ಸಾತ್ವಿಕ,ರಾಜಸ,ಥಾಮಸ ಆಹಾರಗಳು
ಆಹಾರಗಳಲ್ಲಿ ಮೂರುಬಗೆಗಳು ಎಂಬುದನ್ನು ಹಲವಾರು ಬಾರಿ ಕೇಳಿದ್ದೇನೆ, ಓದಿದ್ದೇನೆ. ಸಿಹಿ,ಖಾರ, ಹುಳಿ ಇವುಗಳು ರಾಜಸಗಳೆಂದೂ, ಮೊಸರು, ಈರುಳ್ಳಿ, ಬದನೇಕಾಯಿ, ಕರಿದ ಪದಾರ್ಥಗಳು ಇತ್ಯಾದಿಗಳು ಥಾಮಸ ಆಹಾರಗಳೆಂದೂ, ಯಾವ ಆಹಾರಗಳು ಚಿತ್ತ ಶುದ್ಧಿಗೆ ಇಂಬುಕೊಟ್ಟು ಶಾಂತಮನಸ್ಸಿಗೆ ಸಹಾಯಕಾರಿಯಾಗುವಂಥವು ಸಾತ್ವಿಕ ಆಹಾರಗಳು ಎಂದು ವಿಂಗಡಿಸಲಾಗಿದೆಯಂತೆ. ಚಾತುರ್ಮಾಸದಲ್ಲಿ ಒಂದೊಂದು ಬಗೆಯ ತಿನಿಸುಗಳನ್ನು ಒಂದೊಂದು ತಿಂಗಳು ವರ್ಜ್ಯಮಾಡುತ್ತಾರೆ. ಉದಾ: ಮೊಸರು, ಹಾಲಿನ ಪದಾರ್ಥಗಳು ಒಂದುತಿಂಗಳು ವರ್ಜ್ಯ. ಖಾರ(ಮೆಣಸಿನಕಾಯಿ) ಒಂದುತಿಂಗಳು. ಕೆಲವು ಬಗೆಯ ತರಕಾರಿಗಳು ಒಂದುತಿಂಗಳು. ಈ ತಿಂಗಳುಗಳಲ್ಲಿ ಮಳೆ, ಶೀತ ಹೆಚ್ಚಿರುವುದರಿಂದ ಇಂತಹ ವ್ಯವಸ್ಥೆ ಮಾಡಲಾಗಿತ್ತು ಎಂಬುದು ಕೆಲವರವಾದ. ದೇಹಕ್ಕೆ ಪ್ರೋಟೀನು, ವಿಟಮಿನ್ಸು, ಕ್ಯಾಲೋರಿ ಅಗತ್ಯ ಎಂಬುದನ್ನು ಓದಿದ್ದೇವೆ. ಮಸಾಲೆ ಪದಾರ್ಥಗಳು ಅಗತ್ಯ ಅಂತ ಎಲ್ಲೂ ಹೇಳಿಲ್ಲವೇ? ಹಾಗಾದರೆ ರಾಜಸ ಪ್ರವೃತ್ತಿಯ ಇಂತಹವನ್ನು ಬರೀ ಬಾಯಿ ಚಪಲಕ್ಕೆ ತಿನ್ನುತ್ತೇವೆಯೇ? ಅದಕ್ಕಾಗಿಯೇ ಭಾರತೀಯರಲ್ಲಿ ರಾಗ, ಪ್ರೇಮ, ಕಾಮ, ದ್ವೇಶಗಳು ಹೆಚ್ಚು ಇದೆಯೇ?
ಹೇಳಬೇಕೆಂದರೆ ವಿದೇಶೀ ಆಹಾರಗಳಲ್ಲಿ ಇಂತಹ ಮಸಾಲೆ ಪದಾರ್ಥಗಳು ತೀರ ಕಡಿಮೆ.
ಆಹಾರಗಳು ಆಲೋಚನಾಶಕ್ತಿಯನ್ನು ನಿರ್ಧರಿಸುತ್ತವೆಯೇ? ಬಲ್ಲವರು ಚರ್ಚಿಸಿ.
(ವಿ.ಸೂ: ವೈಯುಕ್ತಿಕ ನಿಂದನೆಗಳು ಬೇಡ)
Comments
ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು