ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

ಬರಹ

ಯುಗಾದಿ ಹಬ್ಬದ ಆಚರಣೆ :

ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ : ೧೩-೦೪-೨೦೦೮ ನೇ ರವಿವಾರ, ಯುಗಾದಿಹಬ್ಬವನ್ನು ಆಚರಿಸುತ್ತಾರೆ. ಆಂಧ್ರದವರೂ, ಸೋಮವಾರದಂದೇ ಯುಗಾದಿಯನ್ನು ಆಚರಿಸುತ್ತಾರೆ.

ಉಷಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮಂಟಪವನ್ನು ಅಲಂಕರಿಸಿ, ಅಭ್ಯಂಜನವನ್ನು ಮಾಡಿ, ಸಂಧ್ಯಾವಂದನೆಗಳನ್ನು ನೆರವೇರಿಸಿ, ಶ್ರೀ ಮಹಾಗಣಪತಿ ಪೂಜಾ ಪೂರ್ವಕ, ನೂತನ ವರ್ಷದ ಪಂಚಾಂಗ ಸಹಿತ, ಕುಲದೇವತೆಯನ್ನು ಅರ್ಚಿಸಬೇಕು. ತದನಂತರ, ಬೇವು-ಬೆಲ್ಲಗಳನ್ನು ಭುಜಿಸಿ, ಸನ್ಮಿತ್ರರೊಡನೆಯೂ, ಸುಜನರುಗಳಳಿಂದ ಕೂಡಿರುವ ಸಭೆಯಲ್ಲಿ ದೈವಜ್ಞರು ಪಠನಮಾಡುವ "ಪಂಚಾಂಗ ಶ್ರವಣ," ವನ್ನು ಆಲಿಸಬೇಕು. ಬೇವು-ಬೆಲ್ಲವನ್ನು ಸಾಮಾನ್ಯವಾಗಿ ಮನೆಯ ಯಜಮಾನರು, ಮನೆಯವರಿಗೆಲ್ಲಾ ಕೊಡುವ ಪದ್ಧತಿ ಇದೆ. ಪರಿವಾರದವರು, ಪ್ರಸಾದವನ್ನು ಸೇವಿಸುವಾಗ, ಕೆಳಗಿನ ಶ್ಲೋಕವನ್ನು ಹೇಳಿ ಸೇವಿಸತಕ್ಕದ್ದು.

" ಶತಾಯುರ್ವತ್ರದೇಹಾಯ ಸರ್ವಸಂಪತ್ಕರಾಯಚ.

ಸರ್ವಾರಿಷ್ಠವಿನಾಶಾಯ ನಿಂಕಂದಳ ಭಕ್ಷಣಂ ".

ಅರ್ಥಾತ್, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ. ಎಂದು ಹೇಳಿ ಸೇವಿಸಬೇಕು.

ಆಸ್ತಿಕರ ಗಮನಕ್ಕೆ :

ದೃಗ್ಗಣಿತ ಪಂಚಾಂಗ ರೀತ್ಯ ತಾ. ೦೬-೦೪-೨೦೦೮ ನೇ ರವಿವಾರ * ಅಮಾ. ೭-೪೫ (ಬೆ ೯-೨೫) ಉಪರಿ ಚೈತ್ರ ಶುಕ್ಲ ಪ್ರಥಮಾ ೫೧-೫೦ ( ಬೆ. ಝಾ. ೬-೦೯) ಬಂದಿರುವುದರಿಂದ ದೃಗ್ಗಣಿತ ರೀತ್ಯ ತಾ. ೦೬-೦೪-೨೦೦೮ ನೇ ಭಾನುವಾರ ಚಾಂದ್ರಮಾನ ಯುಗಾದಿಯಾಗುತ್ತದೆ. ಮಹಾರಾಷ್ಟ್ರದಲ್ಲಿ, " ಗುಡಿಪಾಡ್ವ," ಹಬ್ಬವನ್ನು ಭಾನುವಾರ, ಅಂದರೆ, ಈ ದಿನ, ೦೬-೦೪-೨೦೦೮ ರಂದು, ಆಚರಿಸುತ್ತಿದ್ದಾರೆ.

-ಪಂಚಾಂಗಕರ್ತರು : ಒಂಟಿಕೊಪ್ಪಲ್, ಪಂಚಾಂಗ ಮಂದಿರದ, ಮೈಸೂರು ಪಂಚಾಂಗ. [೧೨೨ ನೆಯ ವರ್ಷದ ಪ್ರಕಟಣೆ]