ಸಮತೆ ಚಿಗುರಲಿ

ಸಮತೆ ಚಿಗುರಲಿ

ಕವನ

ಯಾರು ಮೇಲು ಕೀಳು ಅಲ್ಲ

ನಮ್ಮಲೇಕೆ ಅಂತರ

ಎನುವ ಸತ್ಯ ತಿಳಿದು ನಾವು

ಬಾಳಬೇಕು ಸುಂದರ

 

ಭೇದ ಭಾವ ಬಿಟ್ಟು ನಾವು

ಬದುಕಬೇಕು ನಿತ್ಯವು

ಪ್ರೀತಿ ಪ್ರೇಮ ಇರಲು ನಮ್ಮ

ಬದುಕಿನಲ್ಲಿ ಭಾಗ್ಯವು

 

ನಮ್ಮ ಕೆಲಸ ಕಾರ್ಯವನ್ನು

ಮಾಡಿ ನಾವುಬಾಳುವ

ಒಳ್ಳೆ ನಡತೆ ಒಳ್ಳೆ ಶೀಲ

ಪಡೆದು ನಾವು ಸಾಗುವ 

 

ನಿತ್ಯ ಮನದಿ ಶಾಂತಿಯನ್ನು

ತುಂಬ ಬೇಕು ಬದುಕಲಿ

ಸಮತೆಯತ್ತ ಬಾಳ ಬಂಡಿ

ಉರುಳಿ ಮುಂದೆ ಸಾಗಲಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್