ಸಾವು
ಕವನ
ಹಕ್ಕಿ ಹಾರಿದ ಕೂಡಲೆ
ಮರ ಬಿದ್ದು ಹೋಗುತ್ತದೆ.
ಆಗಾಗ ರೆಕ್ಕೆ ಬಡಿದಾಟ.
ಮರಕ್ಕಿಲ್ಲ ನೋಟ.
ನದಿ ಒಣಗಿದ ಕೂಡಲೆ
ದೋಣಿ ಸುಟ್ಟು ಹೋಗುತ್ತದೆ.
ಯಾವ ದಿಕ್ಕು..?
ಯಾವ ದಡ...?
ಸಮುದ್ರ ಹುಸಿ.
ದಡ ದಂಡ.
ಗಾಳಿ ನಿಂತ ಕೂಡಲೆ
ಗಾಳಿ ಪಟ ಕುಸಿಯುತ್ತದೆ.
ಯಾವ ತ್ತಂತಿ ಮೇಲೆ..?
ಯಾವ ಮಹಡಿ ಮೇಲೆ..?
ಗಾಳಿ ಮುಂದೆ ಹೋಗುತ್ತದೆ.
ತಬಲಕೆ ತೂತು ಬಿದ್ದು
ಕಛೇರಿ ನಿಲ್ಲುತ್ತದೆ.
ಶ್ರೋತೃಗಳು ಏನೆಂದರು..?
ವೇದಿಕೆಯ ವಕಾಲತ್ತು ಏನಿತ್ತು..?
--------------------------------
c v sheshadri holavanahalli
( ರೆಕ್ಕೆ ಗೂಡು ಆಕಾಶ ಸಂಕಲನದಿಂದ.)