ಸತ್ಯ
ಕವನ
ಸುೞ್ ರ ಸಂತೆಯಲಿ ನನ್ನ
ಖರೆ ಕಳೆದು ಹೋಗೆಯ್ ತ್ರೀ...
ಮಾರಿ ಮಾರಿ ಸಾಧಿಸ್ತಾವ
ಅದರ ತಲೆ ಮೇಲೆ
ಹೊಡೆದಹಾಂಗ ಗೊತ್ತೇನ್ರೀ....
ಅದಕ್ಕಾರು ಈಗ ದಿಕ್ಕಿಲ್ರೀ.
ಅದಕ ನಿಲ್ಲಾಕೂ ಕಾಲಿಲ್ರೀ...
ಒಂಟಿ ಆಗಯ್ ತಿ ನನ್ನ ಖರೆ...
ಅವುಗಳೆ ಹಾಕ್ಯಾವ
ನನ್ನದೇ ಮುಖವಾಡ...
ಅವುಗಳಲೇ ನಾ ಕಳೆದಯ್ ತ್ರೀ....
ಕಯ್ ಕಾಲು ಬಡಿದು ಒದ್ದಾಡಿ
ಹುರ್ ದಯವ ಬಾಯಿಗೆ ತಂದಯ್ ತ್ರೀ..
ಅದನ್ನು ಹರಿದು ತಿಂದರಲ್ರೀ...
ಈ ತಲೆಹಿಡುಕರು.....!!