ಸರಸ್ವತಿ

ಸರಸ್ವತಿ

ಕವನ

ಸರಸತಿಯೆ ಸರಸಿಜಾತನ ಮತಿಯೆ

ಮತಿಯಲ್ಲಿ ಪದವಿರಿಸಿ ಸರಸರನೆ ಬಾ

ಪದತುಂಬಿದೀ ಬಿಂದಿಯಲಿ ಕಲೆತು ಬಾ.

ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ

ಪದಪದಗಳಲಿ ಸರಿಗಮದ ನಡಿಗೆ.

ಪದಕುಸುಮ ಪದಮಾಲೆ ಪದದೋಲೆ ನಿನಗೆ

ಕದತೆರೆದು ಪದಬಿರಿದು ಮುದದೋರು ಬಾ.

Comments