ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೮

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೮

 'ಕುರ್ಚಿ' ತನ್ನದಾಗಿಸಿಕೊಳ್ಳುವ  ಅದೆನೆನ್ನೋ ಕನಸು ಕಾಣುತ್ತ  'ದಾಪುಗಾಲಿಡುತ್ತಕಳ್ಳು 'ಕಾಳಪ್ಪನ ಕಳ್ಳು' ಅಂಗಡಿಯಕಡೆ ಹೋಗ್ತಿದ್ದ ಬೆಂಕಿ ಮುನಿಯ..

ಅಂಗಡಿ ಸಮೀಪುಸುತ್ತಿದ್ದಂತೆ  ಮೂಗಿನ ಹೊರಳೆಯಿಂದ ಸಾಗಿ  ಸ್ವಾಶಕೊಶದತ್ತ ನುಗ್ಗಿದ 'ಕಳ್ಳು' ಹುಳಿ-ಮತ್ತು ಹುರಿದ ಮೀನಿನ  ಮಿಶ್ರಿತ ವಾಸನೆ  ಬೆಂಕಿ ಮುನಿಯನ ಮೈಯಲ್ಲಿ 'ಅದೇನ್ಗೆನ್ಗೋ' ಆಗ್ವಂತೆ ಮಾಡ್ತು. ಜೇಬಲ್ಲಿ ಬಿಡಿ ಗಾಸಿಲ್ಲ , ಮಧ್ಯೆ ಕಳ್ಳಿನ ಹುಳಿ ವಾಸನೆ ಮತ್ತು  ಮೀನಿನ ಪರಿಮಳವನ್ನ -ಸ್ವಾದವನ್ನ  ಬರೀ ಮೂಗಿಂದ ಮಾತ್ರ ಆಘ್ರಾನಿಸಬೇಕೆ ನಾಇಲ್ಲ -ಇಲ್ಲ ನಾ 'ಏನಾರ ಅಇನಾತಿ ಆಯಡಿಯಮಾಡಿ  ಕಳ್ಳು  ಕುಡಿದು  ಮೀನು ತಿನ್ನಲೇಬೇಕು. ಇದಕ್ಕೆ 'ಮಿಕ' ಹುಡುಕಬೇಕಲ್ಲ:))

 

ಸುತ್ತ-ಮುತ್ತ ಕಣ್ಣಾಡಿಸಲು ಕಣ್ಣಿಗೆ ಬಿದ್ದವು ಒಂದಲ್ಲ ಎರಡಲ್ಲ 'ಮೂರು ಮಿಕಗಳು'. ಮಿಕಗಳ ಹೆಸರು  ನಾಣಪ್ಪ,ಶೀನ, ಮತ್ತು ಕರಿಯ , ಬೆಲ್ಲಗ್ಗೆಯಿಂದ  ಸಂತೇಲಿ ಮೂಟೆ ಇಳಿಸಿ  ಕೊಂಚ ಕಾಸು ಮಾಡ್ಕೊಂಡು  ಇದ್ದ ಸ್ವಲ್ಪ ದುಡ್ಡಲ್ಲೇ ಕಳ್ಳು ಅಂಗಡಿಗೆ ಬಂದು ,ಗ್ಲಾಸು ತುಂಬಾ ಕಳ್ಳು ಹುಯ್ದುಕೊಂಡು ಮೀನು ನೆನ್ಚ್ತ ಕೂತಿದ್ರು. ಅವ್ರ ಕೈಯಲ್ಲಿದ್ದ ಗ್ಲಾಸನು ಮತ್ತು ಮುಂದಿದ್ದ ಉರಿದ ಮೀನನ್ನು ಕಂಡ ಬೆಂಕಿ ಮುನಿಯಂಗೆ ಬಾಯಲ್ಲಿ 'ನೀರ್ ಊರಿತುಮನಸಲ್ಲೇ ಹೇಳ್ಕೊಂಡ - ಇವರತ್ರ  ಹಣ ಎಣಿಸಿ, ಕಳ್ಳು ಕುಡಿದು ಮೀನು ತಿಂದು  'ನನ್ನ ಕೆಲಸವನ್ನೂ' ಸಾಧಿಸಿಕೊಳ್ಳಬೇಕು...  

 

ಕಳ್ಳು ಅಂಗಡಿಗೆ 'ಬಲಗಾಲಿಟ್ಟು ಬೊ ಜತನವಾಗಿ' ಒಳ ಪ್ರವೇಶಿಸಿದ ಬೆಂಕಿ ಮುನಿಯಂಗೆ ತನ್ ಬಗ್ಗೆ ತನಗೆ ಹೆಮ್ಮೆ ಅನ್ಸ್ತುಮತ್ತೆ ಅನ್ಸ್ದೆ ಇನ್ನೇನು?    ಕಾಳಪ್ಪನ  'ಹದ್ದಿನಗಣ್ಣು' ತಪ್ಪಿಸಿಕೊಂಡು ಹೊಳಗೆ ಬರೋದ ಅಂದ್ರೆ ಸುಮ್ನೆನ? ಕಾಲಪ್ಪನೋ 'ಉದ್ರೀ' ಗಿರಾಕಿಗಳು ಅಂದ್ರೆ ಆಗಲ್ಲ.

ನಾಣಪ್ಪ,ಶೀನ, ಮತ್ತು ಕರಿಯ ಮೂವರೂ ಅದಾಗಲೇ ತಮ್ಮೊಳು ಪ್ರವೇಶಿಸಿದ್ದ  ಅರ್ಧ ಕಲ್ಲಿಗೆ ತೇಲು ಗಣ್ಣು -ಮೇಲು ಗಣ್ಣು  ಬಿಡ್ತಿದ್ರ ಅವ್ರ ಮುಂದಾಗಿ ಧೈನ್ಯತೆಯೇ  ತಾನಾಗಿ ನಿಂತ  ವ್ಯಕ್ತಿಯಾರು ಅಂತ ಅವರೆಲ್ಲ ಕಣ್ಣನ್ನು ಕಿರಿದು ಮಾಡಿ ನೋಡಿದಾಗ ಅದು ಬೇರಾರು ಅಪರ್ಚಿತರಾಗಿರದೆ  ತಮ್ಮೊರ 'ಕೊಳ್ಳಿ ಮುನಿಯ' ಅಂತ ಗೊತಾಯ್ತು ಮತ್ತು ಕೊಂಚ ದಿಗಿಲೂ ಆಯ್ತು.ಮುನಿಯನ ಹತ್ರ ನಯಾ ಪೈಸೆ  ಇರೋಲ್ಲ ಅವ್ನು ಸದಾ ಬೇರೆವರ ಬಗ್ಗೆ ಚಾಡಿ ಹೇಳ್ತಾ ಅವರತ್ರ ಇವರ-ಇವರತ್ರ ಅವರ  ವಿಷ್ಯ ಹೇಳ್  ಕಂಡೋರ್ ಮನೆಗ್ ಬೆಂಕಿ ಇಕ್ಕಿ  ತಾ ಸುಖ ಪಡೊನ್ ಇಂತವನು ಇಲ್ಲ್ಯಾಕೆ ಬಂದ? ಬಂದರೂ ತಮ್ಮನ್ನೇ ಯಾಕ್  ಧೈನ್ಯತೆಯಿಂದ ನೋಡ್ತವ್ನೆ?

ನಾಣಪ್ಪ,ಶೀನ, ಮತ್ತು ಕರಿಯ ಒಬ್ಬರ ಮುಖ ಒಬ್ಬರು ಮಿಕ ಮಿಕ ನೋಡಿದರು ಯಾರ್ಗೂ  ಬೆಂಕಿ ಮುನಿಯ ಅಲ್ಲಿಗೆ ದಯಮಾಡಿಸಿದ್ದರ  'ಗೂಡಾರ್ಥ' ತಿಳಿಯಲಿಲ್ಲ. ಕೊನೆಗೆ ತಮ-ತಮ್ಮಲ್ಲೇ- ಸಂಶಯದ ಹೋಗೆ ಎದ್ದಿತು, ಶೀನ ಕರೆಸಿರಬಹುದ?ನಾಣಿ ಕರೆದಿರಬಹುದ? ಕರಿಯನ ಕಿತಾಪತಿಯೇ? ತಾ ಬಂದು ಎಸ್ತೋತ್ತಾದರೂ  'ಅವರ್ಯಾರು' ಕೇರೇ  ಮಾಡದೆ ,ಕ್ಯಾರೆ ಅನ್ನದೆ  ತಮ್ಮ-ತಮ್ಮಗಳ ಮುಖ  ನೋಡ್ತಿರೋದು  ನೋಡ್ ಮುನಿಯಂಗೆ  ಮೈ ಉರೀತು, ಬಡ್ಡಿ ಮಕ್ಳು ಬಾ ಕೂತ್ಕೋ ವಸಿ ಕುಡಿ -ತಿನ್ನು ಅಂದ್ರೆ ಏನ್ ತಾತನ ಮನೆ ಗಂಟಾ  ಹೋಗ್ತೆ? ಇರ್ಲಿ ನಂಗೂ 'ಟೈಮು' ಅಂತ ಬರ್ತೆ ಆಗ್ ನೋಡ್ಕೋತೀನಿ.

