂ ಜಾಗೃತೆಯ ಸಿದ್ಧತೆಯ ನಂತರ ಗಮ್ಯತಲುಪಿ ನಿಟ್ಟುಸಿರು ಬಿಡುವುದೇ ಸಾಧನೆ. ಅ ಗಮ್ಯ ತಲುಪಿದ ನಂತರ ಮತ್ತೆ ವಿಶ್ರಾಂತಿ ತೆಗೆದುಕೊಳ್ಳಬೇಡಿ ಎಂದು ಭಾರತ ದೇಶ ಕಂಡ ಅತ್ಯಂತ ಮೇಧಾವಿ, ಕ್ಷಿಪಣಿ ಪಿತಾಮಹ, ಮಾಜಿರಾಷ್ಟ್ರಪತಿ ಎ.ಪಿ.ಜೆ.ಅಬ್ದುಲಾ ಕಲಾಮ್ ಜಿ ಹೇಳುತ್ತಾರೆ. ದೇಶದ ಯುವಕರಲ್ಲಿ ಅದೇನೋ ಒಂದು ಸ್ಪೂರ್ತಿಯನ್ನು ತುಂಬಿ ತಮ್ಮ ಪುಸ್ತಕದಲ್ಲಿ ದಾಖಲಿಸಿಟ್ಟು ಹೋಗಿದ್ದಾರೆ.ಆ ಪುಸ್ತಕಗಳ ಪುಟ ತಿರುವಿ ನೋಡಬೇಕು ಅವು ಅನುಭವದ ಅಮೃತನುಡಿಗಳು ದಾರಿದೀಪಗಳು ಭವಿಷ್ಯದ ಮಾರ್ಗದರ್ಶಿ ಪುಸ್ತಕಗಳು ಅವು! ಜಗತ್ತಿನಲ್ಲಿ ಯಾರೂ ಒಬ್ಬಂಟಿಯಲ್ಲ ಏಕೆಂದರೆ ಸ್ನೇಹಿತರಾಗಿ ಮಾರ್ಗದರ್ಶಿಯಾಗಿ ಅತ್ಯುತ್ತಮ ಪುಸ್ತಕಗಳಿರುವಾಗ ಯಾಕೆ ಒಬ್ಬಂಟಿಯಾಗುತ್ತಾರೆ? ಯಾಕೆ? ಅಲ್ಲವೇ!? ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಎಂಬ ಇವೆರಡು ಬಾಣಗಳನ್ನು ತನ್ನ ಬತ್ತಳಿಕೆಯಲ್ಲಿ ಸಾಧಿಸುವ ವ್ಯಕ್ತಿ ಯಾವತ್ತಿಗೂ ಇಟ್ಟಿಕೊಂಡಿರಬೇಕಾಗುತ್ತದೆ. ಅದಾವ ಕಾಲದಲ್ಲಿ ಅವುಗಳ ಪ್ರಯೋಗ ಒದಗಿಬರುತ್ತದೆಯೋ ಗೊತ್ತಾಗುವುದಿಲ್ಲ! ಅನೇಕ ಸಾಧಕರ ಜೀವನವನ್ನು ಓದುವುದರಿಂದ ಸ್ಪೂರ್ತಿ ದೊರೆಯುತ್ತದೆ. ಮನಸ್ಸು ಯಾವುದನ್ನು ಹೆಚ್ಚೆಚ್ಚು ಯೋಚಿಸುವುದೋ? ಓದುವುದೋ ? ವಿಮರ್ಷಿಸುವುದೋ? ಅದರ ಕಡೆ ಅದು ತುಂಬಾ ಫೋಕಸ್ ಆಗುತ್ತದೆ. ಇದು ಮನಸ್ಸಿನ ಸಹಜ ಗುಣ ಹಾಗೂ ಯಶಸ್ಸಿನ ರಹಸ್ಯವೂ ಹೌದು! ಯಶಸ್ಸಿಗೆ ಯಾವುದೇ ನಿರ್ದಿಷ್ಟ ಅಂಕೆಯ ಮೆಟ್ಟಿಲುಗಳಿಲ್ಲ.ಕೆಲವು ಲೇಖಕರು ಬರೆದ ಪುಸ್ತಕದ ಶೀರ್ಷಿಕೆ ನೋಡಿದಾಗ ವಂಡರ್ ಅನಿಸುವುದರ ಜೊತೆಗೆ ಮುಖದ ಮೇಲೆ ಒಂದು ಮುಗುಳ್ನುಗು ಹೊರಹೊಮ್ಮುತ್ತದೆ ನನಗೆ . ಯಶಸ್ವಿ ಬದುಕಿಗೆ ಮೂರು ಮೆಟ್ಟಿಲು, ಆರು ಮೆಟ್ಟಿಲು etc ಯಂತೆ! ನೋಡಿ, ಮೆಟ್ಟಿಲುಗಳು ಆದರೆ ಎಲ್ಲಿತನಕ ತೆಗೆದುಕೊಳ್ಳುವಿರಿ? ಸಾಧ್ಯವಾದರೆ ಹೊಸಮೆಟ್ಟಿಲನ್ನು ನಿರ್ಮಿಸಬೇಕೆ ಹೊರತು ಯಾರೋ ನಡೆದುಕೊಂಡು ಹೋದ ಅದೇ ಹಳೆಯಮೆಟ್ಟಿಲನ್ನು ನೆಚ್ಚಿಕೊಂಡರೆ ಅದು ಮುರಿದುಬೀಳುವುದಿಲ್ಲವೆಂದು ಏನು ಗ್ಯಾರಂಟಿ? ಅಲ್ಲವೇ?! ಯಾವುದಕ್ಕೂ ಅದು ಅವರವರ ವಿವೇಕಕ್ಕೆ ಬಿಟ್ಟಿದ್ದು. ಯಶಸ್ಸಿಗೆ ಶಾರ್ಟಕಟ್ ,ಕಳ್ಳದಾರಿ ಅದು ಇದು ಎನ್ನುವುದು ಏನಿಲ್ಲ ಅದೇನಿದ್ದರೂ ಮೂರ್ಖರು ಸೃಷ್ಟಿಸಿಕೊಂಡ ಭ್ರಮೆ.ಒಂದು ವೇಳೆ ಆ ಶಾರ್ಟಕಟ್ ನಲ್ಲಿ ದಕ್ಕಿಸಿಕೊಂಡ ಯಶಸ್ಸು ಬಹುಕಾಲ ಉಳಿಯುವುದಿಲ್ಲ. ಅದರ ವ್ಯಾಲಿಡಿಟಿ ತುಂಬ ಕಡಿಮೆ! ಹಾಗಾಗಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಇದರ ಜೊತೆಜೊತೆ ಮತ್ತಷ್ಟು ಅಂಶಗಳಾದ ಸಮಯಪಾಲನೆ,ಸತತ ಅಧ್ಯಯನ, ಏಕಾಗ್ರತೆ, ಹಾಗೂ ಬುದ್ಧಿವಂತಿಕೆ ಇವುಗಳನ್ನೆಲ್ಲ ಹದವಾದ ಪ್ರಮಾಣದಲ್ಲಿ ಮಿಶ್ರಣಮಾಡಿಕೊಂಡು ಯಶಸ್ಸು ಅನ್ನುವ ಹಬ್ಬದೂಟವನ್ನು ಸವಿಯಬಹುದು! ಏನಂತೀರಿ?? -ವಿಶ್ವನಾಥ್.ಬಿ.ಎಮ್