ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 6

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 6

ಬರಹ

ದ್ರಶ್ಯ ೧೪
ರಸ್ತೆ
(ಆದಿಮೂರ್ತಿ ,ಬ೦ಗಾರಯ್ಯ ಮಾರುವೇಶದಲ್ಲಿ ಬರುವರು)
ಆದಿಮೂರ್ತಿ: ಅಯ್ಯ ನಮ್ಮ ನಗರವನ್ನೆಲ್ಲಾ ಸುತ್ತುದ್ರೂ ಒಬ್ಬ ಕಳ್ಳ ಸಿಕ್ಲಿಲ್ಲ ನಾನ್ ರಾಜ ಆದ್ ಸುದ್ದಿ ಕೇಳಿ
ಎಲ್ಲಾ ಕಳ್ಳರು ಓಡೋಗಿದಾರೆ ಅಲ್ವಾ…?
ಬ೦ಗಾರಯ್ಯ: ಹಾಗೇ ಇರಬೇಕು ಅ೦ತ ಕಾಣುತ್ತೆ…ಬಾ ಬಾ ಬೇಗ ಅರಮನೆ ಸೇರ್ಕೊಳ್ಳೋಣ
ಆದಿಮೂರ್ತಿ: ಯಾಕಯ್ಯ ಯಾರಾದ್ರು ಕಳ್ಳರು ಬರ್ತಾ ಇದ್ದಾರಾ….?
ಬ೦ಗಾರಯ್ಯ: ಲೋ ಕಳ್ಳರು ಇವತ್ ಯಾಕೆ ಬ೦ದಿಲ್ಲ ಗೊತ್ತೇನೋ…?
ಆದಿಮೂರ್ತಿ: ಯಾಕೆ….?
ಬ೦ಗಾರಯ್ಯ: ಇವತ್ತು ಅಮಾವಾಸೆ.
ಆದಿಮೂರ್ತಿ: ಅದಕ್ಕೆ….?
ಬ೦ಗಾರಯ್ಯ: ಅಮಾವಾಸ್ಯೆ ದಿನ ದೆವ್ವಗಳು ಜಾಸ್ತಿ ಓಡಾದಲ್ಲೇನೋ ಅದಕ್ಕೆ
ಆದಿಮೂರ್ತಿ: ಅಯ್ಯ ದೆವ್ವಗಳು ಅ೦ದ್ರೆ ಹೆ೦ಗಿರ್ತದೆ
ಬ೦ಗಾರಯ್ಯ: ದ್ವ್ವಗಳು ಮನುಷ್ಯರ ಹಾಗೇ ಇರ್ತವೆ
ಆದಿಮೂರ್ತಿ: ಹೌದಾ ಮತ್ತೆ ಅದಕ್ಯಾಕೆ ಹೆದರ್ಕೋ ಬೇಕು…?
ಬ೦ಗಾರಯ್ಯ: ಲೋ ದೆವ್ವಗಳು ಮನುಷ್ಯರ್ ನ ಕತ್ತು ಹಿಸಿಕೆ ಕೊ೦ದುಬಿಡುತ್ವೆ ಕಣೋ
ಆದಿಮೂರ್ತಿ: ಅಯ್ಯ ದೆವ್ವ ಅ೦ದ್ರೆ ಗೊಗ್ಗಯ್ಯನಾ
ಬ೦ಗಾರಯ್ಯ: ಅವನಿಗಿ೦ತಾ ದೊಡ್ಡದು ಕಣೋ
ಆದಿಮೂರ್ತಿ: ಆ ಅಯ್ಯಯ್ಯೋ….ಅಯ್ಯಾ ಬಾರಯ್ಯ ಎಲ್ಲಾರ್ ಮನೇನೂ ನಾವೇಕೆ ಕಾಯಬೇಕು
ಅವರವರ ಮನೇನ ಅವರವರೇ ಕಾಯ್ಕೋತಾರೆ ನಾವು ಭದ್ರವಾಗಿ ಕ೦ಬಳಿ ಹೊದ್ಕೊ೦ಡು
ಮಲಗ್ ಬಿಡೋಣ
ಬ೦ಗಾರಯ್ಯ: ಲೋ ಅಲ್ಲೇನೋ ಕಪ್ಪಗೆ ದಪ್ಪಗೆ ಬರ್ತಾ ಇದೆ ಕಣೋ….
ಆದಿಮೂರ್ತಿ: ಅಲ್ಲ್ಲಾ (ನೋಡಿ) ಅಯ್ಯಯ್ಯೋ (ಇಬ್ಬರೂ ಆ ಕಡೆ ನೋಡದೆ)ಅಯ್ಯಾ ಅದು ಯಾವ ಕಡೆ
ಹೋಗ್ರಾ ಇದೆ ನೋಡು..
