ಸಾಹಿತಿ‍ ‍‍ಸಾಹಿತ್ಯ

ಸಾಹಿತಿ‍ ‍‍ಸಾಹಿತ್ಯ

ಕವನ

ನಿಮಗೇನು ಗೊತ್ತು

ಬರೆಯುವವನ ಪಾಡು

ತಲೆ ತುಂಬ ಕೂದಲು

ನಿಲುವುದ್ದ..

ಯಾಕೆಂದು ಯಾರಾದರು

ಕೇಳುವರೇನು?

ಸಾಹಿತಿಗಳೆಂದರೆ ಹಾಗೆಯೇ

ಎಂದು ಕೈ ತೊಳೆದುಕೊಳುವರು

 

ತಲೆ ಬುಡವಿಲ್ಲದ ಮಾತು

ತುಂಬಿಕೊಂಡದ್ದನ್ನೆಲ್ಲ

ವಾಂತಿಮಾಡುವ ಚಪಲ

ಏನು ಎಂದಿರಿ ನೀವು? ಏನದರ ಅರ್ಥ?

ಎಂದು ಕೇಳುವವರಾರು?

ಅರ್ಥವಾಗದ್ದೆ ಸಾಹಿತ್ಯ ಎಂದು

ಕುಂಡಿಗೆ ಕೈ ಒರೆಸಿ ಎದ್ದು ಹೋಗುವರು..

ನಿಮಗೇನು ಗೊತ್ತು..?

 

ಶಿವಪ್ರಸಾದ್ ಎಸ್.ಪಿ.ಎಸ್

 

 

 

Comments