"ಸಿ.ಡಿ."ಗೆ ಈಗ ೨೫ ವರುಷ
ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ ಕೇಳುವವರಿಗೆ ಉತ್ತಮ ಕ್ವಾಲಿಟಿಯ ಸಂಗೀತ ತಲುಪಿಸಿದ್ದೇ ಅಲ್ಲದೆ ಹೆಚ್ಚು ದಿನ ಬಾಳಿಕೆ ಬರುವಂತಹ ಮಾಧ್ಯಮವಾಗಿ ಹೇಗೆ ಡಿಜಿಟಲ್ ಸಂಗೀತ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿತು ಎಂಬುದನ್ನ ನೆನಪಿಸಿಕೊಳ್ಳುತ್ತ [:http://www.portfolio.com/views/blogs/the-tech-observer/2007/08/17/cd-turns-25----how-much-longer-does-it-have-to-live|ಹಲವು] [:http://www.gadgetell.com/2007/08/the-compact-disc-turns-25/|ಟೆಕ್] [:http://www.denverpost.com/business/ci_6643909|ಸೈಟುಗಳು] ಇವತ್ತು ವರದಿ ಮಾಡಿವೆ.
೧೯೭೯ರಲ್ಲಿಯೇ ಫಿಲಿಪ್ಸ್ ಮತ್ತು ಸೋನಿ ಒಟ್ಟಾಗಿ ಇಂಜಿನೀಯರುಗಳ ಗುಂಪೊಂದನ್ನ ಹೊಸ ಡಿಜಿಟಲ್ ಮ್ಯೂಸಿಕ್ ಡಿಸ್ಕ್ ಒಂದನ್ನ ಡಿಸೈನ್ ಮಾಡೋದಕ್ಕೆಂತು ಇಟ್ಟಿತ್ತಂತೆ. ಮುಂದಿನ ಒಂದು ವರ್ಷದಲ್ಲಿ ಡಿಸ್ಕಿನ ಡಯಾಮೀಟರ್ ಮುಂತಾದುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತಂತೆ, ಮೂಲತಃ ಒಂದು ಘಂಟೆಯಷ್ಟು ಆಡಿಯೋ ಹಿಡಿಸಲೆಂದು ತಯಾರಿಸಿದ ಸಿ.ಡಿ. ೧೧೫ಮಿಮೀ ವ್ಯಾಸದಷ್ಟು ದೊಡ್ಡದಿತ್ತಂತೆ. ನಂತರ ಬಿಥೋವನ್ನನ ಒಂಬತ್ತನೇ ಸಿಂಫೋನಿಯ ಪೂರ್ಣ ಆಡಿಯೋ ಹಿಡಿಸುವಷ್ಟು (೭೪ ನಿಮಿಷ) ಅದರ ಸಾಮರ್ಥ್ಯ ಹೆಚ್ಚಿಸಲಾಯಿತಂತೆ.
ಹೆಚ್ಚಿನ ಮಾಹಿತಿಗೆ ಓದಿ:
* [:http://digital50.com/news/items/BW/2001/07/14/20070816005663/philips-celebrates-25th-anniversary-of-the-compact-disc.html|Philips Celebrates 25th Anniversary of the Compact Disc]
* [:http://en.wikipedia.org/wiki/CD|Compact Disc] - Wikipedia.
ಈ ಪುಟ್ಟ ಬರಹ ಮುಗಿಸುವ ಮುನ್ನ: ಸಿ.ಡಿ. ತಂತ್ರಜ್ಞಾನಕ್ಕೆ ನನಗಿಂತಲೂ ವಯಸ್ಸಾಗಿದೆ ಎಂಬುದು ತಿಳಿದು ಆಶ್ಚರ್ಯವಾದರೂ ನಾವುಗಳು ಸಿ.ಡಿ ಕಂಡಿದ್ದು ಕೇವಲ ಇತ್ತೀಚೆಗೆ (ಕೆಲವು ವರ್ಷಗಳ ಹಿಂದೆ) ಅಲ್ಲವೆ ಎಂಬುದು ನೆನಪಾಗಿ ಗಾಬರಿಯಾಯ್ತು. ನಾನು ಮೊದಲು ಸಿ.ಡಿಗಳನ್ನು ನೋಡಿದ್ದು ೧೯೯೭ರಲ್ಲಾದರೂ ಸ್ವತಃ ಮೊದಲ ಬಾರಿ ಬಳಸಲು ಸಾಧ್ಯವಾಗಿದ್ದು ೨೦೦೦ದಲ್ಲಿ! ತಮಾಷೆಯೆಂದರೆ ಈಗಾಗಲೇ ಸಿ.ಡಿ.ಗಳು ಬಹು ದೂರ ಸರಿದು ಡಿ.ವಿ.ಡಿಗಳ ಪ್ರವೇಶವಾಗಿ ಹೋಗಿದೆ. ಈಗ ಸಿ.ಡಿಗಳನ್ನು ಯಾರಾದರೂ ಹಿಡಿದಿದ್ದರೆ ಹಿಂದೊಮ್ಮೆ ೩ ೧/೪ ಇಂಚುಗಳ ಫ್ಲಾಪಿ ಹಿಡಿದವರನ್ನು ನೋಡಿದ ಹಾಗೆ ಆಗುತ್ತದೆ. ಇನ್ನೂ ಫ್ಲಾಪಿ ಡ್ರೈವುಗಳನ್ನು ಇಟ್ಟುಕೊಂಡವರನ್ನಂತೂ "ಓಬಿರಾಯನ ಕಾಲದವರು" ಎನ್ನುವ ಸಮಯ!