ಸಾಧನೆ ಎಂಬ ಮರೀಚೀಕೆಯ ಬೆನ್ನುಹತ್ತಿ

ಸಾಧನೆ ಎಂಬ ಮರೀಚೀಕೆಯ ಬೆನ್ನುಹತ್ತಿ

ಬರಹ

"ರೂಪಕ್ಕ ನಾವು ಅರುಣೋದಯ ಯುವಕ ಯುವತಿಯರ ಸಂಘ ಅಂತ ಒಂದು ಸಂಘ ಮಾಡಿದೀವಿ . ಅದರ ಉದ್ಘ್ಹಾಟನೆ ಮುಂದಿನ ತಿಂಗಳು ಜೊತೆಗೆ ನಿಮಗೆ ಒಂದು ಅವಾರ್ಡ್ ಕೊಡೋಣ ಅಂತೀದೀವಿ " ಅರುಣ್ ಹೇಳಿದಾಗ ಕಣ್ಣರಳಿಸಿದೆ ಆತ ನಾನು ಪಿಯುಸಿಯಲ್ಲಿದ್ದಾಗ ಆರನೆ ತರಗತಿಯಲ್ಲಿ ಇದ್ದ ಅವನಿಗೆ ಟ್ಯೂಷನ್ ಹೇಳಿಕೊಡುತ್ತಿದ್ದೆ . ಇಂದು ಆತ ಮುಂದೆ ಬಂದು ನನಗೆ ಅವಾರ್ಡ್ ಕೊಡುತ್ತೇನೆ ಎಂದಾಗ ಆಶ್ಚರ್ಯವಾಗುವುದು ಸಹಜವೇ
" ಯಾವ ಅವಾರ್ಡ್ಪಪ್ಪ . ಏನದರ ಹೆಸರು ಅರುಣ್"
" ಜೀವಮಾನದ ಸಾಧನೆಗಾಗಿ"