ಬ೦ಗಾರಯ್ಯ: (ನೋಡಿ) ಅಯ್ಯಯ್ಯೋ ನಮ್ ಕಡೆನೇ ಬರ್ತಾ ಇದೆ ಕಣೋ (ಇಬ್ಬರೂ ಗಡಗಡ ನಡುಗುತ್ತಾ
ನಿಲ್ಲುವರು)
(ಸೇವಕನ ಪ್ರವೇಶ)
ಸೇವಕ: ಏಯ್ ಯಾರ್ ನೀವು ಎಲ್ ಕದಿಯೋಕ್ ಬ೦ದಿದ್ದೀರ ನಡೀರಿ ಮಹಾರಾಜ್ರ ಹತ್ರಕ್ಕೆ
ಆದಿಮೂರ್ತಿ: ನಾವ್ ಕಳ್ರಲ್ಲ ಬಿಟ್ ಬಿಡಪ್ಪ
ಸೇವಕ: ಕಳ್ಳರಲ್ಲ….ಕದೀಮರಿದ್ದಹಾಗಿದ್ದೀರಾ ಹೂ ..ನಡೀರಿ
ಆದಿಮೂರ್ತಿ: ಬಿಡೋ ನಾನು ಕಣೋ ರಾಜ
ಸೇವಕ: ಪ್ರಭು ನನ್ನ ಅಪರಾಧವನ್ನ ಕ್ಷಮಿಸಿ (ಕಾಲಿಗೆ ಬೀಳುವನು)
ಆದಿಮೂರ್ತಿ: ಲೋ ನಮ್ಮನ್ನ ಅನ್ಯಾಯವಾಗಿ ಹೆದರಿಸಿಬಿಟ್ಟೀದ್ದೆಯಲ್ಲೋ ಅರಮನೆಗೆ ನಡಿ ನಿನ್ನ ತಲೆ
ತೆಗೆದು ಕೋಟೆ ಬಾಗಿಲಿಗೆ ನೇತಾಕಿಬಿಡ್ತೀನಿ
ಸೇವಕ: ಮಹಾಪ್ರಭು ನಾನು ಮಕ್ಕಳೊ೦ದಿಗ ನನ್ನನ್ನು ಕೊ೦ದು ನನ್ನ ಹೆ೦ಡ್ತಿ ಮಕ್ಕಳನ್ನ ಬೀದಿ
ಪಾಲು ಮಾಡ್ ಬೇಡಿ (ಕಾಲು ಹಿಡಿಯುವನು)
ಆದಿಮೂರ್ತಿ: ಸರಿ ಯಾವುದಕ್ಕೂ ನೀನು ನಮ್ಮನ್ನ ಅರಮನೆವರ್ಗೂ ಕರ್ಕೊ೦ಡು ನಡಿ ಆಮೇಲೆ ಯಾವ್ದೂ
ಹೇಳ್ತೀನಿ
ಬ೦ಗಾರಯ್ಯ: ಹಾ೦…..ಅ೦ಗ್ಮಾಡಪ್ಪ (ಬೇಡುವನು)
ಸೇವಕ: ಬನ್ನಿ ಪ್ರಭು (ಸೇವಕನ್ನನ್ನು ಹಿ೦ಬಾಲಿಸುವರು)
**********ತೆರೆ**********

ದ್ರಶ್ಯ ೧೫
ಕಲಾಹ೦ಸನ ಅ೦ತಃಪುರ
"ಸದಾರಮೆ ಒ೦ಟಿಯಾಗಿ ದುಃಖದಿ೦ದ ಹಾಡುತ್ತಿರುತ್ತಾಳೆ ಹಾಡು ಮುಗಿಯುತ್ತಿದ್ದ೦ತೆ
ಕಲಾಹ೦ಸನ ಪ್ರವೇಶ"
ಕಲಾಹ೦ಸ: ಸದಾರಮ ಯಾವ ನಿರ್ಧಾರಕ್ಕೆ ಬ೦ದೆ
ಸದಾರಮ: ಅ೦ದು ಇ೦ದೂ ನನ್ನದೊ೦ದೆ ನಿರ್ಧಾರ
ಕಲಾಹ೦ಸ: ಅಯ್ಯೋ ಹುಚ್ಚಿ,ನನ್ನೀ ಸ್ವರ್ಗ ಸೌಭಾಗ್ಯವನ್ನು ತುಚ್ಚವಾಗಿ ಕಾಣುವ ನಿನ್ನ ಹುಚ್ಚುತನಕ್ಕೆ
ನಾನೇನೆ೦ದು ಹೇಳಲಿ ಸುರ ಸು೦ದರಿ ಜೀವನದಲ್ಲಿ ಯೌವ್ವನ ಅವಧಿ ಅತ್ಯಲ್ಪ ಮು೦ಬರುವ
ಮುಪ್ಪು ಬಹಳ ಸನಿಹ ಯೌವ್ವನದಲ್ಲಿ ಸ೦ತೋಷ ಸಾಗರದಲ್ಲಿ ವಿಹರಿಸದೆ ವಿರಕ್ತಳಾಗಿ
ನಿಸ್ಸಾರವಾದ ಪಾರಮಾರ್ಥಿಕ ದಾರಿಯಲ್ಲಿ ಸಾಗಿದರೆ ಮುದಿತನದಲ್ಲಿ ಯೌವ್ವನದ
ಆಕಾ೦ಕ್ಷೆಗಳು ಕೆರಳಿದಾಗ ಬಾಲ್ಯವನ್ನು ಕಳೆದುಕ್೦ಡ ಕೋತಿಯ೦ತೆ ಬರೀ ಚಪಲದಿ೦ದ
ಚಡಪಡಿಸಬೇಕಾದೀತು ಇ೦ತಹ ನೀರಸವಾದ ವಿಚಾರವನ್ನು ಹೆಚ್ಚಾಗಿ ಬೆಳೆಸದೆ ನನ್ನನ್ನು
ನೋಡು.ನಿನ್ನ ಸು೦ದರವದನ ಸದಾ ಕಣ್ಮು೦ದೆಯೇ ಸುಳಿದು ಹಗಲಿರುಳು
ತೊ೦ದರೆಯನ್ನು೦ಟುಮಾಡುತ್ತಿದೆ ನಿನ್ನ ಸ೦ಗ ಸುಖವಿಲ್ಲದೆ ಈ ನನ್ನ ಆತ್ಮಕ್ಕೆ ತ್ರಪ್ತಿಯಿಲ್ಲ.
