ಸಮಸ್ಯೆ ಬಿಡಿಸಿ
ಬರಹ
ಓರ್ವ ರಾಜ "ಮಹಾಸುಳ್ಳು"ಗಾರ ವ್ಯಕ್ತಿಗೆ ಬಹುಮಾನ ಘೋಷಿಸಿದ.ಸುಳ್ಳು ಹೇಳಿ ತನ್ನನ್ನು ಬೇಸ್ತು ಬೀಳಿಸಿದವರಿಗೆ ಬಹುಮಾನ ನೀಡುವುದಾಗಿ ಜಾಹೀರು ಮಾಡಿದ.ಇದನ್ನು ಕೇಳಿ ಹಲವರು ಬಂದು ಪ್ರಯತ್ನಿಸಿ,ವಿಫಲರಾದರು. ಒಬ್ಬಾತ ತಾನು ಸುಳ್ಳು ಹೇಳುತ್ತೇನೆ ಎಂದು ಆಸ್ಥಾನಕ್ಕೆಬಂದನಂತೆ. ಸುಳ್ಳು ಹೇಳಲು ರಾಜ ಅವಕಾಶ ನೀಡಿದಾಗ, ನಾನು ಸುಳ್ಳು ಹೇಳಿದೆನಲ್ಲಾ ಎಂದು ಬಂದಾತ ಆಶ್ಚರ್ಯ ಪ್ರಕಟಿಸಿದನಂತೆ.ರಾಜ ತುಸು ಯೋಚಿಸಿದ ನಂತರ ಆ ಮಾತನ್ನು ಒಪ್ಪಿ ಬಹುಮಾನ ನೀಡಿದನಂತೆ. ಬಂದಾತ ಹೇಳಿದ ಸುಳ್ಳು ಏನು?