"ಅರುಣ್ ನನಗೆ ಅವಾರ್ಡ್ ಕೊಡೋ ಅಷ್ಟು ದೊಡ್ಡ ಕೆಲಸ ಏನೂ ಮಾಡಿಲ್ಲ ಫಂಕ್ಶ್ಗನ್‌ಗೆ ಖಂಡಿತ ಬರ್ತೀನಿ . ಇನ್ನೂ ನನ್ನ ಜೀವಮಾನದ ಕಾಲು ಭಾಗ ಮಾತ್ರ ಆಗಿದೆ ಅರ್ಧ ಭಾಗ ಆಗಲಿ ನೋಡೋಣ " ಎಂದು ಅನುನಯಿಸಿ ಕಳಿಸಿದೆ. ಆತನಷ್ಟೆ ಅಲ್ಲಾ ಆತನ ಗೆಳೆಯರೂ ಒತ್ತಾಯಿಸಿದ್ದಾರೆ ಈ ತಿಂಗಳಲ್ಲೇ ಆ ಸಮಾರಂಭವಿದೆ. ಇನ್ನೂ ಅದರ ಬಗ್ಗೆ ಯೋಚಿಸಿಲ್ಲ
ಆದರೆ ಒಮ್ಮೆ ಹಿಂದೆ ತಿರುಗಿ ನೋಡಿದರೆ
ಸಾಧನೆ ಎಂದರೇನು . ನಾನು ಈ ಸಾಧನೆಯ ಬೆನ್ನಿಗೆ ಬಿದ್ದವಳಲ್ಲವೆ? ಏನಾದರೂ ಮಾಡಿ ಜನ ನನ್ನನ್ನು ಮೆಚ್ಚಿಕೊಳ್ಳಬೇಕೆಂಬ ಹಂಬಲವಿದ್ದವಳಲ್ಲವೇ ನಾನು
ಅವಾಗ ನಾನು ಏಳನೆ ತರಗತಿಯಲ್ಲಿ ಇದ್ದಾಗ ಸಂಗೀತ ತರಗತಿಗೆ ಸೇರಿಕೊಂಡಿದ್ದೆ
ನಮ್ಮ ಮಿಸ್ "ರೂಪ ನಿನಗೆ ಒಳ್ಳೇ ಕಂಠ ಇದೆ. ಶ್ರದ್ದೆ ಇದೆ . ಅಭ್ಯಾಸ ಮಾಡು . ಮುಂದೆ ಪ್ರಸಿದ್ದಿ ತಗೊಳ್ತೀಯಾ ಎಂದಿದ್ದರು. ಸರಿ ಹಠಕ್ಕೆ ಬಿದ್ದ ನಾನು ಅದನ್ನು ಅಭ್ಯಾಸ ಮಾಡಿದ್ದೇ ಮಾಡಿದ್ದು . ದೊಡ್ಡ ಹಾಡುಗಾರ್ತಿಯಾದಂತೆ ಕನಸು ಕಂಡಿದ್ದೇ ಕಂಡಿದ್ದು
ಆ ಕನಸು ನುಚ್ಚು ನೂರಾದದ್ದು ಮನೆಯ ಬಡತನದಿಂದ ಅಮ್ಮ ಶಾಲೆಗೆ ಕಳಿಸಲು ಹಣ ಕಟ್ಟಲು ಕಷ್ಟ ಪಡುತಿದ್ದರು . ನಾವಿಬ್ಬರು (ನಾನು ನಮ್ಮ ಅಕ್ಕ) ಮ್ಯೂಸಿಕ್ ಬಿಟ್ಟೆವು
ನಂತರದ ಶಾಲಾ ದಿನಗಳಲ್ಲಿ ನಾಟಕ ಹಾಗು ಕತೆ ಬರೆಯುತ್ತ ಬರೆಯುತ್ತಾ ದೊಡ್ಡ ಕತೆಗಾರ್ತಿಯಾಗುವೆನೇನೋ ಎಂದು ಸಂಭ್ರಮ ಪಟ್ಟಿದ್ದೆ.
ಆದರೆ ಅಮ್ಮ ಈ ಕತೆ ಕವನ ನಾಟಕಗಳೆಲ್ಲಾ ಜೀವನಕ್ಕೆ ಬರುವಂತಹದಲ್ಲ . ನಮ್ಮ ಕಷ್ಟ ಹೋಗಬೇಕಾದರೆ ನೀನು ಚೆನ್ನಾಗಿ ಓದಿ ಐ ಏ ಎಸ್ ಆಫೀಸರ್ ಆಗಬೇಕೆಂದರು.
ನಂತರ ನನ್ನ ಪ್ರಸಿದ್ದ ಲೇಖಕಿ ಆಗಬೇಕೆಂಬ ಸಂಭ್ಹ್ರಮ ಎಲ್ಲೋ ಅಡಗಿ ಜಿದ್ದಿಗೆ ಬಿದ್ದ ಹಾಗೆ ಓದಲಾರಂಭಿಸಿದೆ. ಹಾಗೆಯೆ ಹತ್ತನೇ ತರಗತಿಯಲ್ಲಿ ಒಳ್ಳೇ ಮಾರ್ಕ್ಸ್ ತೆಗೆದುಕೊಂಡೆ.
ಅಷ್ಟರಲ್ಲಿ ಯಾರೋ ಈ ಇಂಜಿನಿಯರಿಂಗ್‍೬ನ ಹುಚ್ಚು ಹತ್ತಿಸಿದ್ದರು . ಹಾಗಾಗಿ ಪಿಯುಸಿಯಲ್ಲಿ ವಿಜ್ಣಾನ ತೆಗೆದುಕೊಂಡು ಓದಿದೆ . ಅ
ಪಿಯುಸಿಯಲ್ಲಿ ಅಂತಹ ಅತ್ಯುತ್ತಮ ಅಂಕ ಗಳಿಸಲು ಸಾಧ್ಯವಾಗದ ಕಾರಣ ಇಂಜಿನಿಯರಿಂಗ್ ಕನಸಾಗಿಯೇ ಉಳಿಯಿತು
ಡಿಪ್ಲೊಮಾ ಮಾಡುವಾಗಲೂ ನನ್ನ ಗಮನವೆಲ್ಲಾ ಪ್ರೋಗ್ರಾಂಮಿಂಗ್ ಎಡೆಗೆ ಅದರಲ್ಲೊ ಸಿ ಪ್ರೋಗ್ರಾಂಮಿಂಗ್ ಕಡೆಗೆ .
ಅಮ್ಮ ಚೀಟಿ ಎತ್ತಿ ನನಗೊಂದು ಕಂಪ್ಯೂಟರ್ ಕೊಡಿಸಿದ್ದರು
ರಾತ್ರಿ ಎಲ್ಲಾ ನಿದ್ದೆಗೆಟ್ಟು ಓದುತ್ತಿದ್ದೆ . ಸಿ ಮೇಲಿನ ಎಲ್ಲಾ ಪುಸ್ತಕವನ್ನೂ ಒಂದು ಬಿಡದೆ ಓದುತಿದ್ದೆ
ಈ ಪ್ರೋಗ್ರಾಂಮಿಂಗ್ ಫೀಲ್ಡ್ನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠ ಆಗ
ಕೊನೆಗೆ ಓದು ಮುಗಿಸಿದ ಮೇಲೆ ಕೂಡಲೆ ಒಂದೊಳ್ಳೆಯ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಇಂಟರ್‌ವ್ಯೂ ನಲ್ಲಿ ಎಚ್ ಆರ್ ಕೇಳಿದ ಪ್ರಶ್ನೆ "what is your aim.what do you want to be in your future?"
ನನ್ನ ಉತ್ತರ
"i want my name to be the next name after dennis richi 'the develper of C' "