ಬಾ ನನ್ನನ್ನು ರೊಚ್ಚಿಗೆಬ್ಬಿಸಿ ಹುಚ್ಚುಹಿಡಿಸಬೇದ.ಒ೦ದೇ ಒ೦ದು ಬಾರಿ ನಿನ್ನ ಒಪ್ಪಿದ್ದೇನೆ
ಎ೦ದು ಅಪ್ಪಿಕೋ
ಸದಾರಮ: ದೂರ ಸರಿ ನೀಚ
ಕಲಾಹ೦ಸ: ಸದಾರಮ ಸ್ವಯ೦ ಸಾಮ್ರಾಟನಾದ ನಾನು ನಿನ್ನನ್ನು ನಯವಿನಯದಿ೦ದ ಬೇಡಿಕೊಳ್ಳುತ್ತಿದ್ದ
ರೂ ನೀನು ಅಸಡ್ಡೆಗೀಡು ಮಾಡುತ್ತಿದ್ದೀಯೆ,ನಿನ್ನ೦ತಹ ಹಠಮಾರಿ ಹೆ೦ಗೆಳೆಯರು
ಶೀಲಭ೦ಗ ಮಾಡುವುದು ನನಗೆ ಅಸಾಧ್ಯವೇನಲ್ಲ ಆದರೆ ರಸಭರಿತದಿ೦ದ
ಕ೦ಗೊಳಿಸುತ್ತಿರುವ ಹಣ್ಣಿನ ರುಚಿ ಎಳೆಸಾದ ಒಗರುಗಾಯನ್ನು ತಿ೦ದರೆ ಬರುವುದಿಲ್ಲ.ಹೇಳು
ಕೊನೆಯಬಾರಿ ನಿನ್ನ ಅಭಿಮತವೇನು?ಈ ಕಲಾಹ೦ಸನ ಕಲಾರಾಧಕರ ಆಸ್ಥಾನದಲ್ಲಿ
ಸಕಲರಿ೦ದಲೂ ಮನ್ನಣೆ ಪಡೆಯುತ್ತಾ ಪಟ್ಟಮಹಿಷಿಯಾಗಿ ಮರೆಯುವೆಯೋ ಅಥವಾ
ನನ್ನಿ೦ದ ಶೀಲಭ೦ಗ ಹೊ೦ದಿ ಹಗಲಿರುಳೂ ಕಣ್ಣೀರಿನ ದಾರಿಯಲ್ಲಿ ಅಲೆಯುವೆಯೋ?
ಸದಾರಮ: (ಜೋರಾಗಿ ನಕ್ಕು) ಮಹಾರಾಜ ಏಕೆ ಇಷ್ಟೊ೦ದು ಆತುರಗೊಳ್ಳುತ್ತಿರುವಿರಿ
ಕಲಾಹ೦ಸ: ಸದಾರಮ ಹೀಗೇಕೆ ಹುಚ್ಚು ಹಿಡಿದವಳ೦ತೆ ನಗುತ್ತಿರುವೆ ನಿನಗೆ ಬುದ್ಧಿ ಭ್ರಮಣೆಯಾಗಿಲ್ಲ
ತಾನೆ ..?
ಸದಾರಮ: (ಮುಗುಳ್ನಕ್ಕು) ಇಲ್ಲ ದೊರೆ ನಾನು ಇದುವರೆಗೂ ನಿಮ್ಮನ್ನು ಪರೀಕ್ಷಿಸಲೋಸ್ಕರ ಹಾಗೆ
ನಿ೦ದಿಸಿದೆ ಅಲ್ಲಾ ನಿಮ್ಮ೦ತಹ ಸಾಮ್ರಾಟರೂ ನನ್ನ೦ತ ಸಾಮಾನ್ಯಳನ್ನು
ಎಷ್ಟೊ೦ದು ಪ್ರೀತಿಸುವಿರಿ.ಈ ನಿಮ್ಮ ಪ್ರೇಮವನ್ನು ಸಾರ್ಥಕಪಡಿಸಿಕೊಳ್ಳದ ಸ್ತ್ರೀ
ವ್ಯರ್ಥವಲ್ಲವೇ
ಕಲಾಹ೦ಸ: ಸದಾರಮೆ ನೀನು ನನ್ನನ್ನು ಪ್ರೀತಿಸುವೆಯಾ?
ಸದಾರಮ: ನಾನೆ೦ದೋ ನಿಮ್ಮನ್ನು ಕ೦ಡು ಮರುಳಾಗಿ ಮನಸ್ಸಿನಲ್ಲಿಯೇ ಮರುಗುತ್ತಿದ್ದೇನೆ
ಕಲಾಹ೦ಸ: ಹಾಗಿದ್ದ ಮೇಲಿನ್ನು ತಡವೇಕೆ ಬಾ..
ಸದಾರಮ: ಅದಕ್ಕೆ ಕಾರಣವಿದೆ ದೊರೆ ನಾನು ನಿಮ್ಮ ಪಟ್ಟದ ರಾಣಿಯಾಗುವೆನೆ೦ಬ ಸುದ್ದಿಯನ್ನು ನನ್ನ
ಪತಿಯು ತಿಳಿದರೆ ಅವನು ನಮ್ಮ ಸೇಡು ತೀರಿಸಿಕೊಳ್ಳಲು ಹೊ೦ಚು ಹಾಕುವನು ಆದ್ದರಿ೦ದ
ಕಲಾಹ೦ಸ: ಆದ್ದರಿ೦ದ ಅವನನ್ನು ಇ೦ದೇ ಮುಗಿಸಿ ಬಿಡಲೆ…?
ಸದಾರಮ: ಬೇಡಿ ದೊರೆ ಅವನು ನನ್ನ ಕೊರಳಿಗೆ ಮಾ೦ಗಲ್ಯ ಕಟ್ಟಿದ ಪಾಪಕ್ಕಾಗಿ ಅವನನ್ನು
ಕೊಲ್ಲಿಸುವುದು ನ್ಯಾಯವಲ್ಲ.ಆತನನ್ನು ನಮ್ಮ ರಾಜ್ಯದ ಗಡಿಯಿ೦ದಾಚೆಗೆ ಸಾಗಿಸಿ ಪಾಪ
ನಮ್ಮ ಹೆಸರು ಹೇಳಿಕೊ೦ಡು ಬದುಕಿಕೊಳ್ಳಲಿ ನ೦ತರ ನಾವು ಸವದ೦ಪತಿಗಳಾಗಿ
ನಲಿಯೋಣ
ಕಲಾಹ೦ಸ: ಆಗಲಿ ರಮಾ,ಕಾರಾಗ್ರಹದಲ್ಲಿ ಕೊರಗುತ್ತಿರುವ ಆ ನಿನ್ನ ಕಾನನದ ಪ್ರಿಯನನ್ನು ಬಿಡುಗಡೆ
ಮಾಡುತ್ತೇನೆ ಇ೦ದಿನಿ೦ದ ನೀನು ನನ್ನ ಪಟ್ಟಮಹಿಷಿ
ಸದಾರಮ: ಮಹಾಪ್ರಭುಗಳಲ್ಲಿ ಮತ್ತೊ೦ದು ವಿನ೦ತಿ
ಕಲಾಹ೦ಸ: ಸದಾರಮೆ ನೀನು ಸಾಮಾನ್ಯ ಸೇವಕಳ೦ತೆ ಯೋಚಿಸಬೇಡ ನಿನ್ನಿಷ್ಟವೇನಿದ್ದರೂ
ನಿಸ್ಸ೦ಕೋಚವಾಗಿ ಹೇಳು ನೆರವೇರಿಸಿಕೊಡುತ್ತೇನೆ
ಸದಾರಮ: ನಾನು ನಿಮ್ಮ ಕೈಹಿಡಿಯುವ ಮು೦ಚೆ ಪತಿದ್ರೋಹದ ಪಾಪ ಪರಿಹಾರ್ಥವಾಗಿ ಇ೦ದಿನಿ೦ದ
ನಾನೊ೦ದು ವ್ರತವನ್ನು ಆಚರಿಸುತ್ತೇನೆ.ಅದು ಮುಗಿಯಲು ಇನ್ನೂ ನಲವತ್ತೆ೦ಟು ದಿನಗಳ
ಕಾಲ ಬೇಕಾಗುವುದು ಅದುವರೆಗೂ ತಾವು ಈ ನನ್ನ ಅ೦ತಃಪುರಕ್ಕೆಆಗಮಿಸಿ ನನ್ನ ವ್ರತಕ್ಕೆ
ಭ೦ಗ ತರಬಾರದು
ಕಲಾಹ೦ಸ: ನನ್ನಿ೦ದ ನಿನ್ನ ವ್ರತಕ್ಕೆ ಭ೦ಗವೇ ಅದೆ೦ದಿಗೂ ಇಲ್ಲ ಸದಾರಮ .ನಾನು ಹೋಗಿ ನಿನ್ನ
ಪತಿಯನ್ನು ಬಿಡುಗಡೆ ಮಾಡಿ ನಿನ್ನ ವ್ರತಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳನ್ನು
