ಸಮಾನತೆಯ ಸೋಗು

ಸಮಾನತೆಯ ಸೋಗು

ಕವನ

ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವವಾಯ್ತು 

ಬೀಡು ಬಿಟ್ಟಿದೆ ಇನ್ನಾ ಜಾತಿ ಬೇರು ಜನರಲ್ಲಿ

ರೌದ್ರ ದೇವಿಯ ಅಗ್ನಿಕುಂಡದ ಜ್ವಾಲೆಯಲ್ಲಿ

ನೋವೆಲ್ಲಾ ಒಗೆದು ತುಳಿದು ದಹನವಾಯ್ತು||೧||

 

ವಾಸನೆ ಹಬ್ಬಿದ ಬಾನಿಯ ನೆನೆಸಿಟ್ಟ ತೊಗಲು

ಮೂಗು ಮುಚ್ಚಿದವರೆ ಕರೆದಿಹರು ಮಜಲು

ಮೂಢ ಹಳಿಯ ಪದ್ಧತಿಯನು ಎದುರಿಸಲು

ಮೇಲಿನಿಂದ ತಳದಿ ಉರಿಯುವುದು ಬಲು||೨||

 

ಶಿಕ್ಷಣ ಪಡೆದ ಬಳಗೆಲ್ಲ ಒಳಗೊಳಗೆ ಕಮರಿದೆ

ಅಂಧಕಾರದಲಿ ಸೊರಗಿ ಬಿದ್ದ ಜೊಲ್ಲರ ಎದೆ

ಮುಟ್ಟಿದರೆ ಮುದುರುವ ಕ್ರಿಯೆಗೆ ಒಳಗಾಗಿದೆ

ಮತ್ತೇಕಿಲ್ಲಿ ಸಮಾನತೆಯ ಸೋಗು ನಡೆದಿದೆ||೩||

 

ದಬ್ಬಾಳಿಕೆ ಮಾಡಿ ವಿರೂಪಗೊಳಿಸಿ ಥಳಿಸುತ

ಹುಂಬದಲಿ ವಿಕೃತ ಮನಸುಗಳು ಮೆರೆಯುತ

ನಡೆಯುತಿಹುದಿನ್ನು ಆಚರಣೆಯು ಅನವರತ

ಬಿಗಿ ಆಗುವುದೇ ನಡುವಿದ್ದ ಕಂದಕದ ಕೊರೆತ||೪||

-ದ್ಯಾವಪ್ಪ ಎಂ.

ಕೆಪಿಟಿಸಿಎಲ್ 220ಕೆವಿ ಕಾರವಾರ 

ಚಿತ್ರ್