ಹೀಗಿದ್ದ ನನ್ನ ಸಿ ಹುಚ್ಚು ಕೆಲಸ ಕಳೆದುಕೊಂಡ ಮೇಲೆ ಬಿಟ್ತಿತು
ಈ ಪ್ರೋಗ್ರಾಂಮಿಂಗ್ . ಈ ಸಾಫ್ಟ್‍ವೇರ್ . ಈ ಕೆಲಸ ಯಾವದೂ ನಡೆಯಲಿಲ್ಲ ಎಲ್ಲಾ ಟೊಳ್ಳು, ಭ್ರಮಾ ನಿರಸಗೊಂಡೆ
ನಾನು ಅಂದುಕೊಂಡ ಸಾಧನೆ ಯಾವದರಲ್ಲೂ ಸಾಧಿಸಲಿಲ್ಲ. ಹಾಡುಗಾರ್ತಿ, ಕತೆಗಾರ್ತಿ, ಪ್ರೋಗ್ರಾಮರ್,ಇಂಜಿನಿಯರ್, ಐ.ಏ.ಎಸ್ ಯಾವುದೂ ಆಗಲಿಲ್ಲ
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠವೇ ನನ್ನಲ್ಲಿ ಕೊನೆಗೆ ಹೊರಟು ಹೋದಾಗ
ಈ ಹುಡುಗ ನನ್ನ ಸಾಧನೆಗೆ ಅವಾರ್ಡ್ ಕೊಡಬೇಕೆಂದು ಹೇಳುತ್ತಿದ್ದಾನಲ್ಲಾ
ನೆಂಟರು. ಊರಿನವರು , ನಾನೇನೋ ಸಾಧಿಸಿ ತೋರಿದ್ದೇನೆ ಎಂಬಂತೆ ಹೊಗಳುವಾಗ ಮುಜುಗರವಾಗುತ್ತದೆ.
ಈಗೇನಿದೆಯೋ ಅದು ನನ್ನ ಸ್ವಾರ್ಥಕ್ಕಾಗಿ ಮಾಡಿದ್ದು. ಬಾಳಿ ತೋರಬೇಕೆಂಬ ಛಲದಲ್ಲಿ ಮಾಡಿದ್ದು ಇದರಲ್ಲಿ ನನ್ನಾವ ಸಾಧನೆಯೂ ನನಗೆ ಕಾಣಿಸುತ್ತಿಲ್ಲ . ಅಥವ ಈ ಸಾಧನೆ ಎನ್ನುವುದು ಒಬ್ಬರಿಂದ ಒಬ್ಬರಿಗೆ ಬದಲಾಯಿಸುತ್ತದೆಯೋ ಏನೂ ತಿಳಿಯುತ್ತಿಲ್ಲ.
ಅವಾರ್ಡ್ ತೆಗೆದುಕೊಳ್ಳಲು ಮನಸು ಇನ್ನೂ ಬರುತ್ತಿಲ್ಲ
ಮುಂದೇನಾಗುತ್ತದೆಯೋ ಗೊತ್ತಿಲ್ಲ