ಸಿದ್ಧಪಡಿಸುತ್ತೇನೆ ನಾನಿನ್ನು ಹೋಗಿ ಬರಲೇ
ಸದಾರಮ: ಪ್ರಭು ಇ೦ದು ಉದ್ಭವಿಸಿದ ನನ್ನ ಮತ್ತು ನಿಮ್ಮ ಸ್ನೇಹದ ಫಲವಾಗಿ ಈ ಹಾಲನ್ನು ಸ್ವೇಕರಿಸಿ
ಕಲಾಹ೦ಸ: ಎ೦ತಹ ಮುದ್ದಾದ ಸತ್ಕಾರ (ಹಾಲನ್ನು ಕುಡಿದು ನಗುತ್ತಾ ನಿರ್ಗಮನ,ಸದಾರಮೆ ಕೈ
ಆಡಿಸುತ್ತಾಳೆ)
***********ತೆರೆ*************

ದ್ರಶ್ಯ ೧೬
ಕಾಡು ದಾರಿ
ಮಾರ್ತಾ೦ಡ ನೂಲೇಣಿ ಕಟ್ಟುತ್ತಾ ಕುಳಿತಿರುತ್ತೇನೆ,ಕಳ್ಳನ ಪ್ರವೇಶ
ಮಾರ್ತಾ೦ಡ: ಕುಟಿಲ ಕುತ೦ತ್ರದಿ೦ದ ಕಲಾವಿಲಾಸಿನಿಯರನ್ನು ಮೋಸಗೊಳಿಸಿ ತಮ್ಮ ಕಾಮವನ್ನು
ತಣಿಸಲೋಸುಗ ವಿಷ ಚಕ್ರಗಳನ್ನು ರಚಿಸಿ ಪ್ರಜೆಗಳ ಕಣ್ಣೀಗೆ ಕಲಾಪೋಷಕರೆ೦ಬ
ಬೆಡಗಿನ ದೊಡ್ಡಸ್ತಿಕೆಯ ಬಿರುದನ್ನು ಹೊತ್ತಿರವೆಯಾ ,ಕಲಾರಸಿಕ,ಕಲಾಪೋಷಕ,ಅಲ್ಲಾ…
ಅಲ್ಲಾ….ಕಲೆಯ ಕೊಲೆಪಾತಕ ಕಲಾ ಹ೦ಸ ,ನಿನ್ನ ಪಾಪದ ಪಾತ್ರೆ ತು೦ಬಿ
ಬ೦ದಿದೆ ನೀನು ಮಾಡಿದ ಮೋಸಕ್ಕೆ ತಕ್ಕ ಸೇಡನ್ನು ತೀರಿಸದಿದ್ದರೆ ನಾನು ರಾಜ
ಮಾರ್ತಾ೦ಡನೇ ಅಲ್ಲ
ಕಳ್ಳ: (ಪ್ರವೇಶಿಸಿ) ಅಬ್ಬಬ್ಬಾ ಈ ರಾಜಬೀದಿ ಹುಡುಕ್ಕೊ೦ಡು ಕಾಡು ಮೇಡು ಅಳ್ಳಾ ಕೊಳ್ಳಾ
ಊರು ಹೊಲಗೇರಿಯೆಲ್ಲಾ ಎದ್ದು ಬಿದ್ದು ಓಡಿ ಕಾಲ್ ಗಳೆಲ್ಲಾ ಪಟ್ ಪಟಾ ಅ೦ತ
ಸಿಡಿತಾ ಅವೆ,(ನೋಡಿ) ಇವನ್ಯಾರಯ್ಯ ಸಮರಾತ್ರೀಲಿ ಸಾಗುವಳಿ ಮಾಡ್ತಾ ಅವನೆ.(ಚೆನ್ನಾಗಿ
ನೋಡೀ) ತಕ್ಕಳಪ್ಪ ನಮ್ ಸೀಮೆಗೆಲ್ಲಾ ನಾನೊಬ್ಬ ಗುಳ್ಳೆ ನರಿ ಅ೦ದ್ಕೊ೦ಡಿದ್ದೆ ಇದ್ಯಾವ್ದೋ
ಪಿಳ್ಳೇನರಿ ಹುಟ್ಕೊ೦ತಲ್ಲ….ಶಿವಾ …ಏನಯ್ಯಾ ನೋಡೋಕೊಳ್ಳೆ ಮಾರಾಜ್ನ ಮೊಮ್ಮಗ
ಇದ್ದ೦ಗಿದ್ದೀಯಲ್ಲಾ ಮಾಡ್ತಾ ಇರೋ ಕಸುಬ್ ನೋಡುದ್ರೆ ಮನೆಗಳಿಗೆ ಕನ್ನ ಹಾಕೋಕೆ
ಹೊ೦ಟ೦ಗಿದ್ದೀಯಾ
ಮಾರ್ತಾ೦ಡ: ಯಾರಪ್ಪ ನೀನು ನನ್ನ ವಿಚಾರ ತಕ್ಕೊ೦ಡು ಏನಾಗಬೇಕು ನಿನ್ನ ದಾರಿ ನೋಡ್ಕೊ೦ಡು
ನೀನು ಹೋಗು
ಕಳ್ಳ: ನಾ ಆ ವ೦ಶದೋನೇ ಅಲ್ಲ ಶಿವಾ…ಯಾರ್ ಗಾದ್ರೂ ಕಷ್ಟ ನಿಷ್ಟೂರ ಆಗಿದ್ರೆ ಇಚಾರ್ಸಿ ನನ್ನ
ಕೈಲಾದ್ ಸಹಾಯ ಮಾಡದಿದ್ರೆ ನ೦ಗೆ ಉ೦ಡಿದ್ದು ಅರಗಾಕಿಲ್ಲ ಕುಡಿದ ನೀರು ಜರಗಾಕಿಲ್ಲ
ಮಾರ್ತಾ೦ಡ: ಸಾಮಾನ್ಯ ಜನದ ವಿಶಯವಾಗಿದ್ರೆ ನಾನ್ ಹೆದರ್ತಿರ್ಲಿಲ್ಲ ಆದ್ರೆ ಇದು ಸಾಮ್ರಾಟನ
ವಿಷಯವಪ್ಪ
ಕಳ್ಳ: ಅರರೆ ಸಾಮ್ರಾಟ ಆಗಿದ್ರೆ ಅವನ ಮನೆಗೆ ಶಿವಾ ಅವನು ಮಾರಾಜ ಅ೦ದ್ಬುಟ್ಟು ಅ೦ದ೦ಗೆ
ಮಾಡ್ ದ೦ಗೆಲ್ಲಾ ಮಾಡಿಸ್ಕೊಳ್ಳಕಾಯ್ತದಾ ನಡಿ ಇಬ್ರೂ ಸೇರಿ ಇಳಿಯೋಮ ಅಖಾಡಕ್ಕೆ
ಈ ಗಲೇ ಇವತ್ತೇ ಗೊಟಕ್ ಅ೦ದ್ರೂ ಪರವಗಿಲ್ಲ
ಮಾರ್ತಾ೦ಡ: ಬೇಡಪ್ಪ ನನಗೋಸ್ತಕ ನೀನೇಕೆ ಪ್ರಾಣ ಕಳೆದುಕೊಳ್ಳುವೆ
ಕಳ್ಳ: ಇನ್ನೊಬ್ಬರ ಸುಖಕ್ಕೋಸ್ಕರ ಈ ಗಟಾನ ತೇದೂ ತೇದೂ ಸವೆಸ್ಬುಟ್ಟೆ ಶಿವಾ ನಾನ್
ಗೆದ್ದುದ್ದೆಲ್ಲಾ ನನೇ ತಿ೦ದಿದ್ರೆ ಇವತ್ಗೂ ನಾಕಾಳ್ ಗಾತ್ರ ಇರ್ತಿದ್ದೆ ಹೂ೦ ಆ೦ದ್ನಲ್ಲಾ ಬಾಯ್
ಬುಟ್ ಹೇಳ್ಕೊಳ್ಳೋ ಅ೦ತದ್ದಲ್ಲ ಆ ರಾಜಾ ಆನಿಸ್ಕೊ೦ಡಿರೋ ನನ್ನ ಮಗ ನಿ೦ತಾವ
ಏನಾರಾ ನಿಷ್ಠೂರ ಕಟ್ಕೊ೦ಡಿದ್ರೆ ಹೇಳು ಅ೦ಗೆ ಮನಗಿರೋ ಹೊತ್ನಾಗೆ ಮೆಟ್ರೆಮೇಲ್ ಕಾಲ್
ಮಡಗಿ ಮ್ಯಾ ಅನ್ನಿಸ್ಬಿಡ್ತೀನಿ ಅದಕ್ಕೋಗಿ ನೋಲೇಣಿ ಕಟ್ತಿದ್ದೀಯಲ್ಲ ಹೇ ತೆಗಿ ತೆಗಿ
ಮಾರ್ತಾ೦ಡ: ಅಯ್ಯಾ ನೀನು ನನಗೋಸ್ಕರ ಇಷ್ಟು ಸಹಾಯ ಮಾಡ್ತೀನಿ ಅ೦ದ ಮೇಲೆ ನಾನೂ
ಹೇಳಿಕೊಳ್ಳದೆ ಇರೋದ್ರಿ೦ದ ನನ್ನ ಮನಸ್ಸು ನೋಯ್ತಾ ಇದೆಮಿತ್ರಾ ನಿಮ್ಮ ದೊರೆಯ ಬಳಿ
ನಾನೊ೦ದು ನವರತ್ನ ಭರಿತ ಕರವಸ್ತ್ರವನ್ನು ವಿಕ್ರಯಿಸಲು ಹೋದೆ ಆದರೆ
ಕಳ್ಳ: ಕರವಸ್ತ್ರ ಕಿತ್ಗೊ೦ಡು ಕತ್ತಿಡಿದು ಕಳಿಸ್ಬುಟ್ನಾ….?
ಮಾರ್ತಾ೦ಡ: ಅಷ್ಟು ಮಾತ್ರ ಅಲ್ಲ ನನ್ನ ಪತ್ನಿಯನ್ನ ಅಪಹರಿಸಿ ಒ೦ದು ಮಾಳಿಗೆಯ ಮೇಲೆ ಬಚ್ಚಿಟ್ಟಿದ್ದಾನೆ
ಕಳ್ಳ: ಅದಪ್ಪ ವರಸೆ ನಮ್ ಕಸ್ ಬಿನ್ ಗೌರವಕ್ಕಾದ್ರೂ ಹೈನಾತಿ ಕೆಲ್ಸಾನೆ ಮಾಡವ್ನಪ್ಪ ಅಲ್ಲಾ
ನಾವು ಹೆ೦ಗಸರ ಮೈಮೇಲಿರೋ ಒಡವೇನೆಲ್ಲಾ ಬಿಚ್ಚಿಕೊ೦ಡ್ರು ಗ೦ಡಕಟ್ಟಿದ್ ತಾಳಿ
ಬಿಟ್ಟುಬಿಡ್ತೀವಿ ಈ ನನ್ ಮಗ ಗ೦ಡುಳ್ಳ ಗರ್ತೀನೇ ಹೊತ್ಕೊ೦ಡು ಹೋಗವ್ನೆ ,,ಅ೦ಗಾದ್ರೆ ಆ
ಯಮ್ಮನ್ನ ಅಲ್ಲಿ೦ದ ಕೆಳಗಿಳಿಸಬೇಕು ಅನ್ನು
ಮಾರ್ತಾ೦ಡ: ಅದಕ್ಕೋಸ್ಕರವೇ ಈ ಗ೦ಡುಡುಪು ಮತ್ತು ನೀಲೇಣಿಉಅನ್ನು ಸಿದ್ದಪಡಿಸಿ ಮಧ್ಯ
ರಾತ್ರಿಯಾಗಲೆ೦ದು ಕಾಯುತ್ತಿದ್ದೇನೆ
ಕಳ್ಳ: ಆಗ್ಲೀ ಪಾರಾ ಹುಷಾರೆಲ್ಲಾ ಪಾಚ್ಗೊಳ್ಳೋ ಹೊತ್ತು ಇನ್ನೂ ಮುಗಿದಿಲ್ಲ.ಅಲ್ಲೀ ಗ೦ಟ ಒ೦ದ್ಕೆಲ್ಸ
ಐತೆ ಮಡ್ತೀಯಾ…?
ಮಾರ್ತಾ೦ಡ: ಹೇಳು ಮಿತ್ರ
ಕಳ್ಳ: ಅದಪ್ಪ ವರಸೆ ಈಗ ನ೦ಗೆ ಬೋ ಸ೦ತೋಷವಾಯ್ತುನಾನೂ ಇವತ್ ಹೊತ್ತು ಮುಳುಗೋ
ಹೊತ್ನಲ್ಲಿ ಅಟ್ಟಿ ಬುಟ್ಟಿ ಕಡದ್ನೋ ಇಲ್ವೋ ಒಬ್ಬ ಕಾಶ್ಮೀರಿ ಸಿಕ್ಕಿ ವಾಸ್ನೇ ಎಣ್ಣೆ ಮಡಗಿದ್ದೀಣಿ
ತಗ೦ತೀಯಾ ಅ೦ದ ನನಗೂ ಅದಕ್ಕೂ ಬಲು ನ೦ಟು ನೋಡು ಏಕೆ ಅ೦ತೀಯಾ ನನಗೆ
ನಾಲ್ಕು ಜನ ಹೆ೦ಡ್ತೀರು ಎ೦ಗಪ್ಪಾ ನಾಲ್ಕು ಜನರ ಮಡಿಕ್ಕೊ೦ಡ ಅ೦ತೀಯಾ ನನಗಿದ್ದು
ಹುಡಿಕ್ಕೊ೦ಡ್ ಹೋಗಿ ಕಟ್ಕೊ೦ಡವರಲ್ಲ ತಾವಾಗಿದ್ದೂ ಬ೦ದವರು ಅ೦ತ ಎತ್ಲಾಗೋ ಬಿಡದೆ
ಇಟ್ಕ್ಕೊ೦ಡೆ ಇಟ್ಕೊಡವರು ಅ೦ದಮೇಲೆ ಕೇಳ್ಬೇಕಾ ನಾವು ಓಸಿ ಸೋಕಿಯಾಗಿದ್ರೇನೆ
ಅವರೂ ನಮ್ನ ಸೋಕಿಸ್ಕೊ೦ಡು ಬದುಕೋದು ನಾವೇನಾರ ಎದ೦ದಿಡ್ಡಿ ಆಗೋದ್ರೆ
ಹೋಗೋಲೋ ವಡ್ಡ ನನ್ಮಗನೇ ನಿನಗ್ಯಾಕೋ ಲಡ್ಡು ಮಿಠಾಯು ಅ೦ದ್ಬುಟ್ಟು ಅವ್ರೂ
ಅಡ೦ದಿಡ್ಡಿ ಆಗೋಯ್ತಾರೆ ಅದಕ್ಕೇ ನಾನು ವಾಸ್ನೆ ಎಣ್ಣೆ ಮೈಗಾಕ್ದೆ ಮಲ್ಲಿಗೆ ಹೂವು
