ಸಿದ್ದನ ಮದುವೆ ವಿತ್ ಡಿಪ್ಪರ್
ಸಿದ್ದ ಬೆಳಗ್ಗೆನೇ ಫುಲ್ ಸೇವಿಂಗ್ ಮಾಡ್ಕಂಡು, ಕಟಿಂಗ್ ಮಾಡಿಸ್ಕಂಡು ಬತ್ತಾ ಇದ್ದ. ಎದುರಿಗೆ ಸಿಕ್ಕ ಯಂಕ, ಅಣ್ಣಾ ಏನು ಇವತ್ತು ಫುಲ್ ಎಫ್.ಸಿನಾ ಅಂದ, ಏನ್ಲಾ ಅಂಗಂದ್ರೆ, ಏನಿಲ್ಲಾ ಮುಖದಾಗೆ, ತಲ್ಯಾಗೆ ಕೂದಲೇ ಇಲ್ವಲ್ಲಾ, ಅದಕ್ಕೆ ಎಫ್.ಸಿ ಅಂದೆ ಅಂದ ಯಂಕ. ಹೂಂ ಕಲಾ, ಬೆಳಗ್ಗೆನೇ "ಮೂಷಿಕ ಹೇರ್ ಡ್ರೆಸೆಸ್್ಗೆ" ಹೋಗಿದ್ದೆ, ಕಟಿಂಗ್ ಸಾಪ್ ಸೀನ, ಅಣ್ಣಾ ನೀನು ಮಕ್ಕೋ ನಾನು ಸಾನೇ ಸಂದಾಗಿ ಕಟಿಂಗ್ ಮಾಡ್ತೀನಿ ಅಂತ, ತಲೆಗೆ ಹಗ್ಗ ಕಟ್ಟಿ ಮಿಲಿಟರಿ ಕಟಿಂಗ್ ಮಾಡವ್ನೆ ಕಲಾ ಅಂದ ಸಿದ್ದ. ಪೊಲೀಸ್ನೋರು ಯಾರೋ ಹೊಸದಾಗಿ ಇನ್ಸ್್ಪೆಕ್ಟರ್ ಬಂದಾವ್ರೆ ಅಂತ ಸಲ್ಯೂಟ್ ಹೊಡೆದಿದ್ರಂತೆ, ಏಥೂ,
ಹೌದು ಯಾವತ್ತೂ ಗಡ್ಡ ಬಿಟ್ಕಂಡು ದೇವ್್ದಾಸ್ ತರಾ ಇದ್ದೋನು, ಏನು ಇದ್ದಕ್ಕಿದ್ದಂಗೆ ಹಿಂಗೆ ಕಟಿಂಗ್, ಸೇವಿಂಗ್ ಅಂದ ಯಂಕ, ನೋಡ್ಲಾ, ನಮ್ಮವ್ವ ನಾನು ಮದುವೆಯಾದ್ರೆ ಸರಿ ಆಯ್ತೀನಿ ಅಂತು ಅದಕ್ಕೆ ಮದುವೆ ಆಯ್ತಾ ಇದೀನಿ ಅಂದ ಸಿದ್ದ. ನೀನು ಮಕ್ಕಳಾದ್ರೂ ಸರಿ ಆಗಕ್ಕಿಲ್ಲಾ ಕಲಾ ಅಂದ ಯಂಕ, ಏನ್ಲಾ ಅಂಗಂದ್ರೆ, ಏನಿಲ್ಲಾ, ಅಂಗಾರೆ ನಿಮ್ಮ ಅತ್ತೆ ಮಗಳು ಕಮಲಿನಾ ಮದುವೆ ಆಯ್ತಾ ಇದೀಯಾ ಅಂತ ಆತು, ಇಲ್ಲ ಕಲಾ, ಕಮಲಿ ಡಿಪ್ಪರ್ ಅಂಗೇ ಒಂದು ಸೈಡ್ ಬ್ಲೇಡ್ ಸೆಟ್ ಹೋಗೈತೆ ಕಲಾ ಅಂದ ಸಿದ್ದ. ಅಂಗಂದ್ರೆ ಏನಣ್ಣಾ, ಒಂದು ಕಣ್ಣು ಕಾಣಕ್ಕಿಲ್ಲಾ, ಅಂಗೇ ಒಂದು ಕಾಲು ಹೋಗೈತೆ, ಪೋಲಿಯೋ ಕಲಾ ಅಂದ ಸಿದ್ದ. ಮತ್ತೆ ಯಾರನ್ನ ನೋಡಕ್ಕೆ ಹೋಯ್ತಾ ಇದೀಯಾ ಅಂದ ಯಂಕ, ನೋಡ್ಲಾ, ನಾನು ನೋಡಕ್ಕೆ ಅಂತ ಹೋಗ್ತೀರೋ ಹೆಣ್ಣು, ಇಲ್ಲೇ ಜಡೆಮಾಯಿಸಂದ್ರದಾಗೆ ಐತೆ, ಹೆಸರು ರಂಗಿ ಅಂತಾ, ಡಿಸ್ಕೊಸಾಂತಿ ಕಣ್ಣು, ಸಿಲ್ಕ್ ಸ್ಮಿತಾ ತುಟಿ, ನರಸಿಂಹರಾಜು ಹಲ್ಲು, ಮಂಜುಮಾಲಿನಿ ಸೊಂಟ, ದೊಡ್ಡಣ್ಣನ ಕಾಲು ಅಂಗೆ ಐತೆ ಕಲಾ ಅಂದ ಸಿದ್ಗ. ಅಂಗಾರೆ ಹಿಂದಿ ಕನ್ನಡ ರೀಮಿಕ್ಸ್ ಆಗೈತೆ ಅನ್ನು ಅಂದ ಯಂಕ.
ಸರಿ ಹೆಣ್ಣು ನೋಡಕ್ಕೆ ಅಂತ ನಮ್ಮನ್ನೂ ಕರ್ಕಂಡು ಹೊಂಟ, ಬೆಳಗ್ಗೆ ಬೆಕ್ಕು ಅಡ್ಡ ಬಂದೈತೆ ಅಂತಾ ಸಿದ್ದನ ಅವ್ವ, ಸಿದ್ದಂಗೆ ನಾಲ್ಕು ಕಿತಾ ತಣ್ಣೀರ್ನಾಗೆ ಸಾನ ಮಾಡಿಸಿದ್ರು, ಮಗಾ ಸೂರ್ಯನ್ನ ನೋಡ್ತಿದ್ದಾಗೆನೇ ಆಕ್ಸಿ ಅನ್ನೋನು. ಯಾಕ್ಲಾ ಅಂದ್ರೆ, ಕ್ರೋಸಿನ್ ಕೊಡ್ರಲಾ ಅನ್ನೋನು. ಸರಿ ವ್ಯಾನ್ನಾಗೆ ಎಲ್ಲಾರೂ ಹೊಂಟ್ವಿ. ಮಗ ಡ್ರೇವರ್ ಸ್ಪೀಡಾಗೆ ಹೋಗೋನು, ಯಾಕ್ಲಾ, ನಂಗೆ ಜೀವನ ಬೇಸರ ಆಗೈತೆ ಅನ್ನೋನು,. ಅಯ್ಯೋ ಮುಂಡೇ ಮಗನೆ ನಾವು ಬಾಳಿ ಬದುಕಬೇಕು ನಿಧಾನಕ್ಕೆ ಹೋಗ್ಲಾ ಅಂತು ಸಿದ್ದನ ಅವ್ವ ರಾಜಮ್ಮ, ಮಗಂದು 7ಸೀಟ್ ಕೆಪಾಸಿಟಿ, 15ಜನ ಕುಂತಿದ್ವಿ, ಪೊಲೀಸ್ನೋರು ನಕ್ಸಲೈಟ್ ಅಂತ ಟೇಸನ್್ಗೆ ಕರ್ಕಂಡು ಹೋಗಿ ದಂಡ ಹಾಕಿದ್ರು.,ಎಲ್ಲಾರೂ ತಲೆನೂ ಕಿಟಕಿಯಿಂದ ಹೊರಗೆ, ಹೆಣ್ಣಿನ ಮನೆ ಬರೋ ಹೊತ್ತಿಗೆ, ಎಲ್ಲಾರೂ ಸೋಮಾಲಿಯಾದೋರು ತರಾ ಆಗಿದ್ವಿ, ಯಾಕೇಂದ್ರೆ ತಂಡಿ ಗಾಳಿ ಆಟೋಂದು ಇತ್ತು. ಸರಿ ಹೆಣ್ಣಿನ ಮನೆ ಬಂತು, ಎಲ್ಲಾರೂ ಇಳಿದ್ವಿ. ಏನ್ರಪ್ಪಾ ನಿಮಗೆ ಹಂದಿ ಮಾಂಸ ಬೇಕೋ ಇಲ್ಲಾ ಕತ್ತೆ ಮಾಂಸ ಬೇಕೋ ಅಂದ್ರು ಹೆಣ್ಣಿನ ಮಾವ, ಯಾಕೆ ಸಾ, ನೀವೆಲ್ಲಾ ಆಫ್ರಿಕಾದೋರು ಅಲ್ವಾ ಅಂದ್ರು, ಏಥೂ ನಾವು ಕನ್ನಡದೋರೆ, ಕಿಟಕಿಯಿಂದ ತಲೆ ಹೊರಗೆ ಇಟ್ಟು, ಹಿಂಗೆ ಆಗೈತೆ ಅಂದ ಸಿದ್ದ.
ಸರಿ ಒಳಗೆ ಹೋದ್ರೆ, ಎಲ್ಲಾವೂ ಚಾಪೆ ಮೇಲೆ ಮಕ್ಕಳೋವು, ಯಾಕ್ರಪ್ಪಾ, ಅಣ್ಣಾ ಸೊಂಟ ನೋವ್ತಾ ಐತೆ ಅನ್ನೋವು,. ಲೇ ಹೆಣ್ಣಿನ ಮನೆ ಕಲಾ, ಹಿಂಗೆ ಮಾಡಬೇಡ್ರಲಾ ಅನ್ನೋನು ಸಿದ್ದ. ಸರಿ ಉಪ್ಪಿಟ್ಟು ಕೇಸರಿ ಬಾತ್ ಜಮಾಯಿಸಿದ್ದು ಆತು. ತಂಬಿಟ್ಟು ರಾಮ, ಆಗಾಗ ಚೊಂಬು ಮಡಿಕ್ಕಂಡು ಹೊರಕ್ಕೆ ಹೋಗೋನು, ಯಾಕ್ಲಾ, ಲೇ ರವೆ ಬೆಂದಿಲ್ಲ ಕಲಾ ಅನ್ನೋನು. ಸಿದ್ದನ ಅಪ್ಪ ನಾಲ್ಕು ಡಯಾಬಿಟೀಸ್ ಮಾತ್ರೆ ನುಂಗಿದ್ರು, ಯಾಕ್ ಸಾ. ಸಾನೇ ಸುಗರ್, ಬೆಲ್ಲ ಹಾಕಿ ಮಾಡವ್ರೆ ಅಂದ್ರು.
ಸರಿ ಹೆಣ್ಣು ಬಂತು,. ಸಿದ್ದ ಹೇಳಿದಂಗೆ ಇತ್ತು. ಟೇಪ್ ಇಟ್ಟು ಅಳತೆ ಮಾಡ್ಲಿಲ್ಲ ಆಟೆಯಾ ಅಂದ ನಾಗ.
ಸರಿ ಹೆಣ್ಣು ಕಾಫಿ ತಗೊಂಡು ಬಂತು, ಬರ್ತಿದ್ದಾಗೆನೇ ಎಲ್ಲಾರ ಮೇಲೂ ಕಾಫಿ ಚೆಲ್ತು, ಹೋಗ್ಲಿ ಬುಡವ್ವಾ, ಕರೆಂಟ್ ಇಲ್ಲಾ, ಅದಕ್ಕೆ ಹಿಂಗೆ ಆಗೈತೆ ಅಂದ ಸಿದ್ದ, ಪಾಪ ಯಂಕನ ಕಾಲ್ನಾಗೆ ಸಣ್ಣ ಕೆಂಪು ಚಂಡು ಆಗಿತ್ತು. ಉಪ್ಪಿಟ್ಟು ಬಂತು ಅದೂ ಎಲ್ಲರ ಮೈಮ್ಯಾಕೆ ಬಿತ್ತು. ಅದಕ್ಕೂ ಸಿದ್ದ ಹೋಗ್ಲಿ ಬುಡವ್ವಾ ಅಂದ. ಯಾಕ್ಲಾ, ಕರೆಂಟ್ ಇಲ್ಲ ಕಲಾ.
ಏನ್ಲಾ ಇದು, ಇನ್ನೂ ಮದುವೆನೇ ಆಗಿಲ್ಲ, ಆಗ್ಲೇ ಸಿದ್ಗ ಹಿಂಗೆ ಆಡ್ತಾವ್ನೆ ಅಂತಿದ್ಲು ಸಿದ್ದನ ಅವ್ವ , ನಾನು ಹೆಣ್ಣಿನ ಕಿತಾ ಒಂದು ಐದು ನಿಮಿಸ ಮಾತಾಡ್ಬೇಕು ಅಂದ ಸಿದ್ಗ. ಹೆಣ್ಣು ಯಾಕೋ ಒಂದು ಕಾಲು ಎಳ್ಕಂತಾ ಬಂತು, ಯಾಕವ್ವಾ, ನಿನ್ನೆ ಕಾಲಿಗೆ ಹೊಡೆತಾ ಬಿದ್ದೈತೆ ಅಂತು, ಸರಿ ಸಿದ್ದನ್ನ ಅಂಗೇ ಹೆಣ್ಣನ್ನ ಒಂದು ರೂಮ್ನಾಗೆ ಬಿಟ್ವಿ,. ಹೋಗ್ತಿದ್ದಾಗೆನೇ ಚೊಂಬಿನ ಸವಂಡ್ ಆತು, ಏನ್ಲಾ ಇದು ಅಂದ ಯಂಕ, ನೋಡಿದ್ರೆ ಹೆಣ್ಣು ಕಾಲ್ನಾಗೆ ಚೊಂಬು ಬೀಳಿಸಿತ್ತು. ಸರಿ ಐದು ನಿಮಿಟ್ ಆದ್ ಮ್ಯಾಕೆ ಇಬ್ಬರೂ ಹೊರಕ್ಕೆ ಬಂದ್ರು.
ಏನ್ಲಾ ಮಾತಾಡ್ದೆ ಸಿದ್ದ. ಏನಿಲ್ಲ ಕಲಾ, ನೀನು ನಮ್ಮ ಅಪ್ಪ, ಅವ್ವನ ಸಂದಾಕೆ ನೋಡ್ಕಬೇಕು, ನಾನು ಕೆರೆತಾವ ಹೋಗಬೇಕು ಅಂದ್ರೆ ಚೊಂಬು ರೆಡಿ ಮಡಗಬೇಕು, ಬೀಡಿ ಬಾಯಿಗಿಟ್ರೆ ಬೆಂಕಿ ಕಡ್ಡಿ ಮಡಗಬೇಕು, ಎಣ್ಣೆ ಮಡಗಿದ್ರೆ, ಸೋಡಾ, ಚಿಪ್ಸ್ ಮಡಗಬೇಕು. ಬಂದೋರಿಗೆ ಟೀ ಸೋಸಬೇಕು ಅಂದೆ ಕಲಾ ಅಂದ ಸಿದ್ದ, ಅದಕ್ಕೆ ಹೆಣ್ಣು ಏನಂತಲಾ, ನೀವು ಹೇಳಿದ್ದು ಚಾಚು ತಪ್ಪದೇ ಮಾಡ್ತೀನಿ, ಆದ್ರೆ ಬೆಳಕು ಇದ್ದಾಗ ಮಾತ್ರ ಹೇಳಿ ಅಂತು ಕಲಾ ಅಂದ ಸಿದ್ದ,
ಸರಿ ಮದುವೆ ಧಾಮ್ ಧೂಮ್ ಅಂತ ಆತು. ಬಂದೋರು ಎಲ್ಲಾರೂ ಜೋಡಿ ಸೂಪರ್ ಆಗೈತೆ, ಟೆನ್ನಿಸ್ ಕೃಸ್ಣ, ರಮ್ಯಾ ಮದುವೆ ಅನ್ನೋರೆ. ಪ್ರಸಂಟೇಸನ್ ಮಾತ್ರ 200ರೂಪಾಯಿ ದಾಟಿರಲಿಲ್ಲ. ಹೆಣ್ಣಿನ ಅಪ್ಪ, ದರ್ಬೇಸಿ ಮುಂಡೇ ಮಕ್ಕಳು ಅನ್ನೋನು. ಕೊಡೋದು 20ರುಪಾಯಿ ತಿನ್ನೋರು ಮಾತ್ರ 30ಜನ. ಎಲ್ಲಾ DPS ಅಂಗಂದ್ರೆ,. ದಂಡ ಪಿಂಡ ಸೂ..ಮಕ್ಕಳು ಅನ್ನೋನು. ಏಥೂ. ಇದೇನು ಷೇರು ಬ್ಯುಸಿನೆಸ್ಸಾ, ನೀನು ಹಾಕಿದ ದುಡ್ಡಿಗೆ ವಾಪಸ್ಸು ಬರೋಕೆ, ಊಟ ಅಂತಿದ್ದಾಗೆನೇ ಛತ್ರ ಖಾಲಿಯಾಗೋದು. ಏಥೂ. ಪಾಪ ಗಂಡು, ಹೆಣ್ಣು ಮಾತ್ರ ಬೆಳಗ್ಗಿಂದ ಉಪವಾಸ ಇದ್ರು, ಸಾನೇ ಗ್ಯಾಸ್ ಅನ್ನೋನು ಸಿದ್ದ., ಪಕ್ಕದಾಗೆ ಹೋಗಕ್ಕೆ ಆಯ್ತಾ ಇರ್ಲಿಲ್ಲ, ಮಗಾ ಹಿಂದಿನ ರಾತ್ರಿ ಸಾನೇ ಚಿಕನ್ ಪೋಣಿಸಿದ್ದ, ಹೆಣ್ಣು ರಂಗಿ ಮಾತ್ರ ನಗೋದು, ಹೆಂಗವ್ವಾ ಅಂದ್ರೆ ಬೆಳಗ್ಗೆನೇ ಒಂದು 20 ಇಡ್ಲಿ ಪೊಣಿಸೀದೀನಿ ಅಂತು.
ಸರಿ ಮದುವೆ ಆತು,. ಈಗ ಸುಭರಾತ್ರಿ ಅಂತ ಹೆಣ್ಣು ರಂಗಿನಾ ಅಂಗೇ ಸಿದ್ದನ್ನ ರೂಮ್ನಾಗೆ ಬಿಟ್ವಿ. ಸಾನೇ ಸವಂಡ್ ಬತ್ತಾ ಇತ್ತು,. ಬೆಳಗ್ಗೆ 4ಕ್ಕೆ ಸಿದ್ಗ ಹೊರಿಕ್ಕೆ ಬಂದ, ಯಾಕ್ಲಾ, ಲೇ ಮೋಸ ಮಾಡವ್ರೆ ಕಲಾ ಅಂದ,. ಯಾಕ್ಲಾ ರಂಗಿ ಹೆಣ್ಣು ಅಲ್ವೇನ್ಲಾ ಅಂದ್ರೆ, ಅದು ಹೆಣ್ಣೆ ಕಲಾ, ರಾತ್ರಿ ಹೊತ್ತು ಕಣ್ಣು ಕಾಣಕ್ಕಿಲ್ಲ ಕಲಾ, ಲಾಡು ಉಂಡೆ ಅಂತ ಊದಬತ್ತಿ ನನ್ನ ಬಾಯಿಗೆ ಮಡಗಿದ್ಲು, ಜಹಾಂಗೀರ್ ಅಂತಾ ಚಪ್ಪಲಿ ಮಡಗಿದ್ಲು ಕಲಾ, ಆಮ್ಯಾಕೆ ನೀವು ಸಂದಾಗಿರಬೇಕು ಅಂತಾ, ಜಾಮೂನು ತಿನ್ನಿಸುತ್ತಾ ಇದೀನಿ ಅಂತಾ, ಚೆಂಡು ಮಡಗಿದ್ಲು ಕಲಾ ಅಂದ ಸಿದ್ದ. ಹೋಗ್ಲಿ ಬುಡ್ಲಾ ಬೆಳಗ್ಗೆ ಸುಭರಾತ್ರಿ ಮಾಡ್ಲಾ ಅಂದ ಸೀನ, ಅದು ಹೋಗ್ಲಿ ಕಲಾ ನಾನು ಬತ್ತಾ ಇದೀನಿ ಅಂತಾ, ಕುಂಟ್ಕಂದು ಓಡಿ ಬಂದು ಮಂಚಕ್ಕೆ ಹಾರ್ತಾಳೆ ಕಲಾ, ಪೋಲಿಯೋ ಕಲಾ ಅಂದ ಸಿದ್ದ, ಲೇ ಇದೆಲ್ಲಾ ಈಕ್ನೆಸ್ ಐತೆ ಅಂದಿದ್ರೆ, ನಿಮ್ಮ ಮಾವನ ಮಗಳನ್ನೆ ಮದುವೆ ಆಗಬೋದಿತ್ತು ಕಲಾ, ಒಂದು ನೂರು ಎಕರೆ ತೋಟನಾದ್ರೂ ಬಂದಿರೋದು ಅಂದ ಯಂಕ. ಏನ್ಲಾ ಬಾಯ್ನಾಗೆ ರಕ್ತ ಅಂದ ಸುಬ್ಬ,. ಲೇ ಇದು ಅವಳ ಹಲ್ಲಿನ ಎಫೆಕ್ಟ್ ಕಲಾ ಅಂದ ಸಿದ್ದ. ನಾಳೆ ಟಿಟಾನೆಸ್ ಇಂಜೆಕ್ಸನ್ ತಗೊಳ್ಳಲಾ ಮಗಾ ಅಂತಿತ್ತು ಸಿದ್ದನ ಅವ್ವ.
ಸಿದ್ದ ಈಗ ಮದುವೆ ಆದ್ರೂ ಬ್ಯಾಚುಲರ್ ಆಗವ್ನೆ, ಯಾಕ್ಲಾ ಅಂದ್ರೆ, ರಾತ್ರಿ ಒಳಿಕ್ಕೆ ಹೋದ್ರೆ, ಬಾಡಿ ಡಾಮೇಜ್ ಆಯ್ತದೆ, ಇಂಜೆಕ್ಸನ್ ಬೇಕು ಕಲಾ ಅಂತಾನೆ, ಸಿಟ್ಟು ಬಂದಾಗಲೆಲ್ಲಾ ಬ್ರೋಕರ್ ಗುಡದಪ್ಪಂಗೆ ಸಾನೇ ಹೊಡಿತಾವ್ನೆ. ಅವನನ್ನ ಕೇಳಿದ್ರೆ, ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಬೇಕು ಅಂತಾವ್ನೆ. ಈಗ ಬ್ರೋಕರ್ ಗುಡದಪ್ಪ ಬಂದ್ರೆ ಎಲ್ಲಾವೂ,ಮಗಾ, ಗುಡದಪ್ಪ ಬಂದ ಓಡ್ರೋ ಅಂತಾರೆ.
Comments
ಉ: ಸಿದ್ದನ ಮದುವೆ ವಿತ್ ಡಿಪ್ಪರ್
ಉ: ಸಿದ್ದನ ಮದುವೆ ವಿತ್ ಡಿಪ್ಪರ್