ಸಿಗದ ಹೆಣ್ಣಿಗಾಗಿ...
ಕವನ
-೧-
ನಗುವೆ ಏಕೆ ನೀನು
ಸಿಗುವುದಿಲ್ಲ ನಿನಗೆ ನಾನು!
ಸಿಗದ ಹೆಣ್ಣಿಗಾಗಿ
ಸತ್ತನಲ್ಲ ಪಾಪ!
ಆ ಹತ್ತು ತಲೆಯ ಭೂಪ
ನಿನಗೆ ತಿಳಿಯದೇನು?!
ಸರಿದು ಹೋದ ಹರಯ
ಬಾರದಿನ್ನು ಗೆಳೆಯ
ನಿನಗೆ ಸಿಕ್ಕವಳನು ಅಪ್ಪು
ಮನಸಿಗಿಲ್ಲ ಮುಪ್ಪು!
-ಮಾಲು
-೨-
ಸಕ್ಕರೆ ತುಪ್ಪ
ಹಾಲು ಜೇನು
ಬೆರೆಸಿಹ ಹಣ್ಣು ನೀನು!
ಮಧುವದು ಸುರಿಯುವ
ಅದಿರುವ ಅಧರವ
ಪಡೆದಿಹ ಹೆಣ್ಣು ನೀನು!
ಹಸಿದವ ತುತ್ತಿಗೆ
ಕಾಯುವ ಹಾಗೆ
ನಿನ್ನಯ ಮುತ್ತಿಗೆ
ಕಾಯುವೆ ಗೆಳತಿ ನಾನು!