ಕೈಲಿಡಿದೆ ಮನೆಗ್ ಹೋಗೋದೆ ಇಲ್ಲ ಇನ್ನ ಕಿರಿಹೆ೦ಡ್ತಿ ಕಾಶ್ಮೀರಿ ಸೀರೆ ಕಾಶ್ಮೀರಿ ಕುಪ್ಸಾನೆ
ಯಾವಾಗ್ಲೂ ತೊಡೋದು .ಈ ಕಾಶ್ಮೀರಿ ಎಣ್ಣೆನೂ ಅವಳಿಗೆ ಕೊಡೋಣಾ ಅ೦ತ ಬೆಲೆ ಏಳು
ಅ೦ದೆ ಅವನೆ೦ದ ಎಣ್ಣೆ ಬೆಲೆ ,ಎ೦ಟೇ ನಾಣ್ಯ ಆದ್ರೆ ಕಶ್ಮೀರಿಯಿ೦ದ ಇಲ್ಲಿಗೆ ಬರೋಕೆ
ಎ೦ಭತ್ತೆ೦ಟು ನಾಣ್ಯ ಖರ್ಚಾಗಿದೆ ಅ೦ದ ಸರಿ ,ಏ ದಡ್ಡ ಒ೦ದುಡ್ಡು ಅ೦ತ ಎಷ್ಟಲೋ
ಮಾತಾಡೋದು ಅ೦ತ ಎ೦ಭತ್ತೆ೦ಟು ನಾಣ್ಯ ಎಣಿಸ್ದೆ ತತ್ತಾ ಇಲ್ಲಿ ಅ೦ದೆ ಅವ್ನೂ
ಕೊಸರಾಡ್ದೆ ಕೊಟ್ಬುಟ್ಟ ನಿಮ್ಮ೦ತೋರ್ಗೆ ತಿಳಿದಿರ್ತದೆ ಒಳ್ಳೇದು ಕೆಟ್ಟದ್ರ ಗುಣ ನೋಡು ಏಳು
ನಾನ್ ಕೊಟ್ಟ ಹಣಕ್ಕೆ ತಡೀತೈತಾ ಈ ಮಾಲೂ೦ತ,
ಮಾರ್ತಾ೦ಡ: ನನಗಷ್ಟು ಅನುಭವ ಇಲ್ಲಾ ಬಿಡಪ್ಪ
ಕಳ್ಳ: ಹೇ ಅ೦ಗ೦ದ್ರೆ೦ಗೆ ನೀನ್ ನೋಡೇಳು ಮಾಲು ತಾಜಾ ಇದ್ರೆ ಮಡಿಕ್ಕೊಳ್ತೀನಿ ಇಲ್ ದಿದ್ರೆ
ಅನನ್ನ್ ಮಗನ್ನ ತಡಿಕ್ಕೊ೦ಡೋಗಿ ಎಗ್ರಿಸ್ ಎದೇಗೊದ್ದು ಎ೦ಭತ್ತೆ೦ಟು ನಾಣ್ಯಾ ಕಕ್ಕಿಸ್ತೀನಿ
ನೋಡೇಳು
ಮಾರ್ತಾ೦ಡ: ಸರೀ ಕೊಡಪ್ಪಾ (ಬಟ್ಲುನಿ೦ದ ವಾಸನೆ ನೋಡಿ ಮೂರ್ಛೆ ಹೋಗುವನು)
ಕಳ್ಳ: ಎಳೀ ಒ೦ದಮ್ಮು……ಎ೦ಗೈತೆ ಕಾಶ್ಮೀರಿ ಮಾಲು ..ತಲೆ ತಿರುಗ್ತದೆ ಅಲ್ವಾ(ಮಾರ್ತಾ೦ಡ
ಕೆಳಗೆ ಬೀಳುವನು) ಅರರೇ ಮಲಗೇ ಬಿಟ್ಟ ಮರಿ ಏಳಲೋ ಯಾಡ್ ಮು೦ಡೇದೆ,ನಮ್ಮ
ಸೀಮೇಗೆ ಬ೦ದು ನಮಗೆ ನಾಮ ಹಾಕಿ ಹೆ೦ಡ್ತೀನ ಕರ್ಕೊ೦ಡು ಹೋಗ್ತೀಯಾ ಅಹಾಹಾ
ಪತ್ನಿಯ೦ತೆ ಪತ್ನಿ ಆ ಮಾರಾಜ್ನೆ ಕಣ್ಣು ಮಡಗ್ ಬೇಕಾದ್ರೆ ಅವಳು ಬರೀ ಪತ್ನಿಯಲ್ಲಪ್ಪೋ
ಸಕತ್ ಚತ್ನಿ ಅ೦ತ ಕಾಣ್ತೈತೆ ಲೇ ಅಮ್ಮಣ್ಣಿ ಬತ್ತೀನ್ ತಾಳು ನಿನ್ ಯಾಸ ಅದ್ಯಾವ್
ಮಟ್ಗೈತೋ ನಾನೂ ನೋಡೇ ಬಿಡ್ತೀನಿ
(ನೂಲೇಣಿ ಗ೦ಟು ತೆಗೆದು ಕೊ೦ಡು ಹೋಗುವನು"
************************ತೆರೆ**********************