 

ಯಾಕ್ರ್ಲ ಹಂಗ್ ನೋಡೀರಿ? ನಾ ಕನ್ಳಲೇ  ಮುನಿಯ  ನಿಮ್ತಾವ ಕೊಂಚ ಕೆಲಸ ಇತ್ತು ಅದ್ಕೆ ಬಂದೆಆಶ್ಚರ್ಯಗೊಂಡ  ನಾಣಿ  ಮುನಿಯನ ಮಾತನ್ ಅರ್ಧದಲ್ಲೇ ಕತ್ತರಿಸಿ ಕೇಳಿದ -ಏನು ನಮ್ತಾವ ನಿನ್ನ ಕೆಲಸವೇ? ನನ್ಗೊತಿರೋ ಹಾಗ್ ನೀ ಯಾವತ್ತು 'ಮೈ ಬಗ್ಗ್ಸಿಸ್' ಬೆವ್ರರಿಸಿ  ದುಡಿದದ್ದೇ ನಾ ಕಾಣೆ. ಅವ್ನ ಮಾತನ್ನ ಅರ್ಧಕ್ಕೆ ತುಂಡರಿಸಿ  ಸುಮ್ನಿರು ಅಂತೆಳಿದ ಶೀನ  ಕೇಳಿದ- ಏನ್ಲ ಮುನಿಯ ನಮ್ ತಾವ ನಿಂಗೆ ಕೆಲಸ? ಎಲ್ರೂನವೇ  ವಿಷ್ಯ ಏನು ಕೆಲಸ ಏನು ಅಂತ ಕೆಲ್ತವ್ರೆ ಆದ್ರೆ ಮುನಿಯನ್ಗೋ ಮೊದ್ಲು ಕೊಂಚ ಕಲ್ಲು ಹೀರಿ ಮೀನು ಬಾಯ್ಗಿಕ್ಕಿದರೆನೆ 'ಮಾತು ಬರೋದು' ಅನ್ನೋ ಹಾಗಿದೆ:))

 

ಮುನಿಯನ 'ಆ ಧಿವ್ಯ ಭವ್ಯ ಮೌನ'    ಕರಿಯಂಗೆ ಗೊತ್ತಾತು  ಅವ್ನು ಮೆಲ್ಲಗೆ ನಾಣಿ ಶೀನಿಯ ಬಳಿ ಸರಿ ಕಿವಿಯಲ್ಲಿ ಉಸುರಿದ  ಲೋ ಮಕ್ಳ  ಅವ್ನು ಹಂಗೆ ಸಂ ಸುಮ್ನೆ ವಿಷ್ಯ ಏನು ಅಂತ ಬಾಯ್ ಬುಡ್ತಾನ? ಅವ್ನ ಮುಖ ನೋಡಿದ್ರೆ ಗೊತ್ತಗ್ಲವೇ? 'ಬರಗೆಟ್ತವನ ಹಾಗೆ ಕಾನ್ತಿಲ್ಲ್ವೆ' ಅವ್ನಿಗ್ ಕೊಂಚ ಕಳ್ಳು ಒಳ ಸೇರಿದ್ರೆನೆಯ  ಮಾತ್ಗಲ್ ಬರ್ದು. ಅದ್ಸರೀನೆ  ಕರಿಯ ಆದ್ರೆ ವಿಷ್ಯ ಏನು ಅಂತ ಗೊತ್ತಾಗದೆ , ಅದರಿಂದ ನಮಗೆ ಯಾವದೇ ಲಾಭ ಇಲ್ದೆ  'ದಂಡದವನಿಗೆ' ಕುಡಿಸಿದರೆ ನಮ್ ಕಾಸ್ ಲಾಸಲ್ವೆ? ಅದ್ರ ಬದ್ಲಿಗ್ 'ನಾವೇ' ಕಂಟಪೂರ್ತಿ ಕುಡಿದು 'ಕಕ್ಕಿಕೊಂಡರೂ' ಅಡ್ಡಿಯಿಲ್ಲ:))

ಲೋ ಮುನಿಯ ಅದೇನ್ಲ ವಿಷ್ಯ ಹೇಳಲೇ ಇಲ್ಲ. ತಾ ಬಂದ  ಉದ್ದೇಶವನ್ನೇ ಮರ್ತು  ಕಳ್ಳು ಏರ್ಸಿ  ಕಣ್ಣು ಬಾಯಿ ಬಿಡ್ತಾ ಇದ್ದ ಮುನಿಯ ಮತ್ತೊಮ್ಮೆ ಮೈ ಕೊಡವಿ ತಲ್ಲೇ ಅಡ್ಡಡ್ಡ  ಎರಡೆರಡು ಸಾರ್ ಅಲುಗಾಡಿಸ್ದ  ದೇಹ ಮತ್ತೂ ಮಿದ್ಳು 'ಒಂದು ಹಂತಕ್ಕೆ' ತನ್ನ ಹಿಡಿತದಲ್ಲಿದೆ ಅಂತನ್ಸ್ತು ಕರಿಯ- ಶೀನ -ನಾಣಿ ಎಡೆಗೆ ನೋಡ್ತಾ  ಕುರ್ಚಿ ಹೆಂಗ್ ಸಿಕ್ತು ಏನು ಅಂತೆಲ್ಲ ಪುರಾಣ ಹೇಳಿ  ಈಗ ಅದ್ನ ಎತ್ತಾಕೊಂಡು ಬಂದ್ರೆ ಮತ್ತದು ವಿಶೇಷವಾಗಿ ಕೆತ್ತನೆ ಮಾಡಿದ  ಕುರ್ಚಿ ಆದುದರಿಂದ  ಅದ್ನ ಯಾರ್ಗಾರ ಒಳ್ಳೆ ರೇಟಿಗೆ  ಮಾರಿದರೆ  ಕಾಸು ಮಾಡಿಕೊಳ್ಳಬಹುದು ಅಂದ.

ಬೇರಿನ್ನೇನೋ ಕೆಲಸ ಹೇಳ್ತವ್ನೆ  ಅನ್ಕಂಡಿದ್ದ ನಾಣಿ ಶೀನ ಕರಿಯಂಗೆ, ಈ ಮುನಿಯ ಈ ತರ್ಹದ್ದನ್ನ ,ಅದೂ ಕದ್ದು ಎತ್ತಾಕೊಂಡು ಬಂದು ಮಾರೋದನ್ನ ಹೇಳಬಹುದು ಎನ್ನುವ ಕಲ್ಪನೆಯೇ ಇರಲಿಲ.... ಒಬ್ಬರ ಮುಖ ಒಬ್ಬರು ನೋಡುತ್ತಾ ಒಂದೈದು ನಿಮಿಷ 'ಮೌನ ವ್ರತ'  ಮಾಡಿ ಕೊನೆಗೆ ಕರಿಯ ಬಾಯ್ ತೆಗೆದ, ಅಲ್ಲ ಕಣ್ಲ ಮುನಿಯ ನೀ ಅದೇನೋ ಹೇಳ್ತಿಯ- ಕೆಲಸ ಕೊಡ್ತಿಯ ಅಂಕನ್ದ್ರೆ ನೀ ಹೊಗೊಗ್ ಯಾವ್ದೋ  ಕುರ್ಚೆನ ಎತ್ತಕೊಂಡ್ ಬಾರೋ 'ಮನೆ ಹಾಳ್ ಆಯಡಿಯ'  ಕೊಡ್ತೀಯ?  ಹೊಗೊಗ್ ನಾವಿದ್ನ ಮಾಡೋಲ್ಲ.

ಮುನಿಯಂಗೆ ದಿಗಿಲಾಯ್ತು ಅಲ್ಲ  ಇನ್ನೇನು 'ಕೈಗೆ ಬಂದ ತುತ್ತು ಬಾಯ್ಗಿಲ್ಲವಲ್ಲ' ಅನ್ನೋ ಹಾಗ್ ಆಯ್ತು. ಇಲ್ಲ ಹೆಂಗಾರ ಮಾಡ ಇವರನ ಒಪ್ಪಿಸ್ಲೆಬೆಕ್ ಕುರ್ಚಿ ಪಟಾಯಿಸೋದು    ತನ್ನೊಬ್ನಿಂದಾಗೋ ಕೆಲ್ಸವಲ್ಲ  ಅದ್ಕೆ ಇವರೆಲ್ಲರ 'ಸಹಕಾರ' ಮುಖ್ಯ. ಲೋ ಕರಿಯ ನಾಣಿ ಶೀನಿ ಅದೇನು 'ಕಳ್ಳತನವಲ್ಲ್ಲ' ಕನ್ರಲೇ  ಮೊದ್ಲೇ ಆ 'ಬೋರನ ತಂದೆಗೆ ' ಆ ಕುರ್ಚಿ ಮನೆಲಿರೋದು ಇಷ್ಟವಿಲ್ಲ  ಅದು ಹೊರಗಡೆ ಹೋದ್ರೆ ಸಾಕ್ ಅಂತವ್ರೆ ಹೀಗಾಗ್ ನಾವ್ ಅದ್ನ ತಗೊಂಡ್ ಬಂದ್ರೆ ಅವ್ರ್ಗೆನು ನಸ್ಟವಿಲ್ಲ. ಅವ್ರು ಅದ್ರ ಬಗ್ಗೆ ತಲೇನೂ ಕೆಡಿಸ್ಕೊಳ್ಲ.

ಅದು ಕೊಂಚ ಭಾರವಾಗಿರೋದ್ರಿಂದ ನೀವ್ ಕೊಂಚ ಸಾಥ್ ಕೊಟ್ರೆ ಅದ್ನ  ಮಾರ್ ಕೊಂಚ ಕಾಸು ಸಂಪಾದಿಸಬಹುದು  ನಿಮಗೂ ಕಾಸು ಪಾಲು ಕೊಡ್ತೀನ್ ಕಣ್ರೋ.  ಮೂವರ್ಗೂ ಅನ್ಸ್ತು ಆಹಾ! ಏನ್ ಆಇನಾತಿ ನನ್ಮಗ 'ಪಾಲು ಕೊಡ್ತಾನಂತೆ 'ಯಾರದೋ ದುಡ್ಡು ಎಲ್ಲಮ್ಮನ್ ಜಾತ್ರೆ' ಮೂವರ್ಗೂ  ಈಗ ನಿರಾಳವಾಯ್ತು, 'ಅವ್ರಿಗೆ' ಆದ ಬೇಡ ಅಂದ್ರೆ ಅದ್ನ ನಾವ್ ಎತ್ಕೊಂಡ್ ಬಂದ್ರೆ  ಯಾರ್ಗೆನ್ ನಸ್ಟ? ಯಾವುದ್ಕೂ ನಾವ್ ಕೊಂಚ ಹುಶಾರಗಿರ್ಬೇಕ್ ಈ ಕೊಲ್ಲಿ ಮುನಿಯನ್ನ ನಂಬೋ ಹಾಗಿಲ್ಲ ನಮ್ಗೆನಾರ  'ಉಂಡೆ ನಾಮ' ತಿಕ್ಕೊಕ್ ಬಂದ್ರೆ ಇವಂಗೆ ಸರ್ಯಾದ್ ಶಾಸ್ತಿ ಮಾಡ್ಬೇಕ್,

 

ಸ್ಸರೀ ಅದ್ನ ಯಾವಾಗ್ ಹೋಗ ಹೇಗ್ ಎತ್ತಕೊಂಡ್ ಬಂದು ಎಲ್ಲಿ ಬಚ್ಚಿಡ್ಬೇಕು? ಅದ್ನ ತರ್ವಾಗ ಯಾರಾರ ನೋಡಿದ್ರೆ? ಅದ್ನ ಎಲ್ಲಿ ಯಾರ್ಗೆ ಮಾರ್ತೀಯ? ಅನ್ದಾಜು ಎಷ್ಟು ಕಾಸು ಸಿಗಬಹುದು? ಈ ವಿಷ್ಯ ನಮ್ ೪ ಜನಕ್ಕಸ್ತೆ ಗೊತ್ತು ಒಂದ್ವೇಳೆ ಯಾವನಾರ 'ದುರಾಸೆಗ್' ಬಿದ್ದು ಯಾರತ್ರನಾರ ಬಾಯ್  ಬಿಟ್ರೆ? ಪುನ್ಖನುಪುನ್ಕವಾಗ್  ಬಂದ ಮೂವರ  ಆ 'ಸಂಶಯ ಪೂರಿತ ಪ್ರಶ್ನಾಸ್ತ್ರಗಳಿಗೆ ' ತತ್ತರಿಸಿದ  ಮುನಿಯ 'ಈ ಬಡ್ಡಿ ಮಕ್ಳು'ಕೆಲಸದ ಬಗ್ಗೆ ಯೋಚಿಸದೆ ಬರೀ 'ಅಪಶಕುನದ' ಮಾತೆ ಆದ್ತವ್ರಲ್ಲಪ  ಶಿವನೆ, ಇಂತವ್ರ್ಣ ಕರ್ಕೊಂದೊಗ್  ನಾ ಕುರ್ಚಿ ಎತ್ಕೊಂಡ್ ಬಂದು  ಕಾಸು ಮಾಡ್ಕೊಳ್ತೀನ?

ನೋಡ್ರಲ  ನೀವೇನು ವರಿ ಮಾಡ್ಕೊಬ್ಯಾಡಿ  ನಾ ಇದ್ದೀನಿ ,ಎಲ್ಲವನ್ನು ನಂಗ್ ಬಿಡಿ ನೀವೆನಿದ್ರು ಅದ್ನ ಹೊರಗಡೆ ತರೋದ್ರ ಬಗ್ಗೆ ಮಾತ್ರ ಯೋಚ್ಸಿ  ಬಾಕಿ ಎಲ್ಲ ನಾ ನೋಡ್ಕೊಳ್ತಿನ್.

 

ಇವತ್ತು ರಾತ್ರಿ ಹನ್ನ0ದು ಮುಕ್ಕಾಲ್ ಗೆ ಬೋರನ ಮನೆ ಹತ್ರ ನೀವೆಲ್ಲ ಕಪ್ಪು ಬಟ್ಟೆ ಹಾಕೊಂಡ್ ಮುಖ ಮುಚ್ಕೊಂಡು ಬನ್ನಿ   ಹಾಗಾದ್ರೆ ಮಾತ್ರ ನಮ್ನ ಯಾರೂ ನೋಡಲ್ಲ ಗುರ್ತಿಸೋಲ್ಲ. ಕುರ್ಚಿ ಕೊಂಚ 'ಭಾರವೇ' ಇದೆ ಹೀಗಾಗ್ ಅದ್ನ ಹುಶಾರಾಗ್ ಎತ್ಕೊಂಡ್ ಹೊರಗಡೆ ತರ್ಬೇಕ್ ಆದ ನಿಮ್ ಜವಾಬ್ಧಾರಿ  ಯಾವದೇ ಕಾರಣಕ್ಕೂ ಬೋರಂಗೆ ಎಚ್ಚರ್ವಾಗ್ಬಾರ್ದು  ಅವ್ನು ಸದಾ ಅದರ್ ಅಪಕ್ಕದಲ್ಲೇ ಮಲ್ಗಿರ್ತನೆ. ಅಲ್ಲಲ್ಲಿ ನಾಯಿಗಳು ಮಲಗಿರ್ತವೆ ಅವುಗಳ ಬಗ್ಗೆನೂ ಬೊ ಜಾಗ್ರತೆಯಿಂದಿರ್ಬೇಕ್  ಅಪ್ಪಿ ತಪ್ಪಿ ಅವೆನಾರ ಬೊಗಳಿದರೆ ಕೆಲಸ ಕೆಡ್ತೆ. ನಾ ನಿಮ್ನ  ರಾತ್ರಿ ಹನ್ನೊಂದು ಮುಕ್ಕಲ್ಗೆ ಬೋರನ ಮನೆ ಹತ್ರ ಬಂದ್ ಸೇರ್ತೀನ್.

ಕಾಳಪ್ಪನ ಕಳ್ಳು ಕುಡಿದ ಕಾಸು ಕೊಟ್ಟು ಹೊರ ನಡೆದರೂ ನಾಲ್ವರು. ಈಗ 'ಬಡ ಬೋರನ' ಮನೆಗೆ  'ಲೋಕೆಸನ್'  ಶಿಫ್ಟ್ ಆಗಿದ್ದು ,ಅಲ್ಲಿ ಇವತ್ತು ರಾತ್ರಿ ಕುರ್ಚಿ 'ಎತ್ತಕೊಂಡ್' ಹೋಗೋ ಪ್ರೋಗ್ರಾಮ್ ಇದೆ....

 

ಓವರ್ ಟು  ಬಡ ಬೋರಾಕಿ ಘರ್...

 

ಪಿಕ್ಚರ್ ಅಭಿ ಬಾಕಿ ಹೈ...


Comments