ಸಲಹಿ ನಮ್ಮನು

ಸಲಹಿ ನಮ್ಮನು

ಕವನ

ಬಾಯಿ ಮಾತಿನ

ಆಶ್ವಾಸನೆ ಬೇಡ

ನೆಟ್ಟು ನೀರೆರೆದು

ಗೊಬ್ಬರವುಣಿಸು ಮನುಜ

 

ಮಗುವಿನಂದದಿ

ತೈಲವುಜ್ಜಿ ತಿಕ್ಕಿ

ಕಾಳಜಿಯಿಂದ

ಪೋಷಿಸಿ ಸಲಹು ಮನುಜ

 

ನಾನೇನು ದ್ರೋಹ

ಮಾಡಿಲ್ಲ ನಿನಗೆ

ನಿನ್ನ ಸ್ವಾರ್ಥ

ಮುಳುವಾಯಿತೆನಗೆ ಮನುಜ

 

ಹಸಿರಿದ್ದರೆ ಉಸಿರು

ಇಲ್ಲದಿರೆ ಹೊಸಕಿತು

ತನುವ ಬಸಿರು

ಎಚ್ಚೆತ್ತು ವರ್ತಿಸು ಮನುಜ

 

ಒಂದು ಕತ್ತರಿಸಿದರೆ

ಎರಡು ನೆಡುವೆ

ಎಂಬ ಘೋಷಣೆ

ಬರಲಿ ನಾಲಿಗೆಯಲಿ ಮನುಜ

 

ಸ್ವಚ್ಛ ಪರಿಸರ

ಸುಂದರ ಕನಸುಗಳ

ನನಸು ಮಾಡಲು

ನೆಟ್ಟು ಸಲಹು ಮನುಜ

 

-ರತ್ನಾ ಭಟ್ ತಲಂಜೇರಿ 

 

ಚಿತ